ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರೇಜ್‌ನಲ್ಲಿ ಬಂಧನದಲ್ಲಿದ್ದ ಬಾಲಕಿ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬ್ಯೂನಸ್‌ ಐರಸ್‌ (ಐಎಎನ್‌ಎಸ್/ಇಎಫ್‌ಇ): ಪೋಷಕರು ಒಂಬತ್ತು ವರ್ಷಗ­ಳಿಂದ  ದೈಹಿಕ ಕಿರುಕುಳ ನೀಡಿ ಗ್ಯಾರೇಜ್‌ನಲ್ಲಿ ಕೂಡಿ ಹಾಕಿದ್ದ 15 ವರ್ಷದ ಬಾಲಕಿ­ಯೊಬ್ಬಳನ್ನು ಅರ್ಜೆಂಟಿನಾ ಪೊಲೀಸರು ಬುಧವಾರ ರಕ್ಷಿಸಿದ್ದಾರೆ.

ಬಾಲಕಿಗೆ ಹಳೆಯ ಪಾತ್ರೆಯೊಂದರ ಮೂಲಕ  ನೀರು ಹಾಗೂ ಬ್ರೆಡ್‌ ಅನ್ನು ನೀಡು­ತ್ತಿ­ದ್ದರು. ಅಲ್ಲದೇ ಆಕೆಯನ್ನು ಕೂಡಿಹಾಕಿದ್ದ   ಕೋಣೆಯಲ್ಲಿ ನಾಯಿ ಹಾಗೂ ಕೋತಿ ವಾಸವಾಗಿದ್ದವು.  ದೈಹಿಕವಾಗಿ ಕುಗ್ಗಿ ಹೋಗಿರುವ ಬಾಲಕಿಯು ಕೇವಲ 20 ಕೆ.ಜಿ ತೂಕ ಇದ್ದಾಳೆ. ಪ್ರಾಣಿಗಳು ತಿಂದುಳಿದ ಆಹಾರವನ್ನು ಆಕೆಗೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹೊರ ಪ್ರಪಂಚದ ಸಂಪರ್ಕವೇ ಸಿಗದಂತೆ 9 ವರ್ಷಗಳ ಕಾಲ ಒಬ್ಬಳನ್ನೇ ಗ್ಯಾರೇ­ಜ್‌­ನಲ್ಲಿ ಕೂಡಿ ಹಾಕಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಬಾಲ­ಕಿಯ ನಿಜವಾದ ಪಾಲಕರು ತುಂಬಾ ಬಡವರಾಗಿದ್ದು, ಏಳು ಮಕ್ಕಳನ್ನು ಹೊಂದಿ­ದ್ದಾರೆ. ಸಾಕಲು ಸಾಧ್ಯವಾಗದೇ ಈಕೆಯನ್ನು ಬೇರೇ ದಂಪತಿಗೆ ದತ್ತು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT