ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲ್ತಿಗೆ ಬರುತ್ತಿದೆ ಸ್ಟಾಪ್‌ ಮೋಷನ್‌

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅನಿಮೇಷನ್‌ ತಂತ್ರಜ್ಞಾನ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. 2ಡಿ ಹಾಗೂ 3ಡಿ ಅನಿಮೇಷನ್‌ಗಳ ನಂತರ ‘ಸ್ಟಾಪ್‌ ಮೋಷನ್‌’ ಅನಿಮೇಷನ್‌ ಸದ್ದು ಮಾಡುತ್ತಿದೆ. ವಾಸ್ತವ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಗಳ ಚಲನೆಯನ್ನು ತೋರಿಸುವ ಈ ತಂತ್ರಜ್ಞಾನ ವಿದೇಶಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಇದೀಗ ಭಾರತದಲ್ಲೂ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ.

‘ತಾರೆ ಜಮೀನ್‌ ಪರ್‌’ ಹಿಂದಿ ಚಿತ್ರದ ಟೈಟಲ್‌ ಟ್ರ್ಯಾಕ್‌ ಅನ್ನು ಇದೇ ತಂತ್ರಜ್ಞಾನದಲ್ಲಿ ತಯಾರಿಸಿರುವುದನ್ನು ನೆನಪಿಸಿಕೊಳ್ಳಬಹುದು. ಚಲನಚಿತ್ರ, ಜಾಹೀರಾತು ನಿರ್ಮಾಣದಲ್ಲಿ ಉಪಯೋಗವಾಗುವ ಸ್ಟಾಪ್‌ ಮೋಷನ್‌ ಅನಿಮೇಷನ್‌ ಶಿಕ್ಷಣವನ್ನು ಕಲಿಸುವ ಶಾಲೆಯೊಂದು ಬೆಂಗಳೂರಿನಲ್ಲಿದೆ. ವಿಜ್‌ಟೂನ್ಜ್‌ ಕಾಲೇಜ್‌ ಆಫ್‌ ಮೀಡಿಯಾ ಆ್ಯಂಡ್‌ ಡಿಸೈನ್‌ ನವೆಂಬರ್‌್ 5ರಿಂದ ಸ್ಟಾಪ್‌ ಮೋಷನ್‌ ಅನಿಮೇಷನ್‌ ಅಡ್ವಾನ್ಸ್‌ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸುತ್ತಿದೆ.

‘ಇಲ್ಲಿ ಸಿಂಥೆಟಿಕ್‌ ಕ್ಲೇಯಿಂದ ಪಾತ್ರಗಳನ್ನು ಸೃಷ್ಟಿಸುವುದು, ಪ್ರೂಫ್‌ ಡಿಸೈನಿಂಗ್‌, ಸೆಟ್‌ ಡಿಸೈನಿಂಗ್‌, ಆರ್ಮೇಚರ್ ಮೇಕಿಂಗ್‌, ಕ್ಲೇ ಮಾಡೆಲಿಂಗ್‌, ಲಿಪ್‌ ಸಿಂಕ್‌ ಹಾಗೂ ಅನಿಮೇಷನ್‌ ವಿಷಯಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಎರಡು ತಿಂಗಳ ಈ ಕೋರ್ಸ್‌ನ ಪ್ರತಿ ಬ್ಯಾಚ್‌ಗೆ 25 ಮಂದಿಯನ್ನು ನೋಂದಣಿ ಮಾಡಿಸಿಕೊಳ್ಳಲಾಗುತ್ತದೆ. 18 ವರ್ಷ ಮೇಲ್ಪಟ್ಟ ಆಸಕ್ತರು ಕೋರ್ಸ್‌ ಕಲಿಯಬಹುದು. ಇಲ್ಲಿ ವಿದ್ಯಾರ್ಹತೆ ಅಗತ್ಯವಿಲ್ಲ. ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿ ಸ್ವಉದ್ಯೋಗ ಕಂಡುಕೊಳ್ಳಬಹುದು.

ಒಂದು ಕ್ಯಾಮೆರಾ, ಕಂಪ್ಯೂಟರ್‌, ಗೊಂಬೆಗಳನ್ನು ಮಾಡಲು ಬೇಕಾಗುವ ಕಚ್ಚಾ ವಸ್ತುಗಳು, ಲೈಟಿಂಗ್ಸ್‌, ಬ್ಲೂ ಸ್ಕ್ರೀನ್‌ ಇಟ್ಟುಕೊಂಡು ಚಿಕ್ಕ ಕೊಠಡಿಯಲ್ಲೇ ಕಿರುಚಿತ್ರ, ಜಾಹೀರಾತು ನಿರ್ಮಾಣ ಮಾಡಬಹುದು. ದೊಡ್ಡ ಪ್ರಮಾಣದ ಸಿನಿಮಾಗಳನ್ನು ಮಾಡುವುದಾದರೆ ಸ್ಟುಡಿಯೊ ಬೇಕಾಗುತ್ತದೆ. ಇಲ್ಲಿ ಕಲ್ಪನೆಯೇ ಪ್ರಧಾನವಾಗಿರುವುದರಿಂದ ಕ್ರಿಯಾತ್ಮಕವಾಗಿ ಯೋಚಿಸುವ, ಆಸಕ್ತರಿಗೆ ಭವಿಷ್ಯವಿದೆ’ ಎನ್ನುತ್ತಾರೆ ವಿಜ್‌ಟೂನ್ಜ್‌ ಕಾಲೇಜ್‌ ಆಫ್‌ ಮೀಡಿಯಾ ಆ್ಯಂಡ್‌ ಡಿಸೈನ್‌ನ ಸಿಇಒ ವಿ.ಟಿ. ಶ್ರೀಧರ್‌.

ಏನಿದು ಸ್ಟಾಪ್‌ ಮೋಷನ್ ?
2ಡಿ ಹಾಗೂ 3ಡಿ ಅನಿಮೇಷನ್‌ ತಂತ್ರಜ್ಞಾನಕ್ಕಿಂತ ಸ್ಟಾಪ್‌ ಮೋಷನ್‌ ಅನಿಮೇಷನ್‌ ಕೊಂಚ ಭಿನ್ನವಾದದ್ದು. ಇಲ್ಲಿ ನೈಜ ಪಾತ್ರಗಳನ್ನು ಸೃಷ್ಟಿಸಬೇಕು. ಅಂದರೆ ಕಥೆಗೆ ತಕ್ಕಂತೆ ಚಿತ್ರ ಬರೆದುಕೊಳ್ಳಬೇಕು. ಆ ಚಿತ್ರಗಳಿಗೆ ತಕ್ಕಂತೆ ಸಿಂಥೆಟಿಕ್‌ ಕ್ಲೇನಿಂದ ಗೊಂಬೆಗಳನ್ನು ಸೃಷ್ಟಿ ಮಾಡಬೇಕು. ಉದಾಹರಣೆಗೆ ಒಂದು ಉದ್ಯಾನವನ್ನು ತೋರಿಸಬೇಕೆಂದುಕೊಂಡರೆ, ಮರ, ಬಳ್ಳಿ, ಕೊಳ, ಪಾದಚಾರಿ ಮಾರ್ಗ, ಬೆಂಚಿನ ಮೇಲೆ ಕುಳಿತ ಮನುಷ್ಯರು.... ಹೀಗೆ ಪಾತ್ರಗಳನ್ನು ಗೊಂಬೆಗಳಾಗಿ ಸೃಷ್ಟಿ ಮಾಡಿಕೊಳ್ಳಬೇಕಾಗುತ್ತದೆ.

ಗೊಂಬೆಗಳ ಚಲನೆಯನ್ನು ಸೆಕೆಂಡಿಗೆ 24ರಂತೆ ಫೋಟೊಗಳನ್ನು ತೆಗೆದುಕೊಳ್ಳಲಾಗುತ್ತದೆ. ನಂತರ ಅನಿಮೇಷನ್‌ ಸಾಫ್ಟ್‌ವೇರ್‌ನಲ್ಲಿ ಸಂಕಲನ ಮಾಡಲಾಗುತ್ತದೆ. ಆ ಸಂಕಲನ ಮಾಡಿದ ಚಿತ್ರಕ್ಕೆ ಹಿನ್ನೆಲೆ ಧ್ವನಿಯನ್ನೂ ಕೊಡಲಾಗುತ್ತದೆ. ಅಂತಿಮವಾಗಿ ತೆರೆಯ ಮೇಲೆ ನೈಜವಾಗಿ ಚಿತ್ರ ಮೂಡಿಬರುತ್ತದೆ. ಕಿರು ಚಿತ್ರಗಳಿಂದ ಸಿನಿಮಾಗಳವರೆಗೆ, ಜಾಹೀರಾತು ಹಾಗೂ ಕಾರ್ಟೂನ್‌ ಚಿತ್ರ ನಿರ್ಮಾಣದಲ್ಲಿ ಈ ತಂತ್ರಜ್ಞಾನ ಹೆಚ್ಚು ಬಳಕೆಯಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿಮೇಷನ್‌ ಬಹುಕೋಟಿ ಉದ್ಯಮವಾಗಿ ಗುರುತಿಸಿಕೊಂಡಿದೆ.

ಬೇರೆ ಬೇರೆ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟಲ್‌ ಸೌಲಭ್ಯವೂ ಇಲ್ಲಿದೆ. ಎರಡು ತಿಂಗಳಲ್ಲಿ ನೂರು ಗಂಟೆಗಳ ತರಗತಿಗಳಿರುತ್ತವೆ. ಅನಿಮೇಷನ್‌ ಕಲಿಕೆಗೆ ಅನುಕೂಲವಾಗುವ ಸ್ಟುಡಿಯೊ, ಗ್ರಂಥಾಲಯವಿದೆ. ಅಕ್ಟೋಬರ್‌ 25 ನೋಂದಣಿಗೆ ಕೊನೆಯ ದಿನವಾಗಿದೆ. ಸ್ಟಾಪ್‌ ಮೋಷನ್‌ ಸರ್ಟಿಫಿಕೇಟ್‌ ಕೋರ್ಸ್‌ ಅಲ್ಲದೇ ಎರಡು, ಮೂರು ವರ್ಷಗಳ ಪದವಿ ಕೋರ್ಸ್‌ಗಳಿವೆ.

ವಿಪುಲ ಉದ್ಯೋಗಾವಕಾಶ
ಅನಿಮೇಷನ್‌ ಕ್ಷೇತ್ರ ಪ್ರತಿಭಾವಂತರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ವಿಡಿಯೊ ಸಂಕಲನ ಕೇಂದ್ರಗಳು, ಜಾಹೀರಾತು ಏಜೆನ್ಸಿಗಳು, ಸಾಫ್ಟ್‌ವೇರ್‌ ಕಂಪೆನಿಗಳು, ಕಂಪ್ಯೂಟರ್‌ ವ್ಯವಸ್ಥೆ ರೂಪಿಸುವ ಸಂಸ್ಥೆಗಳು, ವಿಡಿಯೊ ಗೇಮ್‌ ತಯಾರಿಕಾ ಕಂಪೆನಿಗಳಲ್ಲಿ ಈ ಕೋರ್ಸ್‌ ಮಾಡಿದವರಿಗೆ ಉದ್ಯೋಗಾವಕಾಶಗಳಿವೆ. ಇವುಗಳಲ್ಲದೇ ವಾಸ್ತುಶಿಲ್ಪ, ಗೃಹಾಲಂಕಾರ ಕ್ಷೇತ್ರಗಳಲ್ಲೂ ಈಗ ಅನಿಮೇಷನ್‌ ಜನಪ್ರಿಯ ಆಗುತ್ತಿದೆ. ಉತ್ತಮ ವೇತನ ಸಿಗುವ ನೌಕರಿಯನ್ನೂ ಪಡೆಯಬಹುದು.
ಸ್ಥಳ: ವಿಜ್‌ಟೂನ್ಜ್‌ ಕಾಲೇಜ್‌ ಆಫ್‌ ಮೀಡಿಯಾ ಆ್ಯಂಡ್‌ ಡಿಸೈನ್‌, ನಂ64, 13ನೇ ಕ್ರಾಸ್‌, 3ನೇ ಹಂತ, ಜೆ.ಪಿ.ನಗರ, ಬೆಂಗಳೂರು. 560078.
ಮಾಹಿತಿಗೆ: www.wiztoonz.com,
080 26592828/ 99166 45635/99166 45614.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT