ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಫ್ಟ್ ಆಯ್ಕೆಗೊಂದು ಆ್ಯಪ್!

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೀನಿನ ಹೆಜ್ಜೆಯ ಜಾಡನ್ನಾದರೂ ಹಿಡಿಯಬಹುದು. ಆದರೆ ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳುವುದು ಕಷ್ಟ...
ಸಹಜವಾಗಿಯೇ ಪ್ರತಿಯೊಬ್ಬ ಗಂಡಸಿಗೂ ಇದರ ಅನುಭವ ಆಗಿರುತ್ತದೆ, ಆಗುತ್ತಲೇ ಇರುತ್ತದೆ.

ಅದರಲ್ಲೂ ಉಡುಗೊರೆ ನೀಡುವ ವಿಷಯದಲ್ಲಂತೂ ಪುರುಷ ಮಹಾಶಯ ಪೇಚಿಗೆ ಒಳಗಾಗುವುದೇ ಹೆಚ್ಚು. ಸಾಕಷ್ಟು ಅಲೆದಾಡಿ ದುಬಾರಿ ಬೆಲೆ ತೆತ್ತು ಒಳ್ಳೆಯ ಉಡುಗೊರೆ ತಂದುಕೊಟ್ಟರೂ ಅದನ್ನು ಕಂಡು ಮನದನ್ನೆ ಮುನಿಸಿಕೊಳ್ಳುತ್ತಾಳೆ!

ಇನ್ನೊಮ್ಮೆ, ಕೈಗೆ ಸಿಕ್ಕ ಯಾವುದೋ ಕಡಿಮೆ ಬೆಲೆಯ ವಸ್ತು ಕೊಟ್ಟರೆ ಸಾಕು ಅದನ್ನೇ ಬಹಳವಾಗಿ ಇಷ್ಟಪಡುತ್ತಾಳೆ!
ಈ ಕಾರಣಕ್ಕಾಗಿಯೇ ಉಡುಗೊರೆ ಆಯ್ಕೆ ಎನ್ನುವುದು ಗಂಡ ಅಥವಾ ಪ್ರಿಯಕರನಿಗೆ ಬಹಳ ಕಷ್ಟದ, ಸವಾಲಿನ ವಿಷಯ.
ಗಂಡಸರ ಈ ಪಡಿಪಾಟಲನ್ನು ನೀಗಿಸಲೆಂಬಂತೆ ‘Gift Share Love’ ಎಂಬ ಆ್ಯಪ್ ಒಂದು ಹೊಸದಾಗಿ ತಯಾರಾಗಿದೆ.
ಅಚ್ಚರಿ ಎಂದರೆ ಇದನ್ನು ಸಿದ್ಧಪಡಿಸಿರುವುದು ಮಹಿಳೆಯರು!

ಮಾರ್ಸೆಲಾ ಸ್ಮಿತ್  ಮತ್ತು ಆಕೆಯ ಇಬ್ಬರು ಸಹೋದರಿಯರು ಈ ಆ್ಯಪ್  ವಿನ್ಯಾಸಕಿಯರು.
ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡರೆ, ಅಲ್ಲಿ  ಬಟ್ಟೆ, ಸೌಂದರ್ಯ ವರ್ಧಕ ಉತ್ಪನ್ನಗಳು, ಅಲಂಕಾರಿಕ ವಸ್ತುಗಳ ಆಯ್ಕೆ ಮಾಡುವ ವಿಂಡೊ ಕಾಣಿಸುತ್ತದೆ. ಅಲ್ಲಿ ವಸ್ತುಗಳ ಚಿತ್ರ ಮತ್ತು ಬೆಲೆ ನೀಡಿರುವುದರಿಂದ ಖರೀದಿಯೂ ಸುಲಭದ ಕೆಲಸವೇ ಆಗಿದೆ. ವಸ್ತು ಖರೀದಿಸಿದ ಮೇಲೆ ‘Mark Owned’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಖರೀದಿ ದಿನಾಂಕ ದಾಖಲಾಗುತ್ತದೆ.

ಹೀಗೆ ನಿಮಗೆ ಖರೀದಿಸಲು ಇಷ್ಟವಾಗುವ ವಸ್ತುಗಳ  ಪಟ್ಟಿ ಸಿದ್ಧಪಡಿಸಿ ಇಟ್ಟುಕೊಳ್ಳಬಹುದು. ಖಾಸಗಿ ವಸ್ತುಗಳ ಪಟ್ಟಿ ಇತರರಿಗೆ ಕಾಣಿಸದಂತೆ ಇಡಲು ಪಾಸ್ ವರ್ಡ್ ಸಹ ಬಳಸಬಹುದು. ನೀವು ಆಯ್ಕೆ ಮಾಡಿ ಅನುಮತಿ ನೀಡಿದ ಸ್ನೇಹಿತರು ಮಾತ್ರವೇ ನಿಮ್ಮ ಈ ಖರೀದಿ ಪಟ್ಟಿಯಲ್ಲಿನ ವಸ್ತುಗಳನ್ನು ನೋಡಲು ಸಾಧ್ಯ.

ಈ ಆ್ಯಪ್ ಬಳಸುವ ಸ್ನೇಹಿತರ ಜತೆಗಷ್ಟೇ ಅಲ್ಲದೆ ಫೇಸ್ ಬುಕ್, ಟ್ವಿಟರ್ ಅಥವಾ ಇ ಮೇಲ್ ಮೂಲಕವೂ ಈ ಆಯ್ಕೆಯ ಮಾಹಿತಿಯನ್ನು ಷೇರ್ ಮಾಡಬಹುದು ಎನ್ನುತ್ತಾರೆ ಆ್ಯಪ್ ತಯಾರಕಿ   ಮಾರ್ಸೆಲಾ ಸ್ಮಿತ್ (Marcela Smith).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT