ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀತಾ, ಹೊಯ್ಸಳ ವಾಹನಗಳಿಗೆ ಹೆಚ್ಚುವರಿ ಸಾಧನ

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರ ಚಾಲನೆ
Last Updated 2 ಅಕ್ಟೋಬರ್ 2014, 9:12 IST
ಅಕ್ಷರ ಗಾತ್ರ

ಉಡುಪಿ:  ತುರ್ತು ಸಂದರ್ಭಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಉಡುಪಿ ಜಿಲ್ಲಾ ಪೊಲೀಸ್‌ ವಿಶೇಷ ಕಮಾಂಡೊ ಪಡೆ ರಚನೆ ಮಾಡಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಚೀತಾ ಮತ್ತು ಹೊಯ್ಸಳ ವಾಹನಗಳಿಗೆ ಹೆಚ್ಚುವರಿಯಾಗಿ ಸಾಧನ ಸಲಕರಣೆಗಳನ್ನು ಅಳವಡಿಸಲಾಗಿದೆ.

‘ಅಗತ್ಯ ಸಂದರ್ಭಗಳಲ್ಲಿ ಕಾರ್ಯಾಚರಣೆ ನಡೆಸಲು ತರಬೇತಿ ಪಡೆದ 30 ಮಂದಿ ಸಿಬ್ಬಂದಿಯನ್ನು ಒಳಗೊಂಡ ಕಮಾಂಡೊ ಪಡೆ ರಚನೆ ಮಾಡಲಾಗಿದೆ. ಇವರಲ್ಲಿ 20 ಮಂದಿಗೆ ಭಯೋತ್ಪಾದನೆ ತಡೆ ಘಟಕ, ನಕ್ಸಲ್‌ ವಿರೋಧಿ ಘಟಕ ಮತ್ತು ಬಾಂಬ್‌ ತಪಾಸಣೆ ಮತ್ತು ನಿಷ್ಕ್ರಿಯ ದಳದಲ್ಲಿ ತರಬೇತಿ ಕೊಡಿಸಲಾಗಿದೆ. ದಿನದ 24 ಗಂಟೆಯೂ ಈ ಸಿಬ್ಬಂದಿ ಲಭ್ಯ ಇರುತ್ತಾರೆ. ಯಾವುದಾದರೂ ಅಹಿತಕರ ಘಟನೆ ನಡೆದಾಗ 30 ಮಂದಿಯನ್ನೂ ಒಟ್ಟಿಗೆ ಬಳಸಿಕೊಳ್ಳಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಈಗ ಲಭ್ಯ ಇರುವ ಚೀತಾ ಗಸ್ತು ವಾಹನಗಳಲ್ಲಿ ನಾಲ್ಕನ್ನು ನವೀಕರಿಸಲಾಗಿದೆ. ಸೈರನ್‌, ವಾಕಿಟಾಕಿ, ಲೈಟ್‌ಗಳನ್ನು ಅಳವಡಿಸಲಾಗಿದೆ. ದಿನದ 24 ಗಂಟೆ ಮೂರು ಪಾಳಿಗಳಲ್ಲಿ ಚೀತಾ ಸಿಬ್ಬಂದಿ ಕೆಲಸ ಮಾಡುವರು. ಉಡುಪಿ ನಗರ, ಕುಂದಾಪುರ, ಕಾಪು, ಕಾರ್ಕಳ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಹೊಯ್ಸಳ ವಾಹನದ ಸೇವೆ ಇದೆ. ಈ ವಾಹನಗಳಿಗೆ ಜಿಪಿಎಸ್‌ ಕಿಟ್‌, ಪ್ರಥಮ ಚಿಕಿತ್ಸೆ ಸಾಧನಗಳು, ಅಗ್ನಿನಂದಕ, ಡ್ರ್ಯಾಗನ್‌ ಲೈಟ್‌ ಅಳವಡಿಸಲಾಗಿದೆ. ಈ ವಾಹನಗಳೂ ದಿನದ 24 ಗಂಟೆ ಸೇವೆಗೆ ಲಭ್ಯ ಇರಲಿವೆ ಎಂದರು.

ಕ್ಷಿಪ್ರ ಪರಿಹಾರ ವಾಹನವನ್ನು ಸಿದ್ಧಗೊಳಿಸಲಾಗಿದೆ. ಅಶ್ರುವಾಯು ಸಿಡಿಸುವ ವ್ಯವಸ್ಥೆ ಇದರಲ್ಲಿದೆ. ಈ ವಾಹನಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಶಾಂತಿ– ಸುವ್ಯವಸ್ಥೆಗೆ ಧಕ್ಕೆ ಬಂದ ಸಂದರ್ಭದಲ್ಲಿ ಈ ವಾಹನವನ್ನು ಬಳಕೆ ಮಾಡಲಾಗುತ್ತದೆ. ಚಿತ್ರೀಕರಣ ಮಾಡಲು ಬಳಸಲಾಗುತ್ತದೆ. ಒಟ್ಟಾರೆ ಜಿಲ್ಲೆಯ ಜನರಲ್ಲಿ ಆತ್ಮವಿಶ್ವಾಸ ತುಂಬಿ ಭರವಸೆ ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ಕುಂದಾಪುರ, ಕಾಪು, ಕಾರ್ಕಳ, ಮಲ್ಪೆ ಮತ್ತು ಮಣಿಪಾಲದಲ್ಲಿ ಸರ್ವೇಕ್ಷಣಾ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಕುಮಾರ್‌, ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT