ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲ ನಿವಾರಿಸಿದ ಕರಣ್‌

Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ತಮ್ಮ ಮುಂದಿನ ಚಿತ್ರ ‘ರಾಮ್‌ ಲಖನ್‌’ನಲ್ಲಿ ಅಲಿಯಾ ಭಟ್‌ ಮತ್ತು ಫವಾದ್‌ ಖಾನ್‌ ನಟಿಸುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಚಿತ್ರದ ನಿರ್ದೇಶಕ ಕರಣ್‌ ಜೋಹರ್‌ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟೇ ಚಿತ್ರದ ನಾಯಕ, ನಾಯಕಿಯ ಹೆಸರು ಅಂತಿಮಗೊಳ್ಳಬೇಕಿದೆ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಂದಹಾಗೆ ‘ರಾಮ್‌ ಲಖನ್‌’ ಖ್ಯಾತ ನಿರ್ದೇಶಕ ಸುಭಾಷ್‌ ಘಾಯ್‌ ಅವರ ಚಿತ್ರದ ರಿಮೇಕ್‌ ಆಗಿದೆ. 
‘ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರದಲ್ಲಿ ನಿರ್ದೇಶಕ ರೋಹಿತ್‌ ಶೆಟ್ಟಿ ಜೊತೆ ಸೇರಿಕೊಂಡು ಮೊದಲ ಬಾರಿಗೆ ಕೆಲಸ ನಿರ್ವಹಿಸಿದ್ದ ಕರಣ್‌ ಮತ್ತೆ ಅವರೊಟ್ಟಿಗೆ ಸೇರಿ ‘‘ರಾಮ್‌ ಲಖನ್‌’’ ಚಿತ್ರ ನಿರ್ದೇಶನ ಮಾಡಲು ಹೊರಟಿದ್ದಾರೆ.

‘ರಾಮ್‌ ಲಖನ್’ ಚಿತ್ರದ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಉಂಟಾಗಿದೆ. ರೋಹಿತ್‌ ಮತ್ತು ನಾನು ಉತ್ಸಾಹ ಭರಿತರಾಗಿದ್ದೇವೆ’ ಎಂದು ಕರಣ್‌ ಟ್ವೀಟ್‌ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT