ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯರ ಬಳಗದ ಸಾಧ್ಯ–ಅಸಾಧ್ಯ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಇದು ಕಾಲ್ಪನಿಕ ಕಥೆಯಲ್ಲ. ಒಂದಷ್ಟು ಯುವಕರ ಬದುಕಿನಲ್ಲಿ ನಡೆದ ಘಟನೆಗಳನ್ನು ದೃಶ್ಯರೂಪಕ್ಕೆ ತಂದು ಪ್ರೇಕ್ಷಕರ ಮುಂದಿಡಲಿದ್ದೇನೆ’– ಹೀಗೆ ಮಾತಿನ ಆರಂಭದಲ್ಲೇ ಸ್ಪಷ್ಟಪಡಿಸಿದರು ನಿರ್ದೇಶಕ ಚಂದ್ರು. ಈ ಯೋಜನೆಗೆ ಅವರು ತಂಡವೊಂದನ್ನು ಕಟ್ಟಿಕೊಂಡಿದ್ದು ಅದರ ಹೆಸರು- ‘ನಿಮ್ಮ ಮಿತ್ರ ಕ್ರಿಯೇಶನ್ಸ್’. ಆ ತಂಡದ ಸುಮಾರು ಒಂದು ಡಜನ್ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು!

‘ಮನಸ್ಸಿಟ್ಟು ಮಾಡಿದರೆ ಎಲ್ಲವೂ ಸಾಧ್ಯ’ ಎಂಬ ಟ್ಯಾಗ್‌ಲೈನ್ ಹೊಂದಿರುವ ಸಿನಿಮಾದ ಹೆಸರು ‘ಅಸಾಧ್ಯ’. ಅದರಲ್ಲಿ ‘ಅ’ ಅಕ್ಷರ ಮಸುಕಾಗಿ ಕಾಣುತ್ತದೆ. ಅಸಾಧ್ಯ ಅಂದುಕೊಂಡದ್ದನ್ನು ಸಾಧಿಸಬೇಕೆಂದರೆ ಸತತ ಪ್ರಯತ್ನ ಬೇಕು ಎಂಬ ಸಂದೇಶವನ್ನು ಯುವಕರಿಗೆ ಈ ಚಿತ್ರದ ಮೂಲಕ ಕೊಡಲಿದ್ದಾರಂತೆ. ಅಲ್ಲದೇ, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಸಂದೇಶವೂ ಈ ಚಿತ್ರದ ಮೂಲಕ ಪಾಲಕರಿಗೆ ರವಾನೆಯಾಗಲಿದೆಯಂತೆ.

ತಮ್ಮ ಬದುಕಿನಲ್ಲಿ ನಡೆದ ಘಟನೆಗಳನ್ನು ಈ ಚಿತ್ರ ಆಧರಿಸಿದ್ದು, ಅದರಲ್ಲಿ ತಾವೇ ಪಾತ್ರ ನಿರ್ವಹಿಸುವುದಾಗಿ ನಾಯಕ ಸುಭಾನ್ ಹೇಳಿಕೊಂಡರು. ಚಿತ್ರರಂಗಕ್ಕೆ ಬರುವುದು ತಮ್ಮ ಕನಸಾಗಿದ್ದು, ಅದು ‘ಅಸಾಧ್ಯ’ ಸಿನಿಮಾದಲ್ಲಿ ಈಡೇರುತ್ತಿದೆ ಎಂಬ ಸಂತಸ ಅವರದು.  ಇನ್ನೊಬ್ಬ ನಾಯಕ ಮಂಜುನಾಥ ಅವರಿಗೆ ಕೂಡ ಇದು ಮೊದಲ ಚಿತ್ರ. ಶಾಲೆ-ಕಾಲೇಜು ದಿನಗಳಲ್ಲಿ ನಾಟಕಕ್ಕೆ ಬಣ್ಣ ಹಚ್ಚಿದ್ದ ಅಕ್ಷತಾ ಹಾಗೂ ಪಲ್ಲವಿ ಚಿತ್ರದ ನಾಯಕಿಯರು.

ಹಿನ್ನೆಲೆ ಗಾಯಕಿ, ಕಲಾವಿದೆ, ಸಂಗೀತ ಶಿಕ್ಷಕಿಯಾಗಿರುವ ಶ್ರೀದೇವಿ ಮೆಳ್ಳಗಟ್ಟಿ ಅವರು ರಾಗ ಸಂಯೋಜನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ‘ ‘ಅಸಾಧ್ಯ’ದ ಮೂರು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ನಿರ್ಮಾಪಕ ಆನಂದ ರೆಡ್ಡಿ ಅವರಿಗೆ ಚಿತ್ರಕಥೆ ಇಷ್ಟವಾಗಿದ್ದು, ಇದಕ್ಕಾಗಿ ಮೂರು ಕೋಟಿ ರೂಪಾಯಿ ಬಂಡವಾಳ ಕಾದಿರಿಸಿದ್ದಾರೆ. ನವೆಂಬರ್ ೨೫ರಿಂದ ಚಿತ್ರೀಕರಣ ಆರಂಭವಾಗಿ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ನಾಲ್ಕು ಹಂತಗಳಲ್ಲಿ ೪೫ ದಿನಗಳ ಕಾಲ ನಡೆಯಲಿದೆ. ಛಾಯಾಗ್ರಾಹಕ ಮಯೂರ್ ಗಿರಿ ಇತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT