ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್ ಬೀ- ಈಟರ್

ಹಕ್ಕಿ ಗೀತ
Last Updated 28 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೀಟ ತಿನ್ನುವ ಹಸಿರು ಹಕ್ಕಿ ಗ್ರೀನ್ ಬೀ ಈಟರ್. ತಲೆಯ ಮೇಲೆ ಚಿನ್ನದ ಗೆರೆಗಳಿರುವ ಈ ಹಸಿರು ಹಕ್ಕಿಯ ಗಲ್ಲದ ಭಾಗದಲ್ಲಿ ನೀಲಿ ಬಣ್ಣ ಇದೆ. ಎತ್ತರದ ಸ್ಥಳದಲ್ಲಿ ಕುಳಿತಾಗ ಅದನ್ನು ಪತ್ತೆಹಚ್ಚುವುದು ಸುಲಭ. ಹಾಗೆ ಕುಳಿತಾಗ ಅದರ ಉದ್ದದ ಬಾಲ ಸಾಕಷ್ಟು ಕೆಳಕ್ಕೆ ಬಾಗಿ, ಸೂಜಿಯಂತೆ ಕಾಣುತ್ತದೆ. ಬೀ ಈಟರ್‌ನ ಸಣ್ಣ ಕಪ್ಪು ಕೊಕ್ಕು ಹಾರುವ ಕೀಟಗಳನ್ನು ಹಿಡಿದು ಗಬಕ್ಕನೆ ಬಾಯಿಯೊಳಗೆ ಹಾಕಿಕೊಳ್ಳಲು ಅನುಕೂಲ ಮಾಡಿಕೊಡುವಂತಿದೆ.

ಕೆಂಪು ಕಣ್ಣುಗಳಿದ್ದು, ಅವುಗಳಿಂದ ಕೊಕ್ಕು ಹಾಗೂ ತಲೆಯನ್ನು ಸಂಪರ್ಕಿಸುವಂತೆ ಕಪ್ಪು ಗೆರೆಗಳು ಮೂಡಿವೆ. ಎರಡು ದೊಡ್ಡ ಬೆರಳುಗಳಿಂದ ಮೂಡಿಸಿದ ಗೆರೆಗಳಷ್ಟು ದಪ್ಪಗೆ ಅವು ಇವೆ. ಕೀಟಗಳನ್ನೇ ಆಹಾರವಾಗಿ ನೆಚ್ಚಿಕೊಂಡಿರುವ ಈ ಹಕ್ಕಿಗಳು ಹೆಚ್ಚು ಎತ್ತರಕ್ಕೇನೂ ಹಾರುವುದಿಲ್ಲ. ಬೇಟೆ ಸಿಕ್ಕಿದ್ದೇ ತಮ್ಮ ತಾವಿಗೆ ಮರಳಿ ವಿರಮಿಸುತ್ತವೆ. ಹಾರುವಾಗ ಇವುಗಳ ರೆಕ್ಕೆಯ ಚಿನ್ನದ ಭಾಗ ಫಳಫಳ ಹೊಳೆಯುತ್ತವೆ.

ತಮಾಷೆ:
ಮರದ ಕೊಂಬೆಗಳಿಗೆ ಪದೇಪದೇ ಬಡಿಯುವ ಮೂಲಕ ತಾವು ಹಿಡಿದ ಕೀಟಗಳ ಕೊಂಡಿಗಳನ್ನು ಈ ಹಕ್ಕಿಗಳು ಉದುರುವಂತೆ ಮಾಡುತ್ತವೆ. ಆಮೇಲಷ್ಟೇ ಅವುಗಳ ಸೇವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT