ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಡಚಿನಮಲ್ಕಿ ರಸದೌತಣ

Last Updated 31 ಜುಲೈ 2014, 7:15 IST
ಅಕ್ಷರ ಗಾತ್ರ

ಗೋಕಾಕ: ಮಾರ್ಕಂಡೇಯ ನದಿ ಹಿನ್ನೀರು ಹಾಗೂ ಬೆಳಗಾವಿ ತಾಲ್ಲೂಕಿ­ನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ­ಯಿಂದಾಗಿ ತಾಲ್ಲೂಕಿನ ಗೊಡಚಿನಮಲ್ಕಿ ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಜಲಪಾತವನ್ನು ವಿಕ್ಷೀಸಲು ಬರುವ ಪ್ರವಾಸಿಗರು ಗೋಕಾಕ ನಗರದಿಂದ ಸುಮಾರು 11 ಕಿ.ಮೀ., ಗೋಕಾಕ–ರೋಡ್‌ ರೈಲು ನಿಲ್ದಾಣ­ದಿಂದ ಸುಮಾ­ರು 5 ಕಿ. ಮೀ. ದೂರ ಕ್ರಮಿಸಬೇಕು. ಎರಡು ಕಡೆ­ಯಿಂದಲೂ ಬಸ್‌ ಸಂಚಾರ ವ್ಯವಸ್ಥೆ ಇದೆ.

ನಗರದಿಂದ ಮೇಲ್ಮಟ್ಟಿ ಗ್ರಾಮದ ಮುಖಾಂತರ ಪಾಶ್ಚಾಪುರಕ್ಕೆ ತೆರಳುವ ಎಲ್ಲ ಬಸ್‌ ಮತ್ತು ಮ್ಯಾಕ್ಸಿಕ್ಯಾಬ್‌ಗಳು ಗೊಡಚಿನಮಲ್ಕಿ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ನಿಲುಗಡೆ ಹೊಂದಿವೆ. ಈ ನಿಲುಗಡೆಯಿಂದ ಸುಮಾರು ಎರಡು ಕಿ.ಮೀ. ದೂರವನ್ನು ಕಾಲ್ನಡಿಗೆ ಅಥವಾ ಸ್ವಂತ ವಾಹನವಿದ್ದರೆ ಜಲಪಾತದ ಸನಿಹವೇ ತಲುಪಬಹುದು.

ಇನ್ನು ಗೋಕಾಕ–ರೋಡ್‌ ರೈಲ್ವೆ ನಿಲ್ದಾಣದಿಂದ ಗೊಡಚಿನಮಲ್ಕಿ ತಲುಪ ಬಯಸುವವರು ಮರಡೀಮಠ–ಕ್ರಾಸ್‌ ನಿಂದ ದಕ್ಷಿಣ ದಿಕ್ಕಿನತ್ತ ಮೇಲ್ಮಟ್ಟಿ ಮಾರ್ಗವಾಗಿ ಸುಮಾರು 5 ಕಿ.ಮೀ. ದೂರವನ್ನು ಕ್ರಮಿಸಿದರೆ ಜಲಪಾತ­ವನ್ನು  ತಲುಪಬಹುದು.

ಇಲ್ಲಿ ಯಾವುದೇ ವ್ಯವಸ್ಥಿತ ಹೋಟೆಲ್‌ ಅಥವಾ ಅಂಗಡಿಗಳಿಲ್ಲದಿರು­ವು­ದ­ರಿಂದ ಬರುವ ಪ್ರವಾಸಿಗರು ಮನೆ­ಯಿಂದಲೇ  ತಿಂಡಿ–ತಿನಿಸು ತೆಗೆದು­­ಕೊಂಡು ಬಂದರೆ ಒಳ್ಳೆಯದು. ಇದ­ಕ್ಕಾಗಿ ಸ್ವಯಂ ತಯಾರಿ ಮಾಡಿ­ಕೊಂಡು ಬಂದರೆ ಮಾತ್ರ ಇದೊಂದು ಕಣ್ಣಿಗೆ ರಸದೌತಣ ನೀಡುವ ಪ್ರವಾಸಿ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT