ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ತಾ ವಿರುದ್ಧ ಮೊಯಿಲಿ ಕಿಡಿ

Last Updated 1 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅನಿಲ ಬೆಲೆ ಏರಿಕೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಿಪಿಐ ಮುಖಂಡ ಗುರುದಾಸ್ ದಾಸ­ಗುಪ್ತಾ ಮತ್ತು ಪೆಟ್ರೋಲಿಯಂ ಸಚಿವಾ­ಲ­ಯ­ದ­ಲ್ಲಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವ­ಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಕಿಡಿ ಕಾರಿದ್ದಾರೆ.

ಕಳೆದ ವರ್ಷ ಅನಿಲ ಬೆಲೆ ಏರಿಕೆ ನಿರ್ಧಾ­ರದ ಬಗ್ಗೆ ಮೊಯಿಲಿ ಸಿದ್ಧಪಡಿ­ಸಿದ ಟಿಪ್ಪಣಿಯ ಪ್ರತಿ ಗುಪ್ತಾ ಕೈಗೆ ಕೆಲವೆ ತಾಸುಗಳಲ್ಲಿ ತಲುಪಿ ಭಾರಿ ಮುಜುಗರ­ವನ್ನು ಎದುರಿಸ­ಬೇಕಾಯಿತು.

ಪೆಟ್ರೋಲಿಯಂ ಸಚಿವಾಲಯದ ಪಟ್ಟ­ಭದ್ರ ಹಿತಾಸಕ್ತಿಗಳು ಮತ್ತು ಹೊರ­ಗಿನವರು ಸೇರಿಕೊಂಡು ತಮ್ಮ ಚಾರಿತ್ರ್ಯ ವಧೆಗೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿ­ದ್ದಾರೆ ಎಂದು ಮೊಯಿಲಿ ಅಸಮಾ­ಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಇಲಾಖೆಯ ನಿಕ್ಷೇಪ ಹೊರ ತೆಗೆ­ಯುವ ವಿಭಾಗದ ಹಿರಿಯ ಅಧಿ­ಕಾರಿ­ಗಳೇ ಹೊರಗಿನವರ ಜತೆ ಕೈಜೋ­ಡಿಸಿ­ದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿರುವ ಮೊಯಿಲಿ, ಆದರೆ ಆ ಅಧಿಕಾರಿಗಳು ಯಾರು ಎಂದು ಹೇಳಲಿಲ್ಲ.

ಕಳೆದ ಒಂದು ವರ್ಷದಿಂದ ಗುಪ್ತಾ ಅವರು ತಮ್ಮ ವಿರುದ್ಧ ಆಧಾರರಹಿತ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಆಪಾದನೆಗಳನ್ನು ಮಾಡುತ್ತಿದ್ದಾರೆ. ಅವರ ಆಪಾದನೆಗಳಿಗೆ ಸೂಕ್ತ ಸಮಜಾ­ಯಿಸಿ ನೀಡಿದರೂ ಅಪಪ್ರಚಾರ ಮುಂದು­ವರಿಸಲಾಗಿದೆ ಎಂದು ಮೊಯಿಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನಿಲ ಬೆಲೆ ಏರಿಕೆಗೆ ತಡೆಯಾಜ್ಞೆ ನೀಡುವಂತೆ ಚುನಾವಣೆ ಆಯೋಗಕ್ಕೆ  ದೂರು ಸಲ್ಲಿಸಿರುವುದು ತಮ್ಮ ವಿರುದ್ಧದ ಅಪಪ್ರಚಾರದ ಒಂದು ಭಾಗ ಎಂದಿದ್ದಾರೆ.

ಸಚಿವ ಸಂಪುಟ ಒಪ್ಪಿರುವ ಸೂತ್ರ­ದಂತೆ ಏಪ್ರಿಲ್‌–ಜೂನ್ ಅವಧಿಯಯ ಪರಿಷ್ಕ್ರತ ದರವನ್ನು ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಜನವರಿ 10ರಿಂದ ಜಾರಿ ಆಗುವಂತೆ ಅಧಿಸೂಚನೆ ಹೊರಡಿಸುವಂತೆ ತಾವು ಅಧಿಕಾರಿಗಳಿಗೆ ಸೂಚಿಸಿದ್ದು ನಿಜ ಎಂದು ಮೊಯಿಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT