ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಲುಶಿಕ್ಷೆ: ಉ. ಪ್ರದೇಶ ಕರ್ನಾಟಕ ಮುಂದೆ

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ನವದೆಹಲಿ: 2004 – 2012ರ ಅವಧಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ ರಾಜ್ಯಗಳಲ್ಲಿ ಉತ್ತರ ಪ್ರದೇಶ  ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ ಅಂಕಿಅಂಶಗಳನ್ನು ಆಧರಿಸಿ, ಎಂಟು ವರ್ಷಗಳ ಅವಧಿಯಲ್ಲಿ ವಿವಿಧ ರಾಜ್ಯಗಳು ಕೊಲೆ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿರುವ  ಹಾಗೂ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿರುವ ಪ್ರಮಾಣವನ್ನು ಅಧ್ಯಯನ ಮಾಡಿ ಕಾನೂನು ಆಯೋಗ ಈ ವಿಚಾರ ಬಹಿರಂಗಪಡಿಸಿದೆ.

‌‌ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಪ್ರಮಾಣ ಕರ್ನಾಟಕದಲ್ಲಿ  3.2 ಪಟ್ಟು, ದೆಹಲಿಯಲ್ಲಿ 6 ಪಟ್ಟು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 6.8 ಪಟ್ಟು ಹೆಚ್ಚಾಗಿದೆ. ರಾಜ್ಯಗಳ ನಡುವಣ ಹೋಲಿಕೆಯಲ್ಲೂ  ಅಪಾರ ವ್ಯತ್ಯಾಸ ಕಂಡು ಬಂದಿದೆ. ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸುವ  ಪ್ರಮಾಣ 5.8ರಷ್ಟು ಹೆಚ್ಚಾಗಿದೆ. ರಾಜಸ್ತಾನಕ್ಕೆ ಹೋಲಿಸಿದಲ್ಲಿ ಅಪರಾಧಿಯೊಬ್ಬನಿಗೆ ಗಲ್ಲುಶಿಕ್ಷೆ ವಿಧಿಸುವ ಪ್ರಮಾಣ ಗುಜರಾತ್‌ನಲ್ಲಿ  5.8ರಷ್ಟು ಹೆಚ್ಚಾಗಿದೆ. ಮಧ್ಯಪ್ರದೇಶಕ್ಕೆ ಹೋಲಿಸಿದಲ್ಲಿ ಈ ಪ್ರಮಾಣ ಮಹಾರಾಷ್ಟ್ರದಲ್ಲಿ 2.9ರಷ್ಟು ಹೆಚ್ಚಾಗಿದೆ.

*
ವಾಸ್ತವಾಂಶದ ಮೇಲೆ ಬೆಳಕು
*ಗಲ್ಲುಶಿಕ್ಷೆಗೆ ಒಳಗಾದವರಲ್ಲಿ ಶೇ 74ರಷ್ಟು  ಜನ ಆರ್ಥಿಕವಾಗಿ ಹಿಂದುಳಿದವರು. ಬಹುತೇಕರು ಕುಟುಂಬಕ್ಕೆ ಜೀವನಾಧಾರವಾಗಿದ್ದಾರೆ.

*ಅತಿ ಹೆಚ್ಚು ಆರೋಪಿಗಳು ಮರಣದಂಡನೆ ಶಿಕ್ಷೆಗೆ ಒಳಗಾಗುತ್ತಿರುವುದಕ್ಕೆ ಅವರ ಆರ್ಥಿಕ ಸ್ಥಾನಮಾನಗಳು ಕಾರಣವಾಗುತ್ತಿವೆ. ಬಡ ಆರೋಪಿಗಳು ಹಣಕಾಸು ತೊಂದರೆಯ ಕಾರಣ ಒಳ್ಳೆಯ ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗುತ್ತಿದ್ದಾರೆ.

*ಬಡ ಆರೋಪಿಗಳ ಪರ ವಾದ ಮಂಡಿಸಲು ಸರ್ಕಾರ ಒಳ್ಳೆಯ ವಕೀಲರನ್ನು ನೇಮಕ ಮಾಡಬೇಕು.

*ಬಡ ಕಕ್ಷಿದಾರರ ಪರ ವಾದಿಸಲು ಸರ್ಕಾರ ನೇಮಕ ಮಾಡುವ ವಕೀಲರಿಗೆ ಅತ್ಯಂತ ಕಡಿಮೆ ಹಣ (ಪ್ರತಿ ಕಲಾಪಕ್ಕೆ ಕೇವಲ ₹500–1,500 ) ನೀಡುತ್ತಿರುವುದು ನ್ಯಾಯದಾನ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT