ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಸಿಗರೇಟು ಮಾರಾಟ ಶೀಘ್ರ ನಿಷೇಧ?

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಚಿಲ್ಲರೆ ಸಿಗರೇಟು ಮಾರಾಟ ನಿಷೇಧಿಸುವ ಹಾಗೂ ತಂಬಾಕು ಉತ್ಪನ್ನ­ಗಳ ಖರೀದಿಗೆ ವಯಸ್ಸಿನ ಕನಿಷ್ಠ ಮಿತಿ ಏರಿಸುವ ಪ್ರಸ್ತಾವ­ಗಳನ್ನು ಒಳಗೊಂಡ ತಜ್ಞರ ವರದಿಯನ್ನು ಆರೋಗ್ಯ ಸಚಿವಾಲಯ ಅಂಗೀಕರಿಸಿದ್ದು, ಈ ಸಂಬಂಧ ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.

ಆರೋಗ್ಯ ಸಚಿವಾಲಯವು ಈ ಶಿಫಾರಸುಗಳಿರುವ ತಜ್ಞರ ವರದಿಯನ್ನು ಅಂಗೀಕರಿಸಿದೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಮಂಗಳವಾರ ರಾಜ್ಯ­ಸಭೆಯಲ್ಲಿ ತಿಳಿಸಿದರು.

‘ಸಮಿತಿಯ ಶಿಫಾರಸುಗಳನ್ನು  ಸಚಿವಾಲಯವು ಅಂಗೀಕ­ರಿಸಿದೆ. ಈ ಶಿಫಾರಸುಗಳನ್ನು ಸಚಿವ ಸಂಪುಟದ ಮುಂದಿಡಲಾ­ಗುವುದು. ಅಂತಿಮ­ವಾಗಿ ಸಂಸತ್ತಿನ ಒಪ್ಪಿಗೆಯ ನಂತರ ಇದು ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ’ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್‌ಒ) ತಂಬಾಕು ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಕೂಡ ಸಹಿ ಹಾಕಿದ್ದು,

ಸಮಿತಿಯ ಶಿಫಾರಸುಗಳು
*ಸಾರ್ವಜನಿಕ ಸ್ಥಳದಲ್ಲಿ ಧೂಮ­ಪಾನ ನಿಷೇಧಕ್ಕೆ ವಿಧಿಸುವ ದಂಡವನ್ನು ₨ 200ರಿಂದ ₨ 20,000ಕ್ಕೆ ಹೆಚ್ಚಿಸಲಿ.
*ವಯಸ್ಸಿನ ಮಿತಿ 18ರಿಂದ 25ಕ್ಕೆ ಏರಿಸಲು ಸಲಹೆ

ಅದಕ್ಕೆ ಪೂರಕವಾಗಿ ಸಚಿವಾಲಯವು ತಜ್ಞರ ವರದಿಯನ್ನು ಅಂಗೀಕರಿಸಿದೆ. ಸದ್ಯ ದೇಶದಲ್ಲಿನ ಒಟ್ಟು ಸಿಗರೇಟು ಮಾರಾಟದಲ್ಲಿ ಶೇ ೭೦ರಷ್ಟು ಚಿಲ್ಲರೆ­ಯಾಗಿಯೇ ಮಾರಾಟವಾಗುತ್ತಿದೆ. ಹೀಗಾಗಿ, ಈ ಶಿಫಾರಸುಗಳು ಕಾನೂ­ನಾಗಿ ಜಾರಿಗೊಂಡರೆ ಶೇ ೧೦ರಿಂದ ೨೦ರಷ್ಟು ವ್ಯಾಪಾರ ನಷ್ಟ ಆಗಬಹುದು ಎಂಬುದು ವಿಶ್ಲೇಷಕರ ಲೆಕ್ಕಾಚಾರ. ಸಿಗರೇಟ್‌ ಉದ್ದಿಮೆಯಿಂದ ಸರ್ಕಾರಕ್ಕೆ ವಾರ್ಷಿಕ ೨೫ ಸಾವಿರ ಕೋಟಿ ರೂಪಾಯಿ ತೆರಿಗೆ ಬರುತ್ತಿದೆ. ಆದರೆ ಇದರಿಂದ ಆಗುತ್ತಿರುವ ಆರೋಗ್ಯದ ದುಷ್ಪರಿ­ಣಾಮದ ನಷ್ಟ ಇನ್ನೂ ಅಧಿಕ ಎಂಬುದು ತಜ್ಞರ ಅಭಿಮತ.

ತಂಬಾಕಿನಿಂದ ಬರುತ್ತಿರುವ ಕಾಯಿಲೆ­ಗಳಿಂದ ೨೦೧೧ರ ವರ್ಷವೊಂದರಲ್ಲೇ ದೇಶಕ್ಕೆ ೧.೦೪ ಲಕ್ಷ ಕೋಟಿ ರೂಪಾಯಿ­ಗಳ ನಷ್ಟವಾಗಿದೆ ಎಂದು ಪಬ್ಲಿಕ್‌ ಹೆಲ್ತ್‌ ಫೌಂಡೇಷನ್‌ ಆಫ್‌ ಇಂಡಿಯಾ  ಸಂಸ್ಥೆ ಅಂದಾಜಿಸಿದೆ.

ತಂಬಾಕು ಬಳಕೆ ಮೇಲೆ ಇರುವ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊ­ಳಿಸಬೇಕು ಎಂದು ಹಿಂದಿನ ಆರೋಗ್ಯ ಸಚಿವ ಹರ್ಷವರ್ಧನ್‌ ಅವರೂ ಹಲವಾರು ಬಾರಿ ಹೇಳಿದ್ದರು.

ಸೇದುವ ಸಿಗರೇಟುಗಳೆಷ್ಟು?: ಯೂರೊಮಾನಿಟರ್‌ ಇಂಟರ್‌­ನ್ಯಾಷನಲ್‌ ಸಮೀಕ್ಷೆ ಪ್ರಕಾರ, ೨೦೧೨ರಲ್ಲಿ ಭಾರತೀಯರು ಸೇದಿರುವ ಸಿಗರೇಟುಗಳ ಸಂಖ್ಯೆ ೧೦ ಸಾವಿರ ಕೋಟಿಗೂ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT