ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿ ಶಾರ್ಕ್‌ಗೆ ಸೋನೊಗ್ರಾಮ್‌

Last Updated 12 ಜುಲೈ 2016, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಸುಲುಕೊವಿಸ್ಕಿ ಮತ್ತು ಮಿಯಾಮಿ ವಿಶ್ವವಿದ್ಯಾಲಯದ ಕಡಲ ವಿಜ್ಞಾನಿಗಳು 12.5 ಅಡಿ ಉದ್ದದ ಟೈಗರ್ ಶಾರ್ಕ್‌ನ ಸೋನೊಗ್ರಾಮ್‌ ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಜೀವಂತ ಇರುವ ಗರ್ಭಿಣಿ ಶಾರ್ಕ್ ಮೇಲೆ ನಡೆದಿರುವ ಈ ಸೋನೊಗ್ರಾಮ್‌  ಪರೀಕ್ಷೆ ವೈದ್ಯಕೀಯ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದೆ. ನೈಲ್‌ ಹ್ಯಾಮರ್ ಶ್ಲ್ಯಾಗ್‌ ಇಮಿಲಿ  ಎಂಬ ಶಾರ್ಕ್ ಮೇಲೆ ಈ ಪ್ರಯೋಗ ನಡೆಸಲಾಗಿದ್ದು, ಅದರ ಗರ್ಭದಲ್ಲಿ ಬಾಯಿ ತುಂಬಾ ಹಲ್ಲುಗಳಿದ್ದ 20 ಮರಿಗಳನ್ನು ಪತ್ತೆ ಮಾಡಲಾಗಿದೆ.

ಈ ಮೊದಲು ಗರ್ಭಿಣಿ ಶಾರ್ಕ್‌ನ ಹೊಟ್ಟೆಯ ಭಾಗವನ್ನು ಸೀಳಿ ಅದನ್ನು ಕೊಂದು ಪ್ರಯೋಗವನ್ನು ನಡೆಸಲಾಗಿತ್ತು.   ಅದು ಗರ್ಭ ಧರಿಸಿದ್ದು ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವ ಸಂಬಂಧ ಅದನ್ನು ಕೊಂದು ಹಾಕಲಾಗಿತ್ತು. ಆದರೆ ಇದೊಂದು ರೀತಿಯಲ್ಲಿ ಪೈಶಾಚಿಕ ಕೃತ್ಯ ಎನ್ನುವುದು ಈ ಅಧ್ಯಯನದ ನೇತೃತ್ವ ವಹಿಸಿದ್ದ ಹ್ಯಾಮರ್ ಶ್ಲಾಗ್ ಅಭಿಮತ. ‘ಮನುಷ್ಯರು  ಗರ್ಭ ಧರಿಸಿದ್ದಾರೋ ಇಲ್ಲವೋ ಎಂದು ನೋಡಲು ಅವರನ್ನು ಸಾಯಿಸುವುದಿಲ್ಲವಲ್ಲ, ಹಾಗಿದ್ದ ಮೇಲೆ ಈ ಮೂಕ ಪ್ರಾಣಿಯನ್ನು ಸಾಯಿಸುವುದು ಏಕೆ’ ಎಂದು ಪ್ರಶ್ನಿಸಿದ ಅವರು, ಜೀವಂತವಾಗಿಯೇ ಅದರ ಪರೀಕ್ಷೆ ನಡೆಸಲು ಮುಂದಾಗಿದ್ದರು.

ಹೀಗೆಯೇ ಜೀವಂತ ಪ್ರಾಣಿಗಳ ಮೇಲೆ ಅಧ್ಯಯನ ಮುಂದುವರಿಸಲು ವಿಜ್ಞಾನಿಗಳ ತಂಡ ನಿರ್ಧರಿಸಿದೆ. ಈ ಪರೀಕ್ಷೆಗಳನ್ನು ನಿಯಂತ್ರಿಸಲು ಧ್ವನಿತರಂಗಗಳು ಹಾಗೂ ಸ್ಯಾಟಲೈಟ್ ಟ್ಯಾಗ್‌ಗಳನ್ನು ಬಳಸಿಕೊಳ್ಳಲು ಅವರು ಚಿಂತನೆ ನಡೆಸಿದ್ದಾರೆ.

ಶಾರ್ಕ್‌ ಮೇಲೆ ನಡೆದ ಆಪರೇಷನ್‌ನ ವಿಡಿಯೊ ಕೂಡ ಮಾಡಲಾಗಿದ್ದು, ಶಾರ್ಕ್ ಹೊಟ್ಟೆಯೊಳಗೆ ಮರಿ ಶಾರ್ಕ್‌ಗಳನ್ನು, ಅವುಗಳು ಹೊಟ್ಟೆಯಲ್ಲಿ ಯಾವ ರೀತಿಯಲ್ಲಿ ಚಲಿಸುತ್ತಿವೆ ಎಂಬುದನ್ನು ಅದರಲ್ಲಿ ನೋಡಬಹುದು. ಈ ವೀಡಿಯೊ ನೋಡಲು ಟೈಪಿಸಿ: goo.gl/05VBSP

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT