ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಟ್ಟಿಗೆರೆ ಕೆರೆಗೆ ಚರಂಡಿ ನೀರು

ರಕ್ಷಣೆಗೆ ಗ್ರಾಮಸ್ಥರ ಒತ್ತಾಯ
Last Updated 17 ಡಿಸೆಂಬರ್ 2014, 20:08 IST
ಅಕ್ಷರ ಗಾತ್ರ

ಬೆಂಗಳೂರು: ಐನೂರು ವರ್ಷಗಳಷ್ಟು ಹಳೆಯ­ದಾದ ಗೊಟ್ಟಿಗೆರೆ ಕೆರೆಗೆ ಬೆಂಗಳೂರು -ಮೈಸೂರು ನೈಸ್‌ ರಸ್ತೆಗೆ ಹೊಂದಿ­ಕೊಂಡಿ­ರುವ ಬಸವಪುರ ಗ್ರಾಮದಿಂದ ಹರಿದು ಬರುವ ಚರಂಡಿ ನೀರಿನಿಂದ ಅಪಾಯ ಎದುರಾಗಿದೆ. ಐತಿಹಾಸಿಕ ಕೆರೆಗೆ ಇತ್ತೀಚಿನ ದಿನಗಳಲ್ಲಿ ಒದಗಿರುವ ದುರ್ಗತಿ ಕಂಡ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ನಿವಾಸಿಗಳು ಕೆರೆ­ಯನ್ನು ಸಂರಕ್ಷಿಸಲು ಸರ್ಕಾರ ಕ್ರಮ­ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೆರೆಯ ಮಾಲಿನ್ಯ ಕುರಿತು ಗೊಟ್ಟಿಗೆರೆ ಗ್ರಾಮಸ್ಥರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈಗಾಗಲೇ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ಉಲ್ಲಂಘನೆಗಾಗಿ ಬೆಂಗಳೂರು ನೀರು ಸರ­ಬ­ರಾಜು ಮತ್ತು ಒಳ­ಚರಂಡಿ ಮಂಡ­ಳಿಯ ಮುಖ್ಯ ಎಂಜಿನಿ­ಯರ್‌ಗೆ ನೋಟಿಸ್ ಜಾರಿ­ಗೊಳಿಸಿದೆ. 

ಸಮಸ್ಯೆ ಶೀಘ್ರವಾಗಿ ಪರಿಹ­ರಿ­ಸುವಂತೆ ಸೂಚಿ­ಸಿದೆ ಎಂದು ತಿಳಿದು ಬಂದಿದೆ. ಬಸವಪುರ ಗ್ರಾಮದಲ್ಲಿ ನೆಲದಾಳದಲ್ಲಿರುವ ತ್ಯಾಜ್ಯ ನೀರು ಸಾಗಣೆ ಮಾರ್ಗಕ್ಕೆ ಸಂಸ್ಕರಣಾ ಘಟಕ ನಿರ್ಮಿಸದ ಕಾರಣ ಗ್ರಾಮದ ತ್ಯಾಜ್ಯ ನೀರು ನೇರವಾಗಿ ಗೊಟ್ಟಿಗೆರೆ ಕೆರೆಗೆ ಸೇರಿ ಜಲಮೂಲಕ್ಕೆ ಗಂಡಾಂತರ ಎದುರಾಗಿದೆ.

ಈ ಹಿಂದೆ ಕೆರೆಯ ಉಳಿವಿಗಾಗಿ ನೈಸ್‌ ರಸ್ತೆಯ ಮಾರ್ಗ ಬದಲಾಯಿಸುವಂತೆ ಹೋರಾಡಿದ್ದ ಪರಿಸರ ಸಂಘಟನೆಗಳು ಮತ್ತು ಎನ್‌ಜಿಓಗಳು ಕೆರೆಯನ್ನು ಉಳಿಸಲು  ಕೈಜೋಡಿಸಬೇಕು ಎಂದು ಗೊಟ್ಟಿಗೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಾರಿಯಾಗದ ಶಿಫಾರಸು
೨೦೧೧ರಲ್ಲಿ ನಗರದ ಕೆರೆಗಳು ಕಣ್ಮರೆ­ಯಾ­ಗು­ತ್ತಿರುವ ಸಂಬಂಧ ಸಲ್ಲಿಸಲಾದ ಸಾರ್ವ­ಜನಿಕ ಹಿತಾಸಕ್ತಿ ಅರ್ಜಿ­ಯೊಂ­ದನ್ನು ವಿಚಾರಣೆ ನಡೆಸಿದ ಹೈಕೋರ್ಟ್‌, ಕೆರೆ ಸಂರಕ್ಷಣೆ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸಲು ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿಯು ನೀಡಿದ ವರದಿಯಲ್ಲಿ ಗೊಟ್ಟಿಗೆರೆ ಕೆರೆಯ ಅಭಿವೃದ್ಧಿ ಮಾಡ­ಬೇಕೆಂಬ ಶಿಫಾರಸು ಕೂಡ ಸೇರಿದೆ. ಆದರೆ ಅದು ಈವರೆಗೆ ಜಾರಿಗೆ ಬಂದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT