ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಕುಸಿದು 11 ಸಾವು

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಖಾಸಗಿ ಉಗ್ರಾಣ ಕಂಪೆನಿಯ ಆವರಣ ಗೋಡೆ ಗುಡಿ­ಸಲು­ಗಳ ಮೇಲೆ ಕುಸಿದು, 11 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿ­ಳುನಾಡಿನ ತಿರುವಲ್ಲೂರ್‌ ಜಿಲ್ಲೆಯ ಉಪ್ಪಾರಪಾಳ್ಯಂ ಎಂಬಲ್ಲಿ ನಡೆದಿದೆ.

ಶನಿವಾರ ರಾತ್ರಿ ಈ ಅವಘಡ ಸಂಭ­ವಿ­ಸಿದ್ದು, ಮೃತರ ಪೈಕಿ ಮಗು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ.
ಘಟನೆಯಲ್ಲಿ ಮೃತಪಟ್ಟವ­ರೆಲ್ಲರೂ ಕಟ್ಟಡ ಕಾರ್ಮಿಕರಾಗಿದ್ದು, ಒಂಬತ್ತು ಮಂದಿ ಆಂಧ್ರಪ್ರದೇಶದವ­ರಾಗಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ, ಉಗ್ರಾ­ಣದ ಮಾಲೀಕರಾದ ರಾಮನಾಥನ್‌ ಮತ್ತು ಅವರ ಸಹೋದರ ಬಾಲು ಅವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರವಣನ್‌ ತಿಳಿಸಿದ್ದಾರೆ.

‘ಕುಸಿದ ಕಾಂಪೌಂಡ್‌ನ ಅವಶೇಷ­ಗಳಡಿ ಸಿಲುಕಿದ್ದ ನಾಗರಾಜ್‌ ಎಂಬಾತ­ನನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಮೀ­ಪದ ಆಸ್ಪತ್ರೆಗೆ ದಾಖಲಿಸ­ಲಾ­ಗಿದೆ. ಶುಕ್ರವಾರ ರಾತ್ರಿ ಭಾರಿ ಮಳೆ ಸುರಿ­ದಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳನ್ನು ಕಳುಹಿಸಲು ನಾಯ್ಡು ಸೂಚನೆ: ಘಟನೆಯಲ್ಲಿ ಆಂಧ್ರದ 9 ಮಂದಿ  ಮೃತಪಟ್ಟಿರುವುದರ ಕುರಿತು ಕಳ­ವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ದು, ಘಟನಾ ಸ್ಥಳದಲ್ಲಿ ನಡೆಯು­ತ್ತಿ­ರುವ ಪರಿಹಾರ ಕಾರ್ಯಾಚರ­ಣೆಯ ಮೇಲ್ವಿಚಾರಣೆಗೆ ಅಧಿಕಾರಿ­ಗಳನ್ನು ಕಳುಹಿಸು­ವಂತೆ ನೆಲ್ಲೂರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಪರಿಹಾರ ಘೋಷಣೆ: ಮೃತಪಟ್ಟವರ ಕುಟುಂಬದ ಸಂಬಂಧಿಗಳಿಗೆ ಮುಖ್ಯ­ಮಂತ್ರಿ ಜಯ­ಲಲಿತಾ ತಲಾ ರೂ. 2 ಲಕ್ಷ ಹಾಗೂ ಗಾಯಗೊಂಡವರಿಗೆ ರೂ. 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊ­ಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT