ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗೆ ನಡುಗಿದ ಕಾಶ್ಮೀರ

Last Updated 18 ಡಿಸೆಂಬರ್ 2014, 11:13 IST
ಅಕ್ಷರ ಗಾತ್ರ

ಶ್ರೀನಗರ(ಪಿಟಿಐ): ಜಮ್ಮು-ಕಾಶ್ಮೀರದ ಲೇಹ್, ಕಾರ್ಗಿಲ್ ಹಾಗೂ ಲಡಾಖ್ ಪ್ರಾಂತ್ಯದಲ್ಲಿ ಮೈನಸ್ 14 ಡಿಗ್ರಿ ಸೆಲ್ಸಿಯಸ್ ನಷ್ಟು ಅತ್ಯಂತ ಕನಿಷ್ಠ ಉಷ್ಣಾಂಶ ಗುರುವಾರ ರಾತ್ರಿ ದಾಖಲಾಗಿದೆ. 

ಈ ಪ್ರದೇಶದಲ್ಲಿ ಕಳೆದ ರಾತ್ರಿ ಮೈನಸ್ 14.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬುಧವಾರ ರಾತ್ರಿ ಮೈನಸ್ 13 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈ ಕೊರೆಯುವ ಚಳಿಗೆ ಜನರು ತತ್ತರಿಸಿದ್ದು, ದೇಹವನ್ನು ಬೆಚ್ಚಗಿರಿಸಲು ಉಲ್ಲನ್ ಧಿರಿಸುಗಳ ಮೊರೆ ಹೋಗಿದ್ದಾರೆ. ಬೆಂಕಿ ಕಾಯಿಸುವಲ್ಲಿ ನಿರತರಾಗಿದ್ದಾರೆ.

ಲೇಹ್ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಂತ ಕನಿಷ್ಠ ಮೈನಸ್ 14.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಾರ್ಗಿಲ್ ಮತ್ತು ಲಡಾಖ್ ಪ್ರಾಂತ್ಯಗಳು ನಂತರದ ಸ್ಥಾನದಲ್ಲಿದ್ದು, ಮೈನಸ್ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರ ನಗರಗಳಲ್ಲಿ ಮೈನಸ್ 4.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT