ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಡಕ್ಕೆ ನೀಡಿ ಹೊಸ ಲುಕ್...

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಣ್ಣು ರೆಪ್ಪೆ, ಹುಬ್ಬು, ಕೆನ್ನೆ, ತಲೆಕೂದಲು, ಕಿವಿಯೋಲೆ, ಮೂಗುತಿ, ತುಟಿ ಬಣ್ಣ.. ಅಬ್ಬಾ, ಹೆಣ್ಣಿಗೆ ತನ್ನ ಸೌಂದರ್ಯವನ್ನು ವ್ಯಕ್ತಪಡಿಸಲು ಎಷ್ಟೆಲ್ಲ ದಾರಿಗಳಿವೆ.

ಆದರೆ ಪುರುಷ ಈ ವಿಷಯದಲ್ಲಿ ಮಹಿಳೆಯಷ್ಟು ಅದೃಷ್ಟವಂತನಲ್ಲ. ಅವನಿಗೆ ತನ್ನ ಮುಖದ ಸೌಂದರ್ಯವನ್ನು ರೂಪಿಸಿಕೊಳ್ಳಲು ಇರುವ ಅವಕಾಶಗಳು ಕಮ್ಮಿ. ಆದರೆ ಅವನಿಗೂ ತನ್ನನ್ನು ತಾನು ಸಾಧ್ಯವಾದಷ್ಟೂ ಸುಂದರವಾಗಿ ಭಿನ್ನವಾಗಿ ಬಿಂಬಿಸಿಕೊಳ್ಳಬೇಕು ಎಂಬ ಹಂಬಲ ಇದ್ದೇ ಇರುತ್ತದಲ್ಲ. ಈ ಹಂಬಲಕ್ಕೆ ಇಂಬಾಗಿ ಒದಗಿಬರುವುದು ಅವನ ತಲೆಕೂದಲು ಮತ್ತು ಗಡ್ಡ.

ಅವುಗಳಲ್ಲಿಯೂ ಬಹಳ ಪುರುಷರು ಹೇರ್‌ಸ್ಟೈಲ್‌ಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಗಡ್ಡಕ್ಕೆ ನೀಡುವುದಿಲ್ಲ. ಗಡ್ಡ ಕೂಡ ತಮ್ಮನ್ನು ತಾವು ಭಿನ್ನವಾಗಿ ಬಿಂಬಿಸಿಕೊಳ್ಳುವ ಉತ್ತಮ ಸಾಧನ ಎಂಬುದು ಅನೇಕರಿಗೆ ಗೊತ್ತೇ ಇರುವುದಿಲ್ಲ. ಆದರೆ ಇತ್ತೀಚೆಗೆ ಗಡ್ಡದ ವಿಭಿನ್ನ ಶೈಲಿ ಕೂಡ ಹೊಸ ಟ್ರೆಂಡ್‌ ಆಗಿ ರೂಪುಗೊಂಡು ಜನಪ್ರಿಯವಾಗುತ್ತಿದೆ.

ಇದರ ಬಗ್ಗೆ ನಟ ಹೃತಿಕ್‌ ರೋಷನ್‌ ಅವರ ಗಡ್ಡದ ಸ್ಟೈಲ್‌ ರೂಪಿಸಿದ ಖ್ಯಾತ ಹೇರ್‌ಸ್ಟೈಲಿಸ್ಟ್‌ ಅಸ್ಗಾರ್‌ ಸಾಬೂ ನೀಡಿದ ಕುತೂಹಲಕಾರಿ ಟಿಪ್ಸ್‌ಗಳು ಇಲ್ಲಿವೆ ನೋಡಿ.

ಜನಪ್ರಿಯ ಟ್ರೆಂಡ್‌
ಕಳೆದೊಂದು ವರ್ಷದಿಂದ ದಾಡಿಯನ್ನು ಬೆಳೆಸುವುದು ಒಂದು ಜನಪ್ರಿಯ ಫ್ಯಾಷನ್‌ ಆಗಿ ರೂಪುಗೊಂಡಿದೆ. ಜಾರ್ಜ್‌ ಕ್ಲೂನಿ, ಬೆನ್‌ ಅಫ್ಲೆಕ್‌ ಮತ್ತು ಜಾಕ್‌ ಗ್ಯಾಲೆನ್‌ ಹಾಲ್‌ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ತಮ್ಮ ಗಡ್ಡದ  ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಹಾಗೆಂದು ಅವರನ್ನು ಅನುಕರಿಸುವುದರಲ್ಲಿ ಅರ್ಥವಿಲ್ಲ. ನೀವು ರೂಪಿಸಿಕೊಳ್ಳುತ್ತಿರುವ ಗಡ್ಡದ ಶೈಲಿ ನಿಮ್ಮ ಮುಖಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದೇ ಮುಖ್ಯ. ನಿಮ್ಮ ಮುಖದ ಆಕಾರಕ್ಕೆ ಅನುಗುಣವಾಗಿ ನಿಮ್ಮ ಗಡ್ಡ ಹೇಗಿರಬೇಕು ಎಂಬುದನ್ನು ನಿರ್ಧರಿಸಿ.

ಟ್ರಿಮ್‌ ಮಾಡಿ
ಸಾಮಾನ್ಯವಾಗಿ ಆಗಷ್ಟೇ ಗಡ್ಡ ಚಿಗುರತೊಡಗಿದವರಿಗೆ ಕೂದಲುಗಳು ಅಸಮಾನವಾಗಿ ಬೆಳೆದಿರುತ್ತದೆ. ಅಂದರೆ ಕಿವಿಯ ಬಳಿ ಹೆಚ್ಚು ಕೆನ್ನೆಯ ಮೇಲೆ ಸಣ್ಣದಾಗಿ ಮತ್ತು ತುದಿ ಗಡ್ಡಕ್ಕೆ ಚೂಪಾಗಿ ಹೀಗೆ ಅಸಮಾನ ಚಿಗುರುವ ಕುರುಚಲು ಗಡ್ಡ ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಆದ್ದರಿಂದ ಆರಂಭದ ದಿನಗಳಲ್ಲಿ ಎಲೆಕ್ಟ್ರಾನಿಕ್‌ ಶೇವರ್‌ ಟ್ರಿಮ್‌ ಮಾಡುವುದು ಒಳಿತು.

ಆಕಾರಕ್ಕೆ ತಕ್ಕ ಹಾಗೆ..
ಚೌಕಾಕಾರದ ಮುಖವನ್ನು ಹೊಂದಿದವರು ಗಡ್ಡವನ್ನು ಬಿಡುವುದರಂದ ಚೌಕಾಕಾರ ಮರೆಮಾಚಬಹುದು. ಅಂತಹವರಿಗೆ ಕೆನ್ನೆಯಿಡೀ ತುಂಬುವ ಕುರುಚಲು ಗಡ್ಡ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಅವರು ನಿಯಮಿತವಾಗಿ ತಮ್ಮ ಗಡ್ಡವನ್ನು ಟ್ರಿಮ್‌ ಮಾಡಿಕೊಳ್ಳುವುದು ಉತ್ತಮ.

ದುಂಡು ಆಕಾರದ ಮುಖವಿರುವವರಿಗೆ ತುದಿಗಡ್ಡದಲ್ಲಿ ಹೆಚ್ಚು ಉದ್ದದ ಕೂದಲಿರುವಂತೆ ಮತ್ತು ಎರಡೂ ಕೆನ್ನೆಗಳ ಮೇಲೆ ಕಡಿಮೆ ಕೂದಲಿರುವ ಮಾದರಿ ಹೊಂದಿಕೊಳ್ಳುತ್ತದೆ.

ತ್ರೀಕೋನಾಕಾರದ ಮುಖ ಇರುವವರಿಗೆ ತುದಿ ಗಡ್ಡ ಹೆಚ್ಚು ಚೂಪಾಗಿರುತ್ತದೆ. ಉದ್ದವಾದ ಮತ್ತು ದಟ್ಟವಾದ ಕೂದಲುಗಳ ಗಡ್ಡ ಇವರ ಮುಖದ ಶೋಭೆ ಹೆಚ್ಚಿಸುತ್ತದೆ.

ಕಾಳಜಿ ಇರಲಿ..
ಗಡ್ಡವನ್ನು ಬೆಳೆಸುವುದಷ್ಟೇ ಅಲ್ಲ ಅದರ ನಿರ್ವಹಣೆಯೂ ಕೂಡ ಮಹತ್ವದ್ದು.
ಉದ್ದವಾದ ಗಡ್ಡ ಬೆಳೆಸುವವರು ಉತ್ತಮ ಕ್ರೀಮ್‌ಗಳ ಮೂಲಕ ಅದನ್ನು ಆರೈಕೆ ಮಾಡುತ್ತಿರಬೇಕು. ಸಿಕ್ಕಾಗದಂತೆ ಎಚ್ಚರ ವಹಿಸಬೇಕು. ಪುಷ್ಟವಾಗಿ ಬೆಳೆದ ಗಡ್ಡಕ್ಕೆ ಉತ್ತಮ ಶಾಂಪೂ ಮತ್ತು ಕಂಡೀಷನರ್‌ ಬಳಸಿ. ಇದರಿಂದ ನಿಮ್ಮ ಗಡ್ಡ ಸ್ವಚ್ಛವಾಗಿರುವುದಷ್ಟೇ ಅಲ್ಲದೇ ಒದ್ದೆ ಮುದ್ದೆಯಾಗಿ ವಾಸನೆ ಬೀರುವುದು ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT