ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ–ಮಾತುಕತೆಗಳು ಸಂಸತ್ತಿನ ಜೀವಾಳ‌: ಪ್ರಧಾನಿ

Last Updated 26 ನವೆಂಬರ್ 2015, 5:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾತುಕತೆಗೆ ಸಂಸತ್ತಿನ ಕಲಾಪಕ್ಕಿಂತಲೂ ಉತ್ತಮ ವೇದಿಕೆ ಮತ್ತೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಿಳಿಸಿದ್ದಾರೆ. ಈ ಮೂಲಕ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಬಗೆಯ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂಬ ಸುಳಿವು ನೀಡಿದರು.

ಗುರುವಾರ ಆರಂಭಗೊಂಡ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ತಿನ ಹೊರಗೆ ಅವರು ಮಾತನಾಡಿದರು.

‘ಮಾತುಕತೆಗೆ ಸಂಸತ್ತಿನ ಕಲಾಪಕ್ಕಿಂತ ದೊಡ್ಡದಾದ ಮತ್ತೊಂದು ವೇದಿಕೆ ಇರಲು ಸಾಧ್ಯವಿಲ್ಲ. ಚರ್ಚೆಗಳು, ವಿವಾದಗಳು ಹಾಗೂ ಮಾತುಕತೆಗಳು ಸಂಸತ್ತಿನ ಆತ್ಮ. ಇತರ ವಿಷಯಗಳಿಗೆ ಇಡೀ ದೇಶವೇ ಅಖಾಡ’ ಎಂದರು.

ಬುಧವಾರ ನಡೆದ ಸರ್ವಪಕ್ಷಗಳ ಸಭೆ ಕುರಿತು ಮಾತನಾಡಿದ ಮೋದಿ, ಸಂಸತ್ತಿನ ಸುಗಮ ಕಲಾಪದ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT