ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಶಾಂತಿ ಪರೀಕ್ಷೆ: 92 ಕೈದಿಗಳು ಪಾಸು

Last Updated 2 ಅಕ್ಟೋಬರ್ 2014, 11:14 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇಲ್ಲಿನ ತಲೊಜಾ ಕಾರಾಗೃಹದ 92 ಕೈದಿಗಳು ಗಾಂಧಿ ಶಾಂತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈನ ಸರ್ವೋದಯ ಮಂಡಳಿಯು ಈ ಪರೀಕ್ಷೆಯನ್ನು ನಡೆಸಿತ್ತು. ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ ಈ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಗಾಂಧಿ ಜೀವನ ಚರಿತ್ರೆ, ಅವರ ಚಿಂತನೆ ಮತ್ತು ಸಿದ್ಧಾಂತಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗಿತ್ತು. ನೂರು ಅಂಕಗಳಿಗೆ ನಡೆದ ಈ ಪರೀಕ್ಷೆಯಲ್ಲಿ 80 ಅಂಕಗಳನ್ನು ಪಡೆದಿರುವ ಕೈದಿಯೊಬ್ಬರು ಮೊದಲ ಶ್ರೇಣಿ ಪಡೆದಿದ್ದಾರೆ ಎಂದು ಸರ್ವೋದಯ ಮಂಡಳಿಯ ಹಿರಿಯ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.

ನೈಜಿರಿಯಾದ ಕೈದಿಯೊಬ್ಬರು 65 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT