ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರೋನ್‌ ಸ್ವದೇಶಕ್ಕೆ ಮರಳಲು ಸುಪ್ರೀಂ ಅನುಮತಿ

Last Updated 26 ಮೇ 2016, 6:31 IST
ಅಕ್ಷರ ಗಾತ್ರ

ನವದೆಹಲಿ (ಏಜೆನ್ಸೀಸ್‌): ಇಬ್ಬರು ಮೀನುಗಾರರನ್ನು ಕೊಂದ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕ ಸಾಲ್ವಟೋರ್‌ ಗಿರೋನ್‌ ಸ್ವದೇಶಕ್ಕೆ ಮರಳಲು ಸುಪ್ರೀಂಕೋರ್ಟ್‌ ಗುರುವಾರ ಅನುಮತಿ ನೀಡಿದೆ.

ಕೇರಳ ಕರಾವಳಿಯಲ್ಲಿ 2012ರಲ್ಲಿ ಇಬ್ಬರು ಮೀನುಗಾರರನ್ನು ಕೊಂದ ಆರೋಪ ಗಿರೋನ್‌ ಮತ್ತು ಇಟಲಿಯ ಮತ್ತೊಬ್ಬ ನಾವಿಕ ಮಾಸ್ಸಿಮಿಲಿಯಾನೊ ಲಾಟೊರೆ ಅವರ ಮೇಲಿದೆ.

ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ಇಟಲಿಯಲ್ಲಿ ನೆಲೆಸಲು ಅವಕಾಶ ನೀಡಬೇಕೆಂದು ಕೋರಿ ಗಿರೋನ್‌ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಲಾಟೊರೆ ಅನಾರೋಗ್ಯದ ಕಾರಣ 2014ರಲ್ಲಿ ಇಟಲಿಗೆ ಹಿಂತಿರುಗಿದ್ದರು. ಈ ವರ್ಷದ ಸೆಪ್ಟೆಂಬರ್‌ 30ರವರೆಗೆ ಇಟಲಿಯಲ್ಲೇ ತಂಗಲು ಸುಪ್ರೀಂಕೋರ್ಟ್‌ ಅವರಿಗೆ ಅನುಮತಿ ನೀಡಿದೆ.

ಆದರೆ ಈವರೆಗೆ ಗಿರೋನ್‌ ಸುಪ್ರೀಂಕೋರ್ಟ್‌ನ ಆದೇಶದಂತೆ ನವದೆಹಲಿಯಲ್ಲಿರುವ ಇಟಲಿ ರಾಯಭಾರಿ ಕಚೇರಿಯಲ್ಲಿ ತಂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT