ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವು ಮುಗಿದರೂ ಬಾರದ ಸಂದೇಶ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಟೋಕಿಯೊ (ಎಪಿ): ಉಗ್ರವಾದಿ ಮಹಿಳೆಯ ಬಿಡುಗಡೆಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ವಿಧಿಸಿದ್ದ ಗಡುವು ಮುಗಿದಿದ್ದರೂ ಅವರಿಂದ ಯಾವುದೇ ಸಂದೇಶ ಬಂದಿಲ್ಲ. ಇದರಿಂದ ಒತ್ತೆಯಾಳುಗಳಾಗಿರುವ ಹವ್ಯಾಸಿ ಪತ್ರಕರ್ತ ಜಪಾನಿ ಕೆಂಜಿ ಗೊಟೊ  ಮತ್ತು ಪೈಲಟ್ ಕಸಸ್‌ಬೆಹ್‌ ಅವರ ಕುಟುಂಬಗಳು ಆತಂಕದಲ್ಲಿವೆ.

ಜೋರ್ಡಾನ್‌ನಲ್ಲಿ ಬಂಧನದಲ್ಲಿ­ರುವ ಇರಾಕ್ ಮೂಲದ ಉಗ್ರಗಾಮಿ ಸಾಜಿದಾ ಅಲ್‌ ರಿಶಾವಿ ಬಿಡು­ಗಡೆಗೆ ಐಎಸ್‌ ಉಗ್ರರು ಗುರುವಾರದವರೆಗೂ ಗಡುವು ನೀಡಿದ್ದರು. ಪೈಲಟ್‌ ಸುರಕ್ಷಿತ­ವಾಗಿದ್ದಾರೆ ಎಂಬುದಕ್ಕೆ ಉಗ್ರರು ಇನ್ನೂ ಪುರಾವೆ ಒದಗಿಸಿಲ್ಲ ಎಂದು ಜೋರ್ಡಾನ್‌ ಸರ್ಕಾರ ಹೇಳಿದೆ.  

ಒತ್ತೆಯಾಳು ಕೆಂಜಿ ಗೊಟೊ ಅವರ ಬಿಡುಗಡೆಗೆ ಜೋರ್ಡಾನ್‌ ಸಹಕಾರ ನೀಡಲಿದೆ ಎಂಬ ವಿಶ್ವಾಸವನ್ನು ಸರ್ಕಾರದ ವಕ್ತಾರ ಯೊಶಿಹಿದೆ ಸುಗಾ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಗುರುವಾರ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗೊಟೊ ಅವರ ಪತ್ನಿ ರಿಂಕೊ ಜೊಗೊ, ಪತಿಯ ಬಿಡು­ಗಡೆ ಬಗ್ಗೆ ಆತಂಕದಲ್ಲಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT