ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಗೆ ತೆರಳಿದ ಅನ್ಸಾರಿ

Last Updated 26 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಉಪ­ರಾಷ್ಟ್ರಪತಿ ಹಮೀದ್ ಅನ್ಸಾರಿ ಐದು ದಿನಗಳ ಭೇಟಿಗಾಗಿ ಗುರುವಾರ ಚೀನಾಗೆ ಪ್ರಯಾಣಿಸಿದರು. ಜೂನ್‌ 28 ಮತ್ತು 29ರಂದು ಬೀಜಿಂಗ್‌ನಲ್ಲಿ ನಡೆಯಲಿರುವ ಪಂಚಶೀಲ ಒಪ್ಪಂದದ 60ನೇ ವಾರ್ಷಿಕೋತ್ಸವದ ಸಂಬಂಧ ಭೇಟಿ ನೀಡಲಿರುವ ಅನ್ಸಾರಿ ಚೀನಾ ಉಪಾಧ್ಯಕ್ಷ ಲೀ ಯುವಾಂಕೊ ಅವ­ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾರತ, ಚೀನಾ ನಡುವೆ ಸದಾ ಉನ್ನತ ಮಟ್ಟದ ಸಂಬಂಧ ಕಾಯ್ದು­ಕೊಳ್ಳ­ಲಾಗಿರುವ ಹಿನ್ನೆಲೆ­ಯಲ್ಲಿ ಇಬ್ಬರೂ ನಾಯಕರ ಮಾತುಕತೆ­ಯಿಂದ ಉತ್ತಮ ಫಲಶ್ರುತಿ ಸಿಗುವ ನಿರೀಕ್ಷೆಯಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ಸಯ್ಯದ್ ಅಕ್ಬರುದ್ದೀನ್‌ ಸುದ್ದಿಗಾರ­ರೊಂದಿಗೆ ಇಲ್ಲಿ ಹೇಳಿದರು. ಅನ್ಸಾರಿ  ಅವರ ನಿಯೋಗದಲ್ಲಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಸೇರಿದ್ದಾರೆ.

ಅನ್ಸಾರಿ ಅವರ ಈ ಪ್ರವಾಸಕ್ಕೆ ಕೆಲವು ಮಹತ್ವಗಳಿವೆ. ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಭಾರತದ ನಾಯಕರೊಬ್ಬರು ಕೈಗೊಂಡಿರುವ ಮೊದಲ ಚೀನಾ ಪ್ರವಾಸ, ಸ್ವತಃ ಅನ್ಸಾರಿ ಅವರ ಮೊದಲ ಚೀನಾ ಭೇಟಿ ಹಾಗೂ 1994ರಲ್ಲಿ ಉಪರಾಷ್ಟ್ರಪತಿಯಾಗಿದ್ದ ಆರ್.ಕೆ. ನಾರಾಯಣ್‌ ಅವರು ಚೀನಾಗೆ ಭೇಟಿ ನೀಡಿದ ನಂತರ ಆ ದೇಶಕ್ಕೆ ಭಾರತದ ಉಪರಾಷ್ಟ್ರಪತಿಯೊಬ್ಬರು ಭೇಟಿ ಕೊಡುತ್ತಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT