ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾ ಕಾಯ್ದೆ ವ್ಯಾಪ್ತಿ ವಿಸ್ತರಣೆ

ಭೂಕಬಳಿಕೆ, ಅಕ್ರಮ ಮರಳು ಗಣಿಗಾರಿಕೆ ಸೇರ್ಪಡೆ
Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗೂಂಡಾ ಕಾಯ್ದೆ’ ಎಂದೇ ಹೆಸರಾ­ಗಿರುವ ‘ಕರ್ನಾಟಕ ಅಪಾ­ಯಕಾರಿ ಚಟುವಟಿಕೆಗಳ ಪ್ರತಿ­ಬಂಧಕ ಕಾಯ್ದೆ’ ತಿದ್ದುಪಡಿ ಮಸೂ­ದೆಗೆ  ವಿಧಾನಸಭೆಯಲ್ಲಿ ಸೋಮ­ವಾರ ಯಾವುದೇ ಚರ್ಚೆ ಇಲ್ಲದೆ ಅಂಗೀ­ಕಾರ ನೀಡಲಾಯಿತು.

ಈ ಕಾಯ್ದೆ ವ್ಯಾಪ್ತಿಗೆ ಆಸಿಡ್‌ ದಾಳಿ­ಕೋರರು, ಅಕ್ರಮ ಮರಳು ಗಣಿಗಾ­ರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡು­ವವರು, ಡಿಜಿಟಲ್‌ ಮೀಡಿ­ಯಾ­ದಲ್ಲಿ (ವೆಬ್‌ಸೈಟ್‌) ವಂಚಿಸುವ­ವರು, ಭೂ ಕಬಳಿಕೆದಾರರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರನ್ನು ಸೇರಿಸಲಾಗಿದೆ. ಈ ಮೊದಲು ಜೂಜುಕೋರರು, ಕಳ್ಳ­ಬಟ್ಟಿ ವ್ಯಾಪಾರಿಗಳು, ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟ­ಗಾರರ ವಿರುದ್ಧ ಈ ಕಾಯ್ದೆ ಬಳಸಲಾಗುತ್ತಿತ್ತು. 1985ರಲ್ಲಿ ಆಗಿನ ಜನತಾ ಪಕ್ಷದ ಸರ್ಕಾರ ಗೂಂಡಾ ಚಟುವಟಿಕೆ ತಡೆ ಕಾಯ್ದೆಯನ್ನು ಜಾರಿಗೆ ತಂದಿತ್ತು.

ನೇರ ಬಂಧನ, ಜೈಲು: ಈ ಕಾಯ್ದೆ ಪ್ರಕಾರ ಪದೇ ಪದೇ ಅಪರಾಧ ಚಟು­ವಟಿಕೆಗಳಲ್ಲಿ ಭಾಗಿಯಾಗುವ, ಗಂಭೀರ ಸ್ವರೂಪದ ಅಪರಾಧ ಕೃತ್ಯಗ­ಳನ್ನು ಎಸಗುವ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ, ಸಾರ್ವಜ­ನಿ­ಕರಲ್ಲಿ ಭಯದ ವಾತಾವರಣ ಸೃಷ್ಟಿ­ಸುವ ಸಮಾಜ ಘಾತುಕ ವ್ಯಕ್ತಿಗಳನ್ನು ನೇರವಾಗಿ ಜೈಲಿಗೆ ಕಳುಹಿಸಬಹುದು.

ಈ ಕಾಯ್ದೆಯಲ್ಲಿ ಬಂಧಿಸಲಾದ ವ್ಯಕ್ತಿಯನ್ನು ಇತರ ಪ್ರಕರಣಗಳ ಮಾದ­ರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾ­ಧೀಶರ ಎದುರು ಹಾಜರುಪ­ಡಿ­ಸ­ಬೇ­ಕಾದ ಅಗತ್ಯ ಇರುವುದಿಲ್ಲ. ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನ­ವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲ.

ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿ­ಯಲ್ಲಿ ಗೂಂಡಾ ತಡೆ ಕಾಯ್ದೆ ಜಾರಿ­ಗೊಳಿಸಲು ಪೊಲೀಸ್‌ ಕಮಿಷನರ್‌ ಅವರಿಗೆ ಮ್ಯಾಜಿಸ್ಟೀರಿಯಲ್‌ ಅಧಿಕಾರ­ವಿ­ರುತ್ತದೆ. ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗೆ ಮಾತ್ರ ಆ ಅಧಿಕಾರ­ವಿ­ರುತ್ತದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಕೆಳ­ಹಂತದ ಪೊಲೀಸ್‌ ಸಿಬ್ಬಂದಿ ನೀಡುವ ವರದಿಯನ್ನು ಪರಾಮರ್ಶಿಸಿ ಪೊಲೀಸ್‌ ಕಮಿಷನರ್‌ ಅಥವಾ ಜಿಲ್ಲಾಧಿಕಾರಿ ಕಾಯ್ದೆಯನ್ನು ಜಾರಿಗೊಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT