ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: ಅದೇ ರಾಗ

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪ್ರಜಾವಾಣಿಯ ‘ಅಭಿಮತ’ ಪುಟದ  ‘50 ವರುಷಗಳ ಹಿಂದೆ’ ಅಂಕಣದಲ್ಲಿ (ಆ. 11) ಬೆಳಗಾವಿ ಗಡಿ ವಿಚಾರದಲ್ಲಿ ಅಂದಿನ ಮೈಸೂರು ರಾಜ್ಯದ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಪಡಿಸಿರುವುದು (ಗಡಿ ವಿವಾದವನ್ನು ಮತ್ತೆ ಎತ್ತಬಾರ­ದೆಂದು) ಕೇವಲ ಸುದ್ದಿಯಾಗಿರದೇ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

50 ವರುಷಗಳ ಬಳಿಕವೂ ಗಡಿ ವಿವಾದಕ್ಕೆ ಪೂರ್ಣ ವಿರಾಮ ಹಾಕದೇ  ಗಡಿನಾಡಿನಲ್ಲಿ ಪದೇ ಪದೇ ಉದ್ವಿಗ್ನ  ವಾತಾವರಣ ಉಂಟಾಗಲು ಆಸ್ಪದ ನೀಡುತ್ತಿರುವ  ರಾಜ ಕಾರಣಿಗಳಿಗೆ ಈ ನಾಡಿನ ಒಟ್ಟಾರೆ ಹಿತದ  ಬಗ್ಗೆ ಇರುವ ಕಾಳಜಿಯನ್ನು ಇದು ಬಿಂಬಿಸುತ್ತದೆ.

ಬಹುಶಃ ಇನ್ನೂ 50 ವರುಷಗಳು ಕಳೆದರೂ, ಪ್ರಜಾವಾಣಿ­ಯಲ್ಲಿ ‘100 ವರುಷಗಳ ಹಿಂದೆ’ ಎಂಬ ವಿಶೇಷ ಅಂಕಣದಲ್ಲಿ ಮತ್ತೆ ಇದೇ ವಿಚಾರ ಪ್ರಸ್ತಾಪ­ವಾದರೂ ಅತಿಶಯೋಕ್ತಿ ಏನಲ್ಲ. ಇನ್ನಾದರೂ ನಮ್ಮ ನಾಯಕರು ಇಂತಹ ವಿವಾದಗಳಿಗೆ ಕೊನೆ ಹಾಡಬೇಕು. ಉದ್ವೇಗದ ಮಾತುಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT