ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಮತಯಂತ್ರಗಳ ಸ್ವಚ್ಛತೆ

Last Updated 8 ಫೆಬ್ರುವರಿ 2016, 10:26 IST
ಅಕ್ಷರ ಗಾತ್ರ

ಚನ್ನಪಟ್ಟಣ: ಇದೇ 13 ರಂದು ನಡೆಯುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಾಗಿ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಿದ್ಧಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

2014ರ ಲೋಕಸಭಾ ಚುನಾವಣೆ ನಂತರ ಸುಮಾರು 20 ತಿಂಗಳಿನಿಂದ ಕೊಠಡಿ ಸೇರಿದ್ದ ಎಲೆಕ್ಟ್ರಾನಿಕ್ ಮತ ಯಂತ್ರಗಳಿಗೆ ಈಗ ಮತ್ತೆ ಬೇಡಿಕೆ ಬಂದಿದ್ದು, ಕಳೆದ ಚುನಾವಣೆ ವೇಳೆ ಯಂತ್ರಗಳ ಮೇಲೆ ಅಂಟಿಸಿದ್ದ ಚೀಟಿಗಳು, ಪಟ್ಟಿಗಳು, ಸೀಲುಗಳನ್ನು ತೆಗೆದು ಸ್ವಚ್ಚಗೊಳಿಸಲು ಮುಂದಾಗಿರುವ ಸಿಬ್ಬಂದಿಗಳು ಲಿಕ್ವಿಡ್ ಗಳನ್ನು ಬಳಸಿ ಯಂತ್ರಗಳನ್ನು ಸ್ವಚ್ಚಗೊಳಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 207 ಮತಗಟ್ಟೆಗಳಿದ್ದು, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಎರಡು ಚುನಾವಣೆ ನಡೆಯುವುದರಿಂದ ಮತಗಟ್ಟೆವೊಂದಕ್ಕೆ ಎರಡೆರಡು ಯಂತ್ರಗಳಂತೆ ಒಟ್ಟು 414 ಮತ ಯಂತ್ರಗಳು ಬೇಕಾಗಿರುವುದರಿಂದ ಅವುಗಳನ್ನು ಸ್ವಚ್ಛಗೊಳಿಸಿ, ಅಲ್ಪಸ್ವಲ್ಪ ಕೆಟ್ಟಿರುವ ಯಂತ್ರಗಳ ರಿಪೇರಿ ಮಾಡಿ ಮತದಾನದ ವೇಳೆಗೆ ಅವುಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಮತಯಂತ್ರಗಳನ್ನು ಪೆಟ್ಟಿಗೆಗೆ ಹಾಕಿ ಭದ್ರವಾಗಿ ಇಟ್ಟಿದ್ದರಿಂದ ಮತಯಂತ್ರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ತಾಲ್ಲೂಕಿನ 5 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ವಿವಿಧ ರಾಜಕೀಯ ಪಕ್ಷ ಹಾಗೂ ಪಕ್ಷೇತರರು ಸೇರಿದಂತೆ 20 ಅಭ್ಯರ್ಥಿಗಳು ಹಾಗೂ 19 ತಾಲ್ಲೂಕು ಪಂಚಾಯ್ತಿ ಕ್ಷೇತ್ರಕ್ಕೆ 49 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT