ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲಿಪಿಲಿ

Last Updated 7 ನವೆಂಬರ್ 2015, 19:32 IST
ಅಕ್ಷರ ಗಾತ್ರ

ನಮ್ಮ ಹಳ್ಳಿಗಾಡಿನ ಮಕ್ಕಳ ಬಾಯಲ್ಲಿ ಹರಿದಾಡೋ ಹಾಡು ಮತ್ತು ಹಾಡಿನ ತುಣುಕುಗಳಿಗೆ ಅವುಗಳದೇ ಆದ ಸೊಗಸಿದೆ. ಅವು ಮಕ್ಕಳನ್ನು ಆಟದಲ್ಲಿ ಮುಳುಗಿಸಿ, ಮರೆಸಿ ನಕ್ಕು ನಗಿಸುತ್ತವೆ. ಉರ್ದುವಿನಲ್ಲೂ ಇಂಥ ರಚನೆಗಳಿವೆ. ಮಕ್ಕಳ ಲೋಕದಲ್ಲಿ ಆಸಕ್ತಿಯಿಂದ ಬಹು ಸಮಯದಿಂದ ತೊಡಗಿಕೊಂಡಿರುವ ಮೇಟಿಕೆರೆ ಹಿರಿಯಣ್ಣ ಅವರು ಸಿರಾಜುದ್ದೀನ್ ಅವರ ನೆರವಿನಿಂದ ಈ ಉರ್ದು ರಚನೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಪ್ಪಾಳೆ
ತಪ್ಪಾಳೆ
ಹಣ್ಣಾದ ಎಲೆ
ಹಾರುತಿದೆ ಹಕ್ಕಿ
ಹಿಡಿ ಅದರ ಕಿವಿ

**
ಬನ್ನಿ ಮಕ್ಕಳೆ ಬನ್ನಿ
ಬರಲ್ಲಾಂದ್ರೆ
ಚಿನ್ನದಂತ ಮನೆ ಕೊಡ್ತೀನಿ ಬನ್ನಿ

**
ತಾತ ತೈಯ್ಯಾ
ಕಾಸು ಕೊಡೊ ಅಣ್ಣಯ್ಯ
ಎರಡು ಬಜ್ಜಿ ತಂದನು
ಅವನೇ ಬಜ್ಜಿ ತಿಂದನು

**
ಪಂಕ ಮೇಲೆ ತಿರುಗುತಿತ್ತು
ಪಾಪು ಕೆಳಗೆ ಮಲಗಿತ್ತು
ಮಲಗು ಪಾಪು ಮಲಗು
ಕೆಂಪು ಪಲ್ಲಂಗದಲ್ಲಿ ಮಲಗು
ಅವ್ವ ಅಪ್ಪ ಬತ್ತಾರೆ
ಗೊಂಬೆ ಜೊತೇಲ್ ತತ್ತಾರೆ
ಅದ್ರಲೊಂದ್ ಮುರ್ದೋಯ್್ತು
ಮಾವನ್ ಮಗಂಗೆ ಬೇಸ್ರಾಯ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT