ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ರೂ 400 ಅಗ್ಗ, ಬೆಳ್ಳಿ ರೂ550 ಇಳಿಕೆ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ(ಪಿಟಿಐ):  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾಗಿದ್ದರಿಂದ ದೇಶದ ಪ್ರಮುಖ ಚಿನಿವಾರ ಪೇಟೆ­ಗಳಲ್ಲಿಯೂ ಚಿನ್ನ ಸಂಗ್ರಹಕಾರರು ತಮ್ಮಲ್ಲಿದ್ದ ಸರಕು ಮಾರಲು ಮುಂದಾ­ದರು. ಇದರಿಂದ ಬಂಗಾರದ ಧಾರಣೆ ನವದೆಹಲಿಯಲ್ಲಿ ರೂ400ರಷ್ಟು ಕುಸಿದು ತಿಂಗಳ ಕನಿಷ್ಠ ಮಟ್ಟಕ್ಕಿಳಿದಿದೆ. ಮುಂಬೈ­ನಲ್ಲಿ ರೂ380ರಷ್ಟು ತಗ್ಗಿದೆ.
 
ಸಿದ್ಧ ಬೆಳ್ಳಿ ಮುಂಬೈ­ನಲ್ಲಿ ರೂ590­ರಷ್ಟು ಅಗ್ಗ­ವಾಯಿತು. ನವದೆಹಲಿ­ಯಲ್ಲಿ ಕೆ.ಜಿ.ಗೆ ರೂ550 ಕೆಳಕ್ಕಿಳಿಯಿತು. ನವದೆಹಲಿ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ26,90೦ಕ್ಕೂ, ಅಪರಂಜಿ ಚಿನ್ನ ರೂ27,10೦ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ರೂ37,85೦ರಂತೆ ಮಾರಾಟವಾಯಿತು.

ಮುಂಬೈ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ೨6,580ರಲ್ಲೂ, ಅಪರಂಜಿ ಚಿನ್ನ ರೂ೨6,725ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ38,335ರಂತೆ ಮಾರಾಟವಾಯಿತು. 

ಲಂಡನ್‌ ವರದಿ: ಲಂಡನ್‌ ಪೇಟೆ­ಯಲ್ಲಿ ಚಿನ್ನದ ಧಾರಣೆ ಶೇ 0.7­ರಷ್ಟು ಇಳಿದು, ಔನ್ಸ್‌ಗೆ 1,203.22 ಡಾಲರ್‌­ನಲ್ಲಿ ವಹಿವಾಟು ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT