ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಇಲ್ಲದೆ ಮಸೂದೆಗಳ ಅಂಗೀಕಾರ

ಕೃಷಿ ವಿಶ್ವವಿದ್ಯಾಲಯ, ಮಲೆಮಹದೇಶ್ವರ ಪ್ರಾಧಿಕಾರ
Last Updated 28 ಜುಲೈ 2014, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ವಿಜ್ಞಾನಗಳ ವಿಶ್ವ­ವಿದ್ಯಾಲಯ ತಿದ್ದುಪಡಿ ಮಸೂದೆ– 2014 ಮತ್ತು ಮಲೈ ಮಹದೇಶ್ವರ­ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ–2014ಕ್ಕೆ ಚರ್ಚೆ ಇಲ್ಲದೆ ವಿಧಾನಸಭೆ ಒಪ್ಪಿಗೆ ದೊರೆತಿದೆ.

ರಾಜ್ಯಪಾಲರು ಮತ್ತು ರಾಜ್ಯ ಸರ್ಕಾ­ರದ ನಿರ್ದೇಶನಗಳನ್ನು ಉಲ್ಲಂ­ಘಿ­ಸುವ ಹಾಗೂ ಅಧಿಕಾರ ದುರುಪ­ಯೋಗ­ಪಡಿ­ಸಿ­ಕೊಳ್ಳುವ ಕೃಷಿ  ವಿ.ವಿ ಕುಲ­ಪತಿ­ಗಳ ವಿರುದ್ಧ ಕ್ರಮ ಜರುಗಿ­ಸಲು ಕೃಷಿ ವಿಜ್ಞಾನಗಳ ವಿ.ವಿ ತಿದ್ದು­ಪಡಿ ಮಸೂದೆ ಸರ್ಕಾರಕ್ಕೆ ಅಧಿಕಾರ ನೀಡಲಿದೆ.
ಈ ತಿದ್ದುಪಡಿ ಪ್ರಕಾರ, ಕೃಷಿ ವಿಜ್ಞಾನ ವಿ.ವಿಗಳ ಕುಲಪತಿ ವಿರುದ್ಧ ಆರೋಪ­ಗಳು ಕೇಳಿಬಂದಾಗ ಆ ಕುರಿತು ತನಿಖೆ ನಡೆಸಲು ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ­ಯ­ವ­ರನ್ನು ನೇಮಿಸ­ಬೇಕು. ಅವರು ವಿಚಾರಣೆ ನಡೆಸಿ ಸೂಕ್ತ ಶಿಫಾರಸುಗ­ಳೊಂದಿಗೆ ವರದಿ ಸಲ್ಲಿಸ­ಬೇಕು. ವರದಿಯನ್ನು ಪರಿ­ಶೀ­ಲಿಸಿ, ಮುಂದಿನ ಕ್ರಮ ಕೈಗೊಳ್ಳು­ವಂತೆ ಸರ್ಕಾ­ರವು ರಾಜ್ಯಪಾಲರಿಗೆ ಶಿಫಾ­ರಸು ಮಾಡ­ಬೇಕು. ರಾಜ್ಯಪಾ­ಲರು ಕುಲ­ಪತಿಯ ಸೇವಾ ಅವಧಿ ಮುಕ್ತಾ­ಯಕ್ಕೆ ಮುನ್ನ ಅಥವಾ ವರದಿ ಕಳು­ಹಿಸಿದ ದಿನದಿಂದ 6 ತಿಂಗಳೊಳಗೆ ಕ್ರಮ ಜರುಗಿಸಬೇಕು.

ಉಸ್ತುವಾರಿ ಸಚಿವರಿಗೆ ಅಧಿಕಾರ: ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿ­ವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ­–2014, ಮುಖ್ಯಮಂತ್ರಿ­ ಅನು­ಪ­ಸ್ಥಿತಿ­­ಯಲ್ಲಿ ಜಿಲ್ಲಾ ಉಸ್ತು­ವಾರಿ ಸಚಿ­ವರು ಮಲೈ ಮಹದೇ­ಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾ­ರದ ಸಭೆ ನಡೆಸಲು ಅವಕಾಶ ಕಲ್ಪಿಸು­ತ್ತದೆ. ಪ್ರಾಧಿಕಾರಕ್ಕೆ ಐವರು ಸದಸ್ಯ­ರನ್ನು ನಾಮನಿರ್ದೇಶನ ಮಾಡಲೂ ಸರ್ಕಾರಕ್ಕೆ ಅಧಿಕಾರ ದೊರೆ­ಯ­ಲಿದೆ. ಈ ಪೈಕಿ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ­ವರು. ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸಬೇಕು.
ಈಗ ಇರುವ ಕಾಯ್ದೆಯ ವ್ಯಾಪ್ತಿ ‘ಮಲೈ ಮಹದೇಶ್ವರ ಬೆಟ್ಟಗಳಲ್ಲಿ’ ಇತ್ತು. ಅದನ್ನು ‘ಮಲೈ ಮಹದೇಶ್ವರ ಬೆಟ್ಟಕ್ಕೆ’ ಸೀಮಿತಗೊಳಿಸುವ ತಿದ್ದುಪಡಿ­ಯನ್ನು ಅಂಗೀಕರಿಸಲಾಗಿದೆ. ಪ್ರಾಧಿಕಾ­ರವು ₨ 10 ಲಕ್ಷ ಅಥವಾ ಅದನ್ನು ಮೀರುವ ವೆಚ್ಚ­ವ­ನ್ನೊ­ಳ­ಗೊಂಡ ಎಲ್ಲ ಕರಾರುಗಳ ಪ್ರತಿ­ಗಳನ್ನು ಸರ್ಕಾ­ರಕ್ಕೆ ಸಲ್ಲಿಸ­ಬೇಕು.

ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ಕೃಷಿ ವಿಜ್ಞಾನಗಳ ವಿ.ವಿ ತಿದ್ದುಪಡಿ ಮಸೂದೆಯನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ, ಮಲೈ ಮಹದೇಶ್ವರ­ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಸೂ­ದೆ­ಯನ್ನು ಕಾನೂನು ಸಚಿವ ಟಿ.ಬಿ.­ಜಯಚಂದ್ರ ಮಂಡಿಸಿದರು.
ಮೇಲ್ಮನೆಯಲ್ಲೂ ಅಂಗೀಕಾರ: ‘ಕರ್ನಾ­ಟಕ ಭೂ ಸುಧಾ­ರಣೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ – 2014’ ಮತ್ತು ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ–2014’ನ್ನು  ವಿಧಾನ­ಪರಿಷತ್ತು ಅಂಗೀಕರಿಸಿತು. ಎಂಇಎಸ್‌ ಕಾರ್ಯ­ಕರ್ತರ  ಪುಂಡಾ­ಟಿಕೆ ಕುರಿತು ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಬಿಜೆಪಿ ಸದ­ಸ್ಯರು ನಡೆಸಿದ ಧರಣಿ ನಡು­ವೆಯೇ  ಮಸೂ­ದೆ­  ಅಂಗೀಕಾರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT