ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆಗೆ ಹಾಜರಾಗಿ: ಅಧಿಕಾರಿಗಳಿಗೆ ಸೂಚನೆ

Last Updated 23 ಜುಲೈ 2014, 9:17 IST
ಅಕ್ಷರ ಗಾತ್ರ

ಆನೇಕಲ್‌: ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆ­ಗಳಲ್ಲಿ ಹಾಜರಾಗುವು­ದರಿಂದ ಸಮಸ್ಯೆ­ಗಳ ಬಗ್ಗೆ ಪೂರ್ಣ ಚಿತ್ರಣ ದೊರೆ­ಯು­ತ್ತದೆ. ಸಮಸ್ಯೆಗಳ ನಿವಾರಣೆಗೆ ಅನುಕೂ­ಲ­ವಾಗುತ್ತದೆ. ಹೀಗಾಗಿ ಅಧಿಕಾರಿಗಳು ಗ್ರಾಮಸ­ಭೆಗ­ಳಿಗೆ ಕಡ್ಡಾಯವಾಗಿ ಹಾಜ­ರಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಶೋ­ಕನ್‌ ನುಡಿದರು.

ಅವರು ತಾಲ್ಲೂಕಿನ ಇಂಡ್ಲ­ವಾಡಿಯಲ್ಲಿ ಮಂಗಳವಾರ ನಡೆದ ಗ್ರಾಮಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 
ಪಡಿತರ ಚೀಟಿ ವಿತರಣೆ, ಆಶ್ರಯ ಫಲಾನು­ಭವಿಗಳ ಆಯ್ಕೆ, ನಿವೇಶನಗಳ ಹಂಚಿಕೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ­ದಲ್ಲಿ­ರುವ ತೊಡಕುಗಳ ಬಗ್ಗೆ ಗ್ರಾಮಸಭೆಯಲ್ಲಿ ಜನರು ಬೆಳಕು ಚೆಲ್ಲಬೇಕು. ಯಾವುದೇ ಯೋಜನೆಗೆ ಫಲಾ­ನುಭವಿಗಳನ್ನು ಆಯ್ಕೆ ಮಾಡಲು ಹಾಗೂ ವಿವಿಧ ಕಾಮ­-ಗಾರಿಗಳನ್ನು ಕೈಗೊಳ್ಳುವ ಮುನ್ನ ವಾರ್ಡ್‌­ಸಭೆಯಲ್ಲಿ ಅಭಿಪ್ರಾಯ ಪಡೆದು ಗ್ರಾಮಸಭೆಯಲ್ಲಿ ಮಂಡಿ­ಸಬೇಕು. ಇದರಿಂದ ಆಡಳಿತ ವಿಕೇಂ­ದ್ರೀಕರಣ ಅರ್ಥಪೂರ್ಣ­ವಾಗುತ್ತದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಅಚ್ಯುತ­ರಾಜು ಮಾತನಾಡಿ ಸರ್ಕಾರ ಅನು­ದಾನ­ಗಳನ್ನು ಮಂಜೂರು ಮಾಡು­ವಾಗ ಹಿಂದುಳಿದ ಹಾಗೂ ಗಡಿಭಾ­ಗದಲ್ಲಿರುವ ಗ್ರಾ.ಪಂ.ಗಳಿಗ ವಿಶೇಷ ಅನುದಾನ ಮಂಜೂರು ಮಾಡ­ಬೇಕು. ಇಂಡ್ಲ­ವಾಡಿ, ವಣಕನ­ಹಳ್ಳಿ ಮತ್ತು ಸಮಂದೂರು ಮತ್ತಿತರ ಗಡಿ­ಭಾಗದ ಗ್ರಾ.ಪಂ.ಗಳಲ್ಲಿ ನೌಕರರಿಗೆ ಸಂಬಳ ನೀಡಲು ಆದಾ­ಯವಿರುವುದಿಲ್ಲ. ಹಾಗಾಗಿ ಅನು­ದಾನ ಮಂಜೂರು ಮಾಡುವಾಗ ಎಲ್ಲ ಗ್ರಾ.ಪಂ. ಏಕರೂಪ ನೀತಿ ಅನುಸರಿಸ­ಬಾರದು ಎಂದರು.

ಜಿ.ಪಂ. ಸದಸ್ಯ ಜೆ.ನಾರಾ­ಯಣಪ್ಪ, ತಾ.ಪಂ. ಅಧ್ಯಕ್ಷೆ ಶೋಭಾಕೃಷ್ಣಪ್ಪ, ಸದಸ್ಯೆ ರತ್ನಮ್ಮ, ಗ್ರಾ.ಪಂ. ಅಧ್ಯಕ್ಷ ಕುಳ್ಳಪ್ಪ, ಉಪಾಧ್ಯಕ್ಷೆ ಜಯಶೀ್ರ, ಮಾಜಿ ಅಧ್ಯಕ್ಷರಾದ ಸುಮಾ ಶುಭಾ­ನಂದ್‌, ನಾರಯಣಪ್ಪ, ಮಾಜಿ ಉಪಾ­ಧ್ಯಕ್ಷ ರಾಮಕೃಷ್ಣಪ್ಪ, ಗೋವಿಂದ­ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT