ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಧಾರಣೆ ₹450 ಏರಿಕೆ

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ (ಪಿಟಿಐ): ಮುಂಬೈ ಚಿನಿವಾರ ಪೇಟೆಯಲ್ಲಿ ಕಳೆದ ನಾಲ್ಕು ವಹಿವಾಟು ಅವಧಿಯಲ್ಲಿ ಇಳಿಮುಖವಾಗಿದ್ದ ಬಂಗಾರದ ಧಾರಣೆ ಶನಿವಾರ ಚೇತರಿಕೆ ಹಾದಿಗೆ ಮರಳಿತು.

10ಗ್ರಾಂಗೆ ₹450ರಷ್ಟು ಏರಿಕೆಯಾಗಿ, ₹26,230ರಂತೆ ವಹಿವಾಟು ನಡೆಸಿತು. ಗುರುವಾರ ₹10 ಗ್ರಾಂಗೆ ₹220
ರಷ್ಟು ಕರಗಿ, ₹25,780ಕ್ಕೆ ಇಳಿಕೆಯಾಗಿತ್ತು. ಈ ಮೂಲಕ ಒಂದೂವರೆ ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿತ್ತು.

ಹಬ್ಬದ ದಿನಗಳು ಹತ್ತಿರದಲ್ಲೇ ಇರುವುದರಿಂದ ದೇಶದ ಚಿನ್ನ ಸಂಗ್ರಹಕಾರರು ಮತ್ತು ಚಿನ್ನಾಭರಣ ಮಾರಾಟಗಾರರು ಹೆಚ್ಚಿನ ಖರೀದಿ ನಡೆಸಿದರು. ಇದರಿಂದ ಚಿನ್ನದ ಬೆಲೆ ಮತ್ತೆ ₹26 ಸಾವಿರದ ಗಡಿ ದಾಟಿತು ಎಂದು ವರ್ತಕರು ಹೇಳಿದ್ದಾರೆ.

ಬೆಳ್ಳಿ ಸಹ ಕೆ.ಜಿಗೆ ₹1,145ರಷ್ಟು ಭಾರಿ ಏರಿಕೆ ಕಂಡು, ₹36,070ರಂತೆ ಮಾರಾಟವಾಯಿತು.

ಮುಂಬೈ ಧಾರಣೆ: 10ಗ್ರಾಂ ಸ್ಟ್ಯಾಂಡರ್ಡ್‌ ಚಿನ್ನ ₹26,230ರಂತೆ, ಅಪರಂಜಿ ಚಿನ್ನ ₹26,380ರಂತೆ, ಶುದ್ಧ ಬೆಳ್ಳಿ ಕೆ.ಜಿಗೆ ₹36,070ರಂತೆ ವಹಿವಾಟು ನಡೆಸಿತು.

ಜಾಗತಿಕ ಮಟ್ಟದಲ್ಲಿ, ಡಿಸೆಂಬರ್‌ನಲ್ಲಿ ಪೂರೈಕೆಯಾಗುವ ಬಂಗಾರದ ಧಾರಣೆ 22.90 ಡಾಲರ್‌ಗಳಷ್ಟು ಏರಿಕೆಯಾಗಿ, ಒಂದು ಔನ್ಸ್‌ಗೆ 1,137 ಡಾಲರ್‌ಗಳಂತೆ ವಹಿವಾಟು ನಡೆಸಿತು.

ದೆಹಲಿಯಲ್ಲಿ ₹660ರಷ್ಟು ಜಿಗಿತ: ದೆಹಲಿಯಲ್ಲಿ ಚಿನ್ನದ ಧಾರಣೆ ಶನಿವಾರ ₹660ರಷ್ಟು ಭಾರಿ ಏರಿಕೆ ಕಂಡುಕೊಂಡು, 10ಗ್ರಾಂಗೆ ₹26,810ರಂತೆ ಮಾರಾಟವಾಯಿತು.

ಬೆಳ್ಳಿ ಸಹ ₹1,20ರಷ್ಟು ಏರಿಕೆಯಾಗಿ ಕೆ.ಜಿಗೆ ₹35,800ರಂತೆ ವಹಿವಾಟು ನಡೆಸಿತು.

ದೆಹಲಿ ಧಾರಣೆ: 10ಗ್ರಾಂ ಸ್ಟ್ಯಾಂಡರ್ಡ್‌ ಚಿನ್ನ ₹26,660, ಅಪರಂಜಿ ಚಿನ್ನ ₹26,810, ಶುದ್ಧ ಬೆಳ್ಳಿ ಕೆ.ಜಿಗೆ ₹35,800ರಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT