ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಧಾರಣೆ ಸತ್ಯ–ಮಿಥ್ಯ

ಅಂಕುರ 44
Last Updated 8 ಮೇ 2015, 19:30 IST
ಅಕ್ಷರ ಗಾತ್ರ

ಗರ್ಭಧಾರಣೆಯ ಬಗ್ಗೆ ಜನ ಸಾಮಾನ್ಯರಲ್ಲಿ ಒಂದಷ್ಟು ನಂಬಿಕೆಗಳು ಬೇರೂರಿವೆ. ಅವುಗಳಲ್ಲಿ ತಪ್ಪು ಕಲ್ಪನೆಗಳು ಯಾವವು, ಸತ್ಯವೇನು ಎನ್ನುವುದನ್ನು ಈ ವಾರ ಅರಿಯೋಣ. ಫಲವಂತಿಕೆಯನ್ನು ನಿರ್ಧರಿಸುವ ಇನ್ನೆರಡು ಮಹತ್ವದ ಅಂಶಗಳೆಂದರೆ ಪಾನನಿಯಂತ್ರಣ ಮತ್ತು ತೂಕ ನಿಯಂತ್ರಣಗಳು.

ಪಾನ ನಿಯಂತ್ರಣ ಒಳಿತು
ನಿಯಂತ್ರಣ ಎನ್ನುವ ಪ್ರಶ್ನೆಯೇ ಹಲವಾರು ಸಂಶಯಗಳನ್ನು ಹುಟ್ಟುಹಾಕುತ್ತದೆ. ಗರ್ಭಿಣಿಯರು ಅಥವಾ ಗರ್ಭಧಾರಣೆಯನ್ನು ಯೋಜಿಸುವವರು ಮದ್ಯಪಾನವನ್ನು ತ್ಯಜಿಸಿದರೆ ಅತಿ ಉತ್ತಮ ವಾದುದು. ಆದರೂ ಇಡೀ ಅಭ್ಯಾಸವನ್ನು ನಿಯಂತ್ರಿಸಲೇಬೇಕಾದಾಗ ಸುರಕ್ಷಿತವಾದ ಪ್ರಮಾಣವನ್ನು ಸೇವಿಸಬಹುದು. ಯಾವ ಪ್ರಮಾಣ ಸುರಕ್ಷಿತ ಎಂದು ಹೇಗೆ ನಿರ್ಧರಿಸುವುದು? ಒಂದೇ ಒಂದು ಡ್ರಿಂಕ್‌ ವಾರದಲ್ಲಿ ಎರಡು ಸಲ ಮಾತ್ರ ಸೇವಿಸಬಹುದಾಗಿದೆ.

ತೂಕ ನಿಯಂತ್ರಣದಲ್ಲಿರಲಿ
ಬಂಜೆತನದ ಶೇ 12ರಷ್ಟು ಪ್ರಕರಣಗಳಿಗೆ ದೇಹದ ತೂಕವೇ ಕಾರಣವಾಗಿರುತ್ತದೆ. ಸ್ಥೂಲ ಕಾಯವಾಗಿರಬಹುದು ಅಥವಾ ಸಪೂರ ದೇಹಗುಣವೂ ಆಗಿರಬಹುದು. ಅತಿಬೊಜ್ಜು ಹಾರ್ಮೋನಿನ ಹುಟ್ಟನ್ನು ನಿಯಂತ್ರಿಸಬಹುದು. ಕಡಿಮೆ ದೇಹತೂಕವಿದ್ದಲ್ಲಿ ಹಾರ್ಮೋನಿನ ಸಮತೋಲನವನ್ನು ಕಾಪಾಡಾಲು ಆಗದು. ಬಾಡಿ ಮಾಸ್‌ ಇಂಡೆಕ್ಸ್‌ 20ರಿಂದ 25ರ ನಡುವೆ ಇದ್ದರೆ ಒಳಿತು. (ನಿಮ್ಮ ಬಿಎಂಐ ಅನ್ನು ಲೆಕ್ಕಾಚಾರ ಹಾಕಲು nhlbisupport.com/bmi ವೆಬ್‌ಸೈಟ್‌ಗೆ ಭೇಟಿ ನೀಡಬಹುದು) ಬಿಎಂಐ 29ಯೂನಿಟ್‌ಗಿಂತ ಹೆಚ್ಚಾಗಿದ್ದರೆ ಪ್ರತಿ ಯೂನಿಟ್‌ಗೂ ಶೇ 4ರಷ್ಟು ಫಲವಂತಿಕೆಯ ಪ್ರಮಾಣ ಕಡಿಮೆ ಯಾಗಿರುವುದನ್ನು ಡಚ್‌ ಅಧ್ಯಯನವೊಂದು ಪ್ರಮಾಣೀಕರಿಸಿದೆ.

ಫಲವಂತಿಕೆಯ ಬಗೆಗಿನ ಕೆಲವು ತಪ್ಪು ಕಲ್ಪನೆಗಳು ಮತ್ತು ಸತ್ಯಗಳು ಹೀಗಿವೆ
ಗರ್ಭನಿರೋಧಕ ಮಾತ್ರೆಗಳಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳು:
ಮಾತ್ರೆಗಳನ್ನು ಆರಂಭಿಸುವ ಮಾಸದ ಋತುಚಕ್ರದ ಸಂದರ್ಭದಲ್ಲಿಯೂ ಗರ್ಭಧಾರಣೆಯಾಗುವ ಸಾಧ್ಯತೆಗಳಿರುತ್ತದೆ. ಗರ್ಭನಿರೋಧಕ ಮಾತ್ರೆಗಳನ್ನು ಆರಂಭಿಸಿದ ತಿಂಗಳಿನಲ್ಲಿ ಗರ್ಭಧಾರಣೆಯಾದರೆ ಅವಳಿಗಳಾಗುವ ಸಾಧ್ಯತೆಗಳಿರುತ್ತವೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಮೊದಲಿನ ಮಕ್ಕಳು ಪರಿಪೂರ್ಣ ಆರೋಗ್ಯಪೂರ್ಣವಾಗಿರುತ್ತವೆ.

ಇವೆಲ್ಲವೂ ಗರ್ಭನಿರೋಧಕ ಮಾತ್ರೆಗಳ ಬಗೆಗಿರುವ ತಪ್ಪು ಕಲ್ಪನೆಗಳಾಗಿವೆ.
ಗರ್ಭಧಾರಣೆಗೆ ಪೊಲಿಸಿಸ್ಟಿಕ್‌ ಓವರಿಯನ್‌ ಸಿಂಡ್ರೋಮ್‌ನಿಂದ ತಡೆ ಉಂಟಾಗುತ್ತದೆ. (ಪಿಸಿಓಎಸ್‌ ಸಮಸ್ಯೆ) ಇದು ಸತ್ಯವಾಗಿದೆ.  ­­­ಇದಕ್ಕೆ ಸಿಂಡ್ರೋಮ್‌ O (ಓ) ಎಂತಲೂ ಕರೆಯಲಾಗುತ್ತದೆ. ಬಂಜೆತನಕ್ಕೆ ಅತಿ ಸಾಮಾನ್ಯವಾದ ಕಾರಣವೂ ಇದಾಗಿದೆ. ಈ ಸಿಂಡ್ರೋಮ್‌ ಹಾರ್ಮೋನಿನ ಏರುಪೇರಿನಿಂದ ಕಾಣಿಸಿಕೊಳ್ಳಬಹುದು. ಹಾರ್ಮೋನ್‌ ಉತ್ಪತ್ತಿಯಲ್ಲಾಗುವ ಏರುಪೇರು ಅಂಡಾಶಯದಲ್ಲಿ ಅಂಡಾಣು ಬಿಡುಗಡೆ ಗೊಳಿಸುವುದರ ಮೇಲೆ ಪರಿಣಾಮ ಬೀರುತ್ತದ. ಇದರ ಮುಖ್ಯ ಲಕ್ಷಣಗಳೆಂದರೆ ಅನಿಯಮಿತ ಋತುಚಕ್ರ, ಮುಖ, ಹೊಟ್ಟೆ ಹಾಗೂ ಬೆನ್ನಿನ ಮೇಲೆ ಅತಿಯಾದ ಕೂದಲು ಬೆಳೆಯುವುದು, ಹಾಗೂ ತೂಕ ಹೆಚ್ಚುತ್ತದೆ.

ಒಂದು ಮಗುವಾಗಿದ್ದರೆ ಮುಂದೆ ಬಂಜೆತನ ಕಾಡದು: ಇದು ತಪ್ಪು ಕಲ್ಪನೆಯಾಗಿದೆ. ಒಂದು ವೇಳೆ ಮೊದಲು ಮಗುವಾಗಿದ್ದರೆ ಅವರಲ್ಲಿ ಮತ್ತೆ ಗರ್ಭಧಾರಣೆ ಸಲೀಸು ಎನ್ನುವುದು ತಪ್ಪು ಕಲ್ಪನೆಯಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಪ್ರತಿ 10ರಲ್ಲಿ ಒಬ್ಬ ಮಹಿಳೆಗೆ ಎರಡನೆಯ ಮಗುವಿಗಾಗಿ ಗರ್ಭ ಧರಿಸುವುದು ಕಷ್ಟವಾಗಿರುತ್ತದೆ.

ಎಂಡೊಮೆಟ್ರಿಯಾಸಿಸ್‌: ಇದು ಸಹ ಗರ್ಭಧಾರಣೆಯನ್ನು ತಡೆಯುತ್ತದೆ. ಎಂಡೊಮೆಟ್ರಿಯಲ್‌ ಟಿಶ್ಯು ಗರ್ಭಾಶಯದ ಮಿತಿಯಿಂದಾಚೆ ಬೆಳೆದು, ಅಂಡಾಶಯದಿಂದ ಅಂಡಾಣುವು ಅಂಡನಾಳದ ಮೂಲಕ ಗರ್ಭಾಶಯ ತಲುಪುವುದನ್ನು ತಡೆಯುವಂಥ ಪರಿಸ್ಥಿತಿಯನ್ನು ಹುಟ್ಟುಹಾಕುತ್ತದೆ. ಅಂಡಾಣು, ಗರ್ಭಾಶಯವನ್ನು ತಲುಪದೆ, ಗರ್ಭ ಕಟ್ಟುವಲ್ಲಿ ವೈಫಲ್ಯ ಕಾಣುತ್ತದೆ.

ಗರ್ಭಸ್ರಾವ: ಗರ್ಭಸ್ರಾವದಿಂದಾಗಿ ಬಂಜೆತನ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ.  ಗರ್ಭಪಾತಗಳು ನಿಮ್ಮ ಫಲವಂತಿಕೆಯನ್ನು ಕಸಿಯುವುದಿಲ್ಲ.  ಆದರೆ ಮೊದಲ ಗರ್ಭಪಾತದ ಸಂದರ್ಭದಲ್ಲಿ ಗರ್ಭಾಶಯಕ್ಕೆ ತೊಂದರೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಮ್ಮೆ ಗರ್ಭಪಾತವಾದಲ್ಲಿ ಇನ್ನೊಮ್ಮೆ ಗರ್ಭಧರಿಸಿದಾಗ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು.

ಕ್ಯಾನ್ಸರ್‌ ಚಿಕಿತ್ಸೆ: ನೀವು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಗರ್ಭಧಾರಣೆಯಾಗುವುದು ಕಷ್ಟವಾಗಬಹುದು. ಇದು ಸತ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್‌ನ ಸ್ವರೂಪ, ಚಿಕಿತ್ಸೆಯ ವಿಧಾನ, ಔಷಧಿಯ ಪ್ರಮಾಣ, ಕೀಮೊಥೆರಪಿ ಮುಂತಾದವುಗಳಿಂದ ಬಂಜೆತನವನ್ನು ಎದುರಿಸಬೇಕಾಗಬಹುದು.

ಸಮತೋಲಿತ ಆಹಾರದಿಂದ ಗರ್ಭಧಾರಣೆ: ಇದು ತಪ್ಪು ನಂಬಿಕೆಯಾಗಿದೆ. ಸಮತೋಲಿತ ಆಹಾರ ಸೇವನೆಯಿಂದ ದಂಪತಿ ಗರ್ಭಧಾರಣೆ ಸಾಧ್ಯ ಎಂದು ಬಿಂಬಿಸುವುದೇ ತಪ್ಪಾಗಿದೆ. ಫರ್ಟಿಲಿಟಿ ಅಂಡ್‌ ಡಯಟ್‌ ಪುಸ್ತಕದ ಲೇಖಕ ಹಾಗೂ ತಜ್ಞರಾಗಿರುವ ಹಾರ್ವರ್ಡ್‌ನ ಫಿಸಿಶಿಯನ್‌ ಜಾರ್ಜ್‌ ಚವಾರೊ ಹಾಗೂ ವಾಲ್ಟರ್‌ ವಿಲ್ಲೆಟ್‌ ಪ್ರಕಾರವೂ ಸಮತೋಲಿತ ಆಹಾರ ಸೇವನೆ ಅಥವಾ ಇನ್ನಾವುದೇ ವಿಶೇಷ ಆಹಾರ ಸೇವಿಸುವುದರಿಂದ  ಸಾಮಾನ್ಯ ದಂಪತಿಗಳೂ ಗರ್ಭಧರಿಸುವುದಿಲ್ಲ. ಸೇವಿಸುವ ಆಹಾರಕ್ಕೂ ಬಂಜೆತನದ ಪರಿಹಾರಕ್ಕೂ ನೇರ ಸಂಬಂಧವಿಲ್ಲ. 

ಫಲವಂತಿಕೆ ಅಥವಾ ಬಂಜೆತನದ ಬಗ್ಗೆ ವೈದ್ಯರನ್ನು ಯಾರು, ಯಾವಾಗ ಕಾಣಬೇಕು?
* 32 ವರ್ಷ ಮೇಲ್ಪಟ್ಟ ಮಹಿಳೆಯರು,
* ಮದುವೆಯಾದ ಎರಡು ವರ್ಷಗಳಲ್ಲಿ ಸತತ ಪ್ರಯತ್ನಗಳ ನಂತರವೂ ಗರ್ಭಧಾರಣೆಯಾಗದಿದ್ದಲ್ಲಿ
* ಅನಿಯಮಿತ ಋತುಸ್ರಾವವಾಗುತ್ತಿದ್ದಲ್ಲಿ
* 16ನೇ ವಯಸ್ಸಿನ ನಂತರ ಋತುಚಕ್ರ ಆರಂಭವಾದ ಯುವತಿಯರು
* ಅತಿ ಬೇಗ ಋತುಬಂಧವಾದ ಮಹಿಳೆಯರ ಮಕ್ಕಳು
* ಸ್ಥೂಲಕಾಯದ ಮಹಿಳೆಯರು

ಧೂಮಪಾನ ಮಾಡುವ ಅಥವಾ ಮಾಡುತ್ತಿದ್ದ ಮಹಿಳೆಯರು ತಮ್ಮ ಫಲವಂತಿಕೆಯ ಸಾಧ್ಯತೆಗಳನ್ನು ತಿಳಿಯಲು ವೈದ್ಯರೊಡನೆ ಸಮಾಲೋಚಿಸುವುದು ಒಳಿತು.
ಮಾಹಿತಿಗೆ: 9611394477

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT