ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗುಂಟ: ಅಮರೇಶ್ವರ ರಥೋತ್ಸವ ಇಂದು

Last Updated 5 ಮಾರ್ಚ್ 2015, 6:12 IST
ಅಕ್ಷರ ಗಾತ್ರ

ಲಿಂಗಸುಗೂರು:  ಉತ್ತರ ಕರ್ನಾ­ಟಕ ಪ್ರದೇಶದ ಐತಿಹಾಸಿಕ ದೇವಸ್ಥಾನ­ಗಳಲ್ಲಿ ರಾಯ­ಚೂರು ಜಿಲ್ಲೆಯ ಲಿಂಗಸು­ಗೂರು ತಾಲ್ಲೂಕು ಸುಕ್ಷೇತ್ರ ಗುರು­ಗುಂಟ ಅಮರೇಶ್ವರ ದೇವಸ್ಥಾನವು ಒಂದು.

ಜಾತ್ರಾಮಹೋತ್ಸವದ ಸಾಂಪ್ರ­ದಾಯಿಕ ಪೂಜಾ ಕೈಂಕರ್ಯಗಳು ಹೋಳಿಹುಣ್ಣಿಮೆ ಮುಂಚೆ ಒಂದು ವಾರದಿಂದ ನಡೆದುಕೊಂಡು ಬರು­ತ್ತವೆ. ಹುಣ್ಣಿಮೆ ದಿನ (ಗುರುವಾರ) ಮಹಾ­ರಥೋತ್ಸವದ ಮೂಲಕ ಆರಂಭಗೊಳ್ಳುವ ಜಾತ್ರೆ ಯುಗಾದಿ ಪಾಡ್ಯಕ್ಕೆ ಅಂತ್ಯಗೊಳ್ಳುವುದು ವಾಡಿಕೆ.

ಹೋಳಿ ಹುಣ್ಣಿಮೆ ದಿನ ನಡೆಯುವ ಜಾತ್ರಾಮಹೋತ್ಸವದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ತುಮಕೂರು, ಬೆಂಗಳೂರು, ಮೈಸೂರು, ಮಹಾ­ರಾಷ್ಟ್ರದ ಸೊಲ್ಲಾಪೂರ, ಪುನಾ, ಮುಂಬೈ. ಆಂಧ್ರ ಪ್ರದೇಶದ ಕರ್ನೂಲ್‌, ಮಹಿಬೂಬನಗರ, ಆದೋನಿ, ಹೈದರಬಾದ್‌ ಪ್ರದೇಶ­ಗಳಿಂದ ಭಕ್ತರು ಬರುತ್ತಾರೆ.

ಹೋಳಿ ಹುಣ್ಣಿಮೆ ದಿನವಾದ ಮಾರ್ಚ್‌ 5 ರಂದು ಸಂಜೆ ಮಹಾ­ರಥೋತ್ಸವ ಜರುಗಲಿದೆ.ದೇವಸ್ಥಾನದ ಆವರಣ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿನ ಕಳ್ಳತನ ಕಣ್ಗಾವಲಾಗಿ 20 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ  ಎಂದು ಉಪ ವಿಭಾಗಾಧಿಕಾರಿ ವೈ.ಬಿ. ಶಾಂತರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT