ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಯ ದುಸ್ಥಿತಿ ಸರಿಪಡಿಸಿ

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ವಾರ್ಡ್‌ ನಂ. 160, ರಾಜರಾಜೇಶ್ವರಿ ನಗರದ ಬಿ.ಇ.ಎಂ.ಎಲ್‌ ಬಡಾವಣೆಗೆ ಸೇರಿದ 4ನೇ ಹಂತದಲ್ಲಿರುವ, 9ನೇ ಕ್ರಾಸ್‌, ರಾಘವೇಂದ್ರ ಸ್ವಾಮಿಗಳ ಮಠದಿಂದ ಹಲಗೇವಡೇರಹಳ್ಳಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ನಿರ್ಮಿತವಾಗುತ್ತಿರುವ ಚರಂಡಿ ದುಸ್ಥಿತಿಯಲ್ಲಿದೆ. ಮಳೆ ಬಂದಾಗ ಈ  ಮೋರಿಯಲ್ಲಿ ನೀರು ಹರಿಯುವುದು ಕಷ್ಟ. ಈ ಮೋರಿ ಮೇಲೆ ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನೂ ಸರಿಯಾಗಿ  ಜೋಡಿಸಿಲ್ಲ.

ಮೋರಿಯಲ್ಲಿ ಮರ ಗಿಡಗಳ ಬೇರುಗಳು ಬೆಳೆದು ನಿಂತು ನೀರು ಹರಿಯುವುದಕ್ಕೆ ಅಡ್ಡಿಯಾಗುತ್ತಿದೆ. ಇದರಿಂದಾಗಿ ಸೊಳ್ಳೆ ಸಂತತಿ ಹೆಚ್ಚುತ್ತಿದ್ದು, ಹಾವುಗಳು, ಚೇಳುಗಳೂ ಆಗಾಗ ಕಾಣಿಸಿಕೊಳ್ಳುತ್ತವೆ. ನಗರ ಪಾಲಿಕೆ ಅಧಿಕಾರಿಗಳು ಈ ರಸ್ತೆಗೆ ಖುದ್ದಾಗಿ ಭೇಟಿ ನೀಡಿ ಈ ರಸ್ತೆ ಹಾಗೂ ಮೋರಿಯ ಸ್ಥಿತಿಯನ್ನು ಕಣ್ಣಾರೆ ಕಾಣಬಹುದು. ಆಗಲಾದರೂ ಇಲ್ಲಿನ ಸಾರ್ವಜನಿಕರು ಅನುಭವಿಸುತ್ತಿರುವ ಕಷ್ಟ ಅವರಿಗೆ ಅರ್ಥವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT