ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಳಿಕೆಯ ಹಳಿಯಲ್ಲಿ ‘...ಸಿಂಗ್‌’

Last Updated 6 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಆ್ಯಕ್ಷನ್‌ ಕಿಂಗ್‌ ಅಕ್ಷಯ್‌ ಕುಮಾರ್‌ ಅಭಿನಯದ ‘ಸಿಂಗ್‌ ಈಸ್‌ ಬ್ಲಿಂಗ್‌’ ಚಿತ್ರ ಕಳೆದ ವಾರ ತೆರೆಕಂಡಿದ್ದು, ಕೇವಲ ಮೂರು ದಿನಗಳಲ್ಲೇ ₹50 ಕೋಟಿ ಬಾಚಿಕೊಂಡಿದೆ.

ತಮಿಳಿನ ನಟ ಪ್ರಭುದೇವ ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಚಿತ್ರ ತೆರೆಕಂಡ ಮೊದಲನೇ ದಿನವೇ ₹20.67 ಕೋಟಿ ಗಳಿಸಿದೆ. ಶನಿವಾರ ₹14.50 ಕೋಟಿ ಹಾಗೂ ಭಾನುವಾರ ₹19.27 ಕೋಟಿ ಗಳಿಸಿದ್ದು, ವಾರಾಂತ್ಯಕ್ಕೆ ಒಟ್ಟಾರೆ ₹54.44 ಕೋಟಿ ಹಣ ಮಾಡಿದ್ದು, ಇದು ಅಕ್ಷಯ್‌ ಅವರ ವೃತ್ತಿ ಜೀವನದಲ್ಲೇ ವಾರಾಂತ್ಯದಲ್ಲಿ ಅತಿ ಹೆಚ್ಚು ಹಣಗಳಿಸಿರುವ ಸಿನಿಮಾ.

ಈ ಚಿತ್ರ ವಿಶ್ವದೆಲ್ಲೆಡೆ ಪ್ರೇಕ್ಷಕನ ಮನಸ್ಸನ್ನು ಗೆಲ್ಲುತ್ತಿರುವ ಸಂದರ್ಭದಲ್ಲಿ ಚಿತ್ರ ತಂಡ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದೆ. ಆಮಿ ಜಾಕ್ಸನ್‌, ಲಾರಾ ದತ್ತ ಹಾಗೂ ಕೆ.ಕೆ. ಮೆನನ್‌ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT