ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಗಲಭೆಗೆ ಕ್ಷಮಾಪಣೆ ಕೋರದೆ ಜಾರಿಕೊಂಡ ಮೋದಿ

Last Updated 15 ಏಪ್ರಿಲ್ 2014, 20:16 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 2002ರ ಗುಜರಾತ್‌ ಗಲಭೆಗೆ  ಸಂಬಂಧಿಸಿದಂತೆ ಕ್ಷಮಾಪಣೆ ಕೋರುವ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿ­ಕೊಂಡಿದ್ದಾರೆ.

ಕಾಂಗ್ರೆಸ್‌, ತಮ್ಮನ್ನು ಕ್ಷಮೆ ಕೋರು­ವಂತೆ ಕೇಳುವ ಬದಲಿಗೆ ಮೊದಲು ತನ್ನ ‘ಪಾಪ’ವನ್ನು ಒಪ್ಪಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.

ಮೋದಿ ಮಂಗಳವಾರ ರಾತ್ರಿ ಖಾಸಗಿ ಟಿವಿ­ ಚಾನೆಲ್‌ವೊಂದಕ್ಕೆ ನೀಡಿದ ಸಂದ­ರ್ಶನ­ದಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಹಣ­ಕಾಸು ಸಚಿವ ಪಿ. ಚಿದಂಬರಂ ಅವ­ರಂತಹ ನಾಯಕರು ತಮ್ಮನ್ನು ‘ದೇಶಕ್ಕೆ ಅಪಾಯಕಾರಿ ವ್ಯಕ್ತಿ’ ಎಂದು ಬಣ್ಣಿಸಿ­ರುವ ಬಗ್ಗೆ ಉತ್ತರಿಸಿದ ಮೋದಿ, ‘ಯಾವುದೇ ವ್ಯಕ್ತಿಯಿಂದ ಅಪಾ­ಯವಿದೆ ಎಂದಾದರೆ, ಅದು ಯಾವುದೇ ಬೀದಿ ಅಥವಾ ಮೊಹಲ್ಲಾ­ದಲ್ಲಿ ವಾಸಿಸುತ್ತಿ­ರುವ ಯಾರಿಂದ­ಲಾ­ದರೂ ಇರಬಹು­ದಲ್ಲವೇ’ ಎಂದು ಮರು­ಪ್ರಶ್ನೆ ಹಾಕಿದರು.

‘ಕಳೆದ ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಪ್ರಧಾನಿ ಸಿಂಗ್‌ ಅವರು ಈ ರೀತಿ ಮಾತನಾಡಿದ್ದನ್ನು ನಾನು ಯಾವಾ­ಗಲೂ ಕೇಳಿಲ್ಲ. ಕಳೆದ 12ರಿಂದ 15 ವರ್ಷ­ಗಳಿಂದ ನಾನು ಮುಖ್ಯ­ಮಂತ್ರಿ­ಯಾಗಿ ಗುಜ­ರಾತ್‌ನ್ನು ಅತ್ಯಂತ ಕಾಳಜಿ­ಯಿಂದ ಸುರಕ್ಷಿತವಾಗಿ ನೋಡಿ­ಕೊಂ­ಡಿ­ದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT