ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾ ವ್ಯಾಪಾರಿಯ ಮಗಳಿಗೆ ಶೇ 98 ಅಂಕ

Last Updated 23 ಮೇ 2016, 20:01 IST
ಅಕ್ಷರ ಗಾತ್ರ

ಬೆಂಗಳೂರು: ಚಹಾ ಅಂಗಡಿಯ ವ್ಯಾಪಾರಿಯೊಬ್ಬರ ಪುತ್ರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೆ 98.08  (613) ಅಂಕಗಳನ್ನು ಪಡೆಯುವ ಮೂಲಕ ಬಡತನದಲ್ಲಿಯೂ ಸಾಧನೆ ಮೆರೆದಿದ್ದಾಳೆ.

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ನಾಗವಾರದ ಶ್ರೀ ಶಾರದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಫರಾನ್‌ ಸಮ್ರೀನ್‌ , ಇಂಗ್ಲಿಷ್‌–124, ಕನ್ನಡ –99, ಹಿಂದಿ–93, ಗಣಿತ–98, ವಿಜ್ಞಾನ–99 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದಿದ್ದಾಳೆ.

ಸಾರಾಯಿಪಾಳ್ಯದಲ್ಲಿ ಚಹಾ ಅಂಗಡಿ ನಡೆಸುತ್ತಿರುವ ಅಶ್ವಥನಗರದ ಟೆಲಿಕಾಂ ಬಡಾವಣೆಯ ನಿವಾಸಿ ಸುಹೇಲ್‌ ಅಹಮದ್‌ ಹಾಗೂ ನಾಜಿಯಾ ಬೇಗಂ ದಂಪತಿಯ ಪುತ್ರಿ ಫರಾನ್‌ ಸಮ್ರೀನ್‌ಗೆ ಪಿಯುಸಿಯಲ್ಲಿ ವಿಜ್ಞಾನ ಓದುವ ಆಸೆ.

ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಎಂಜಿನಿಯರಿಂಗ್‌ನಲ್ಲಿ ಓದಿ ಉತ್ತಮ ಕೆಲಸ ಪಡೆದು ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುವುದು ಈಕೆಯ ಹೆಬ್ಬಯಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT