ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನ ‘ರಾಣಿಯ ಬಾವಿ’ ಸೇರ್ಪಡೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿ
Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಗುಜರಾತ್‌ನ ರಾಣಿಯ ಬಾವಿ ಯುನೆಸ್ಕೊ ಪಾರಂ­ಪ­ರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಹನ್ನೊಂದನೇ ಶತಮಾನದಲ್ಲಿ ಈ ಮೆಟ್ಟಿಲು ಬಾವಿ ನಿರ್ಮಿಸಲಾಗಿದೆ.  ಅಂತರ್ಜಲಕ್ಕಾಗಿ ವಿಶಿಷ್ಟ ತಂತ್ರಜ್ಞಾನ ಬಳಸಿಕೊಂಡಿರುವುದು ಇದರ ವಿಶೇಷ.

‘ಮೆಟ್ಟಿಲುಗಳ ಬಾವಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಅಂಗೀ­ಕರಿಸ­ಲಾಗಿದೆ. ಕತಾರ್‌ನ ದೋಹದಲ್ಲಿ ನಡೆದ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳ ಲಾಗದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ. 

ರಾಣಿಯ ಮೆಟ್ಟಿಲುಗಳ ಬಾವಿ ಭಾರತದಲ್ಲಿನ ವಾಸ್ತುಶಿಲ್ಪದ ವೈಶಿಷ್ಟಕ್ಕೆ ಹೆಸರಾಗಿದೆ ಎಂದು ಯುನೆಸ್ಕೊ ಬಣ್ಣಿಸಿದೆ. ರಾಣಿಯ ಬಾವಿಯನ್ನು ವಿಶ್ವಪಾರಂ ಪರಿಕ ತಾಣಗಳ ಪಟ್ಟಿಗೆ ಸೇರಿಸ­ಬೇಕು ಎಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಕಳೆದ ಫೆಬ್ರು­ವರಿಯಲ್ಲಿ ನಾಮನಿರ್ದೇಶನ ಮಾಡಿತ್ತು.

ಸದ್ಯ ಭಾರತದ 30 ತಾಣಗಳು ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿವೆ. ಇದ­ರಲ್ಲಿ 24 ಸಾಂಸ್ಕೃತಿಕ ತಾಣಗಳು ಮತ್ತು 6 ಸ್ವಾಭಾವಿಕ ತಾಣಗಳು ಸೇರಿವೆ. ಗುಜರಾತ್‌ನ ರಾಣಿಯ ಬಾವಿ 31ನೇ ಸೇರ್ಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT