ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ, ಬೆಳ್ಳಿ ತುಟ್ಟಿ: 2 ತಿಂಗಳಲ್ಲೇ ಗರಿಷ್ಠ ಧಾರಣೆ

Last Updated 28 ಏಪ್ರಿಲ್ 2015, 9:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ); ಚಿನ್ನ ಮತ್ತು ಬೆಳ್ಳಿ ಧಾರಣೆ ಕಳೆದೊಂದು ವಾರದಿಂದ ಸತತ ಏರಿಕೆ ಕಾಣುತ್ತಿದೆ. ಬೆಳ್ಳಿ ಬೆಲೆ ಮಂಗಳವಾರ ಒಂದೇ ದಿನದಲ್ಲಿ ಕೆ.ಜಿಗೆ ರೂ 1 ಸಾವಿರ ಏರಿಕೆ ಕಂಡಿದ್ದು ರೂ 37,500 ತಲುಪಿದೆ.

ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ 10 ಗ್ರಾಂಗಳಿಗೆ ರೂ 305 ಏರಿಕೆ ಕಂಡಿದ್ದು ರೂ 27,355 ತಲುಪಿದೆ. ಇದು ಕಳೆದ ಎರಡು ತಿಂಗಳಲ್ಲಿ ದಾಖಲಾಗಿರುವ ಗರಿಷ್ಠ ಬೆಲೆ.

ಮದುವೆ ಸೀಸನ್‌ ಪ್ರಾರಂಭವಾಗಿರುವುದರಿಂದ ಗ್ರಾಹಕರು ಮತ್ತು ವರ್ತಕರಿಂದ ಆಭರಣ ಖರೀದಿ ಹೆಚ್ಚಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೂಡಿಕೆ ಉದ್ದೇಶಕ್ಕೆ ಬಂಗಾರದ ಖರೀದಿ ಹೆಚ್ಚಿದೆ, ಇದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರ 99.9 ಮತ್ತು 99.5 ಶುದ್ಧತೆಯ ಚಿನ್ನ ಕ್ರಮವಾಗಿ 10 ಗ್ರಾಂಗಳಿಗೆ  ರೂ 27,355 ಮತ್ತು ರೂ 27,205ರಲ್ಲಿ ಮಾರಾಟವಾಯಿತು.  ಮಾರ್ಚ್‌ 2 ರ ನಂತರ ದಾಖಲಾಗಿರುವ ಗರಿಷ್ಠ ಧಾರಣೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT