ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿ ಸಂಬಂಧ: ಚೀನಾ ಆಶಯ

Last Updated 8 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/­ಐಎಎ­ನ್‌ಎಸ್): ಭಾರತದ ಹೊಸ ಸರ್ಕಾರದ ಜತೆ ರಾಜಕೀಯ ಸಂಬಂಧ ಬೆಳೆಸಲು ಚೀನಾ ತುದಿಗಾಲ ಮೇಲೆ ನಿಂತಿದೆ. ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಆಶಯದಿಂದ  ಇಲ್ಲಿಗೆ ಬಂದಿರುವ ಚೀನಾ ವಿದೇಶಾಂಗ ಸಚಿವ ವಾಂಗ್‌ಯಿ ಅವರು ವಿದೇ­ಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌್ ಅವರೊಂದಿಗೆ ಭಾನುವಾರ ಸುದೀರ್ಘ ಮಾತುಕತೆ ನಡೆಸಿದರು.

ಎನ್‌ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೊಟ್ಟ ಮೊದಲ ಉನ್ನತ ಮಟ್ಟದ ಮಾತುಕತೆ ಇದಾಗಿದೆ.

ವ್ಯಾಪಾರ ಹಾಗೂ ಹೂಡಿಕೆ ಸೇರಿ­ದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪರ­ಸ್ಪರ ಸಹ­ಕಾರ ಬಲವರ್ಧನೆಯ ಮಾರ್ಗೋ­ಪಾ­ಯಗಳ ಬಗ್ಗೆ ಉಭಯ ನಾಯ­ಕರು ಸಮಾಲೋಚನೆ ನಡೆಸಿ­ದರು.

ಗಡಿ ವಿವಾದ, ಅಕ್ರಮ ಒಳನು­ಸು­ಳುವಿಕೆ, ಭಾರತದ ಕೆಲವು ಪ್ರದೇಶಗಳ ಜನರಿಗೆ ಪ್ರತ್ಯೇಕ ಹಾಳೆಯ ಮೇಲೆ ವೀಸಾ ನೀಡುವಿಕೆ, ಬ್ರಹ್ಮಪುತ್ರಾ ನದಿಗೆ ಅಣೆ­ಕಟ್ಟೆ ನಿರ್ಮಾಣ ಹಾಗೂ ಚೀನಾದ ಬಂಡ­ವಾಳ ಹೂಡಿಕೆ ವೃದ್ಧಿ...ಇತ್ಯಾದಿ ವಿಷಯಗಳು ಉಭಯ ನಾಯಕರ ಮಾತುಕತೆ­­ಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾದವು ಎನ್ನಲಾಗಿದೆ.

ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್‌್ ಅವರ ವಿಶೇಷ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿ­ರುವ ವಾಂಗ್‌್ ಅವರು, ಮೋದಿ ಸರ್ಕಾರ­ವನ್ನು ಹಾಡಿ ಹೊಗಳಿದ್ದಾರೆ.

‘ಭಾರತದಲ್ಲಿನ ಬದಲಾವಣೆಯನ್ನು ಅಂತರರಾಷ್ಟ್ರೀಯ ಸಮುದಾಯ ಸೂಕ್ಷ್ಮ­ವಾಗಿ ಅವಲೋಕಿಸುತ್ತದೆ. ಚೀನಾ ಹಾಗೂ ಭಾರತದ ಆಕಾಂಕ್ಷೆಗಳಲ್ಲಿ ಅನೇಕ ಸಾಮ್ಯತೆಗಳಿವೆ’ ಎಂದು ವಾಂಗ್‌  ಹೇಳಿದ್ದಾರೆ.

ಫಲಪ್ರದ ಮಾತುಕತೆ:  ‘ಸುಷ್ಮಾ ಹಾಗೂ ವಾಂಗ್‌್ ನಡುವೆ ಸೌಹಾರ್ದ­ಯುತ ಹಾಗೂ ಫಲಪ್ರದ ಮಾತುಕತೆ ನಡೆ­ಯಿತು’ ಎಂದು ವಿದೇಶಾಂಗ ವ್ಯವ­ಹಾರ ಸಚಿವಾಲಯದ ವಕ್ತಾರ ಸೈಯದ್‌್ ಅಕ್ಬರು­ದ್ದಿನ್‌್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕ್ರಾಂತಿಕಾರಕ ಕಾರ್ಯಸೂಚಿ
ನವದೆಹಲಿ: ನೆರೆಯ ಚೀನಾ­ದೊಂದಿಗೆ ಪೈಪೋಟಿ ಎದುರಿಸಲು ಅಭಿವೃದ್ಧಿಯ ಕೌಶಲ, ಪ್ರಮಾಣ ಮತ್ತು ವೇಗಕ್ಕೆ ಒತ್ತು ನೀಡ­ಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT