ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಂಬರಂ ವಿರುದ್ಧ ತಿರುಗಿಬಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು

ತಮಿಳುನಾಡು ಗುಂಪುಗಾರಿಕೆ ಉಲ್ಬಣ
Last Updated 30 ಮೇ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಲೋಕಸಭಾ ಚುನಾ­ವಣೆ ಹೀನಾಯ  ಸೋಲಿನ ಬಳಿಕ ತೀವ್ರ ಹತಾಶೆಗೆ ಒಳಗಾಗಿರುವ ತಮಿಳು­ನಾಡು ಕಾಂಗ್ರೆಸ್‌  ಘಟಕದಲ್ಲಿಯ  ಗುಂಪುಗಾರಿಕೆ ಉಲ್ಬಣಗೊಂಡಿದ್ದು, ಬಹಿ­ರಂಗವಾಗಿ ಕೆಸರೆರಚಾಟ ನಡೆಯುತ್ತಿದೆ.

ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧ ಕಾಂಗ್ರೆಸ್‌ ರಾಜ್ಯ ನಾಯಕರು ಒಟ್ಟಾಗಿ  ತಿರುಗಿ ಬಿದ್ದಿ­ದ್ದಾರೆ. ಪಕ್ಷದ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಲು ಸಿದ್ಧರಿಲ್ಲದ  ಉಭಯ ಗುಂಪುಗಳು ಬಹಿರಂಗವಾಗಿ ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಿವೆ.

ಚಿದಂಬರಂ ಬೆಂಬಲಿಗರು ತಮಿಳು­ನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಎಸ್‌. ಜ್ಞಾನದೇಶಿಕನ್‌ ರಾಜೀ­ನಾಮೆಗೆ ಪಟ್ಟು ಹಿಡಿದ  ಬೆನ್ನಲ್ಲೇ  ವಿವಿಧ ಗುಂಪುಗಳಲ್ಲಿ ಹಂಚಿಹೋಗಿದ್ದ ಉಳಿದ ನಾಯಕರು ಒಗ್ಗಟ್ಟಾಗಿ ಚಿದಂ­ಬರಂ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ಯುಪಿಎ ಸರ್ಕಾರದಲ್ಲಿ ಹಣ­ಕಾಸು ಸಚಿವರಾಗಿದ್ದವರು ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾದ ಕಾರಣ ಕಾಂಗ್ರೆಸ್‌ ಚುನಾವಣೆಯಲ್ಲಿ ಭಾರಿ ಬೆಲೆ ತೆರಬೇಕಾಯಿತು. ಆಗ ಹಣ­ಕಾಸು ಸಚಿವರು ಯಾರಿದ್ದರು ಎಂಬುವುದು ಎಲ್ಲರಿಗೂ  ಚೆನ್ನಾಗಿ ಗೊತ್ತು’ ಎಂದು  ಕಾಂಗ್ರೆಸ್‌ ನಾಯಕ­ರಾದ ಕೊವೈ ತಂಗಂ, ರಾಯಪುರಂ ಮನೊ ಮತ್ತು ಎನ್‌. ರಂಗಭಾಷ್ಯಂ ಶುಕ್ರವಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಧ್ಯಮಗಳಿಗೆ ಪ್ರಕಟಣೆ ನೀಡಿದ ಎಲ್ಲರೂ ಕಾಂಗ್ರೆಸ್‌ ರಾಜ್ಯ  ನಾಯಕ­-ರಾದ ಜಿ.ಕೆ. ವಾಸನ್‌, ಇ.ವಿ.ಕೆ.ಎಸ್. ಇಳಂಗೋವನ್‌ ಮತ್ತು ಪಿಸಿಸಿ ಅಧ್ಯಕ್ಷ ಜ್ಞಾನದೇಶಿಕನ್‌ ಅವರ ಕಟ್ಟಾ ಬೆಂಬಲಿಗರು.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ನಿರ್ಧಾರದಿಂದ ಕಾಂಗ್ರೆಸ್‌ ಭದ್ರಕೋಟೆ­ಯಾಗಿದ್ದ ಆಂಧ್ರ ಪ್ರದೇಶದಲ್ಲಿ ಪಕ್ಷ ಹೆಸರಿಲ್ಲದಂತಾಯಿತು ಎಂದು ಈ ನಾಯಕರು ಚಿದಂಬರಂ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT