ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಲ್ಲಿ ಬಿಪಾಶಾ–ಕರಣ್‌ ಸಂಭ್ರಮ

Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ನಟ ಕರಣ್‌ ಸಿಂಗ್‌ ಗ್ರೋವರ್‌ ತಮ್ಮ ಸ್ನೇಹತರ ಜತೆ ಜತೆ ಗೋವಾಕ್ಕೆ ತೆರಳಿದ್ದು, ಅಲ್ಲಿಯೇ ಕರಣ್ ಜನ್ಮದಿನವನ್ನೂ ಆಚರಿಸಿದ್ದಾರೆ. ಕರಣ್‌ ಸಿಂಗ್‌ ಗ್ರೋವರ್‌ ಮತ್ತು ಬಿಪಾಶಾ ಬಸು ಪ್ರೇಮದ ಬಲೆಗೆ ಬಿದ್ದಿದ್ದಾರೆ ಎಂಬ ಬಿ–ಟೌನ್‌ ಗಾಳಿಸುದ್ದಿಗೆ ಇದರಿಂದ ರೆಕ್ಕೆಪುಕ್ಕ ಮೂಡಿದಂತಾಗಿದೆ.

ಕರಣ್ ಇತ್ತೀಚಿಗಷ್ಟೆ ತಮ್ಮ ಎರಡನೇ ಪತ್ನಿ ಜೆನ್ನಿಫರ್‌ ವಿಂಗೆಟ್‌ ಅವರಿಂದ ದೂರವಾಗಿದ್ದಾರೆ. ನಿನ್ನೆ (ಫೆ.23) 33ನೇ ವರ್ಷಕ್ಕೆ ಕಾಲಿರಿಸಿರುವ ಕರಣ್ ಮತ್ತು ಬಿಪಾಶಾ ‘ಅಲೋನ್‌’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಬಿಪಾಶಾ ಗೋವಾ ಪ್ರಯಾಣ ಮತ್ತು ಸಂಭ್ರಮದ ಸರಣಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಸಂಭ್ರಮಾಚರಣೆಯಲ್ಲಿ ಬಿಪಾಶಾ ಆಪ್ತರಾದ ವಿನ್ಯಾಸಕ ರಾಕಿ ಎಸ್‌, ಫಿಟ್‌ನೆಸ್‌ ತಜ್ಞ ಡೀನ್‌ ಪಾಂಡೆ ಮತ್ತು ರೂಪದರ್ಶಿ ಕ್ಯಾಂಡಿಸ್‌ ಪಿಂಟೊ ಕೂಡ ಇದ್ದಾರೆ.

‘ಗೋವಾ...!!! ಲಾಂಗ್‌ ಡ್ರೈವ್‌!! ಕೋತಿಯ ಹುಟ್ಟುಹಬ್ಬದ ಪಾರ್ಟಿ ಆರಂಭ..’ ತಾವು ಹಂಚಿಕೊಂಡ ಚಿತ್ರಗಳಿಗೆ ಬಿಪಾಶಾ ಹೀಗೆ ಚಿತ್ರ ಶೀರ್ಷಿಕೆಯನ್ನೂ ನೀಡಿದ್ದಾರೆ. ಬಿಪಾಶಾ ಇದಕ್ಕೂ ಮೊದಲು ಜಾನ್‌ ಅಬ್ರಾಹಾಂ ಮತ್ತು ಹರ್ಮನ್‌ ಬವೇಜಾ ಅವರೊಂದಿಗೆ ಕೂಡ ಡೇಟಿಂಗ್‌ ಮಾಡಿದ್ದರು. ಈ ವಿಷಯದಲ್ಲಿ ಕರಣ್‌ ಕೂಡ ಹಿಂದೆ ಬಿದ್ದಿಲ್ಲ. ಈ ಹಿಂದೆ ಶ್ರದ್ಧಾ ನಿಗಂ ಅವರನ್ನು ಮದುವೆಯಾಗಿದ್ದ ಕರಣ್‌ ನಂತರ ಕೊರಿಯೊಗ್ರಾಫರ್‌ ನಿಕೋಲ್‌ ಅಲ್ವಾರೆಸ್‌ ಅವರೊಂದಿಗೆ ಪ್ರೀತಿಯಾಟವಾಡಿ ನಂತರ ಜೆನ್ನಿಫರ್‌ ತೆಕ್ಕೆಗೆ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT