ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಚಿತ್ತಾಕರ್ಷಕ ಗಾಳಿಪಟ

Last Updated 23 ಜುಲೈ 2014, 9:22 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಗಾಳಿ­ಪಟ ಕಲಾಸಂಘದ ವತಿಯಿಂದ ಪಟ್ಟ­ಣದಲ್ಲಿ ಸೋಮವಾರ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ನಗರದ ಮೇಘಾಂ­ಜಲಿ ಕಲ್ಯಾಣ ಮಂದಿರದ ಸಮೀಪ ನಡೆಯಿತು. ಶಾಸಕ ಟಿ. ವೆಂಕಟರಮಣಯ್ಯ ಗಾಳಿ­ಪಟ ಹಾರಿಸುವ ಸ್ಪರ್ಧೆಗೆ ಚಾಲನೆ ನೀಡಿದರು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸುಮಾರು ೧೫೦ ಸ್ಪರ್ಧಿಗಳು ಭಾಗವಹಿಸಿದ್ದರು.

ಇತ್ತೀಚೆಗೆ ದೇಶದೆಲ್ಲೆಡೆ ಹೆಚ್ಚಾ­ಗುತ್ತಿರುವ ಅತ್ಯಾಚಾರ ಪ್ರಕರಣದ ಹಿನ್ನೆ­ಲೆ­ಯಲ್ಲಿ ‘ಅತ್ಯಾಚಾರಿಗಳಿಗೆ ಶಿಕ್ಷೆ­ಯಾಗಲಿ’ ‘ಶಾಶ್ವತ ನೀರಾವರಿ ಯಾವಾಗ?’ ‘ಕತ್ತಲಲ್ಲಿ ಕರ್ನಾಟಕ’ ‘ನೇತ್ರದಾನ ಮಾಡಿ’ ‘ನೀರನ್ನು ಸಂರಕ್ಷಿಸಿ’  ಮತ್ತಿತರ ಸಂದೇಶಗಳನ್ನು ಹೊತ್ತ ನೂರಾರು ಗಾಳಿಪಟಗಳು ಗಮನ ಸೆಳೆದವು.

ಇದರೊಂದಿಗೆ ಆಂಜ­ನೇಯ ಪಟ, ಗಣೇಶ ಪಟ, ಬುಗುರಿ ಪಟ ಮುಂತಾದ ಚಿತ್ತಾಕರ್ಷಕ  ಹಾಗೂ ಸಂದೇಶ ಸಾರುವ ಗಾಳಿಪ­ಟ­ಗಳು ಮೈದಾನದಲ್ಲಿ ಸೇರಿದ್ದ ಸಹಸ್ರಾರು ನಾಗರಿಕರಿಗೆ ಮನರಂಜನೆಯ ಜೊತೆಗೆ ಸಂಭ್ರಮ, ಮುದ ನೀಡಿದವು.

ಬಹುಮಾನ ವಿತರಣಾ ಸಮಾರಂಭ­ದಲ್ಲಿ ಮಾತನಾಡಿದ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್. ಪ್ರಭುದೇವ್, ಗಾಳಿಪಟ ಕಲೆಯಲ್ಲಿ ದೊಡ್ಡಬಳ್ಳಾಪುರ ತನ್ನದೇ ಆದ ಛಾಪು ಮೂಡಿಸಿದೆ. ಜಾನ­ಪದ ಲೋಕದ ರೂವಾರಿ ಎಚ್.ಎಲ್. ನಾಗೇಗೌಡ ಅವರು ಜಾನಪದ ಕಲಾವಿದರನ್ನು, ಗಾಳಿಪಟ ಕಲೆಯನ್ನು ಉತ್ತೇಜಿಸಿದ್ದರು. ಪಾರಂಪರಿಕ ಉತ್ಸವ­ಗಳಲ್ಲಿ  ಗಾಳಿಪಟ ಹಾರಿಸುವ ಕಲೆ ಮುಖ್ಯವಾಗಿದೆ.
ಭಾವೈಕ್ಯ­ತೆಯೊಂದಿಗೆ ಕಲೆಯನ್ನು ಉತ್ತೇ­ಜಿಸುವ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿ­ರುವುದು ಶ್ಲಾಘನೀಯ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ. ವಿಜಯಕುಮಾರ್, ದೊಡ್ಡ-ಬಳ್ಳಾಪುರ ಗಾಳಿಪಟ ಕಲಾ­ಸಂಘದ ಅಧ್ಯಕ್ಷ ಎಚ್.ಸಿ. ಜಗದೀಶ್,   ಕಿಮ್ಸ್ ಅಧ್ಯಕ್ಷ ಬಿ. ಮುನೇಗೌಡ, ಅಂತರಾಷ್ಟ್ರೀಯ ಗಾಳಿ­ಪಟು ಕ್ರೀಡಾಳು ಸಂದೇಶ್‌ಗಡ್ಡಿ, ನಗರಸಭಾ ಸದಸ್ಯರಾದ ಕೆ.ಎಚ್‌. ವೆಂಕಟರಾಜು, ಎಚ್.ಎಸ್. ಶಿವಶಂಕರ್, ಕೆ.ಜಿ.ರಘುರಾಂ, ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT