ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಪಾಕ್ ಷೆಲ್ ದಾಳಿ

Last Updated 30 ಜನವರಿ 2015, 11:49 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ) : ಪಾಕಿಸ್ತಾನಿ ಸೈನಿಕರು ಜಮ್ಮು– ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯ ಹೊರಭಾಗದಲ್ಲಿ ಅಡಗಿಕೊಂಡು ರಾತ್ರಿ ವೇಳೆ ಗಡಿ ಭಾಗದ ಹಳ್ಳಿಗಳ ಮೇಲೆ ಸತತವಾಗಿ ಗುಂಡು ಮತ್ತು ಮೋಟಾರ್‌ ಷೆಲ್‌  ದಾಳಿ ನಡೆಸುತ್ತಿದ್ದಾರೆ.

ಪಾಕ್‌ ದಾಳಿಗೆ ಭಾರತದ ಗಡಿ ಭದ್ರತಾ ಪಡೆಯ ಯೋಧರು ತಕ್ಕ ಉತ್ತರವನ್ನು ನೀಡಿದ್ದಾರೆ. ಜಮ್ಮು ಜಿಲ್ಲೆಯ ಅರ್ನಿಯ, ಆರ್‌.ಎಸ್‌.ಪುರ ಸೆಕ್ಟರ್‌ಗಳಲ್ಲಿರುವ ನಾಗರಿಕರ ಮೇಲೆ ಪಾಕಿಸ್ತಾನಿ ಸೈನಿಕರು ಗುಂಡಿನ ದಾಳಿ, ಷೆಲ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಗಡಿ ಪ್ರದೇಶಗಳಿಂದ ಜನರನ್ನು ಇದುವರೆಗೂ ಸ್ಥಳಾಂತರ ಮಾಡಿಲ್ಲ ಜನರ ಮೇಲೆ ನಾವು ತೀವ್ರವಾದ ನಿಗಾವನ್ನು ಇಟ್ಟಿದ್ದೇವೆ. ಗ್ರಾಮದ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಪಾಕಿಸ್ತಾನಿ ಸೈನಿಕರು ಜೋರಾ ಫಾರ್ಮ್, ಅರ್ನಿಯಾ  ಮುಂತಾದ ಪ್ರದೇಶಗಳ ಮೇಲೆ ನಡೆಸಿರುವ ಮೋಟಾರ್‌ ಷೆಲ್‌ ದಾಳಿಗೆ ಮೂವರು ಗಾಯಗೊಂಡಿದ್ದಾರೆ. ಘಟನೆಯಿಂದ ಭಯಭೀತರಾದ ಜನ ತಮ್ಮನ್ನು ರಕ್ಷಿಸಿಕೊಳ್ಳಲು ರಾತ್ರಿ ವೇಳೆ ಮನೆಯ ದೀಪಗಳನ್ನು ಆರಿಸುತ್ತಿದ್ದರು.

ಪಾಕಿಸ್ತಾನಿ ಸೈನಿಕರು ಕಳೆದ ಒಂದು ವಾರದಿಂದ ಗುಂಡಿನ ದಾಳಿಯನ್ನು ನಡೆಸುತ್ತಲೇ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT