ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಶೇ 16 ರಷ್ಟು ಭೂಮಾಲಿನ್ಯ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೀಜಿಂಗ್‌(ಐಎಎನ್‌ಎಸ್‌): ಚೀನಾದ ಪರಿಸರ ಸಂರಕ್ಷಣೆ ಇಲಾಖೆ ಮತ್ತು ಭೂಮಿ ಮತ್ತು ಸಂಪನ್ಮೂಲಗಳ ಇಲಾಖೆಗಳು ಜಂಟಿಯಾಗಿ ಹೊರತಂದಿರುವ ವರದಿಯ ಪ್ರಕಾರ ಚೀನಾದ ಪ್ರಮುಖ ಭೂಭಾಗದ ಶೇ 16 ರಷ್ಟು ಮಣ್ಣು ಮಲಿನವಾಗಿದೆ.

ಗುರುವಾರ ಬಿಡುಗಡೆಯಾಗಿರುವ ಈ ವರದಿಯ ಪ್ರಕಾರ ಶೇ 19.4 ರಷ್ಟು ಕೃಷಿ ಭೂಮಿ ಮಲಿನವಾಗಿದೆ. ಕೈಗಾರಿಕಾ ಮತ್ತು ಕೃಷಿ ಚಟುವಟಿಕೆಗಳು ಈ ಮಾಲಿನ್ಯಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಈಗಿರುವ ಕೃಷಿ ಭೂಮಿಯ ಗುಣಮಟ್ಟ ಆತಂಕಕ್ಕೆ ಕಾರಣವಾಗಿರುವುದರಿಂದ ಭೂಮಿಯ ಸಾಮಾನ್ಯ ಪರಿಸ್ಥಿತಿ ‘ಆಶಾಜನಕವಾಗಿಲ್ಲ’ ಮತ್ತು ಪಾಳುಬಿದ್ದಿರುವ ಕೈಗಾರಿಕೆ ಹಾಗೂ ಗಣಿಗಾರಿಕೆಗೆ ಸಂಬಂಧಪಟ್ಟ ಭೂಮಿಯು ಮಾಲಿನ್ಯಕ್ಕೆ ತುತ್ತಾಗಿದೆ ಎಂದು ವರದಿಯು ತಿಳಿಸಿದೆ.

ಚೀನಾ: ಹೊಸ ಮಂಡಲದ  ಹಾವು ಪತ್ತೆ
ಲ್ಹಾಸಾ(ಐಎಎನ್‌ಎಸ್‌):
ಚೀನಾದ ವಿಜ್ಞಾನಿಗಳು ಕಂದುಬಣ್ಣದ ಮಂಡಲ ಹಾವಿನ (ವೈಪರ್‌) ಜಾತಿಗೆ ಸೇರಿದ ಹೊಸ ಪ್ರಭೇದದ ಹಾವೊಂದನ್ನು  ಕಂಡುಹಿ­ಡಿ­ದಿ­­ದ್ದಾರೆ. 1970ರಿಂದ ಮೌಂಟ್‌ ಎವ­ರೆ­ಸ್ಟ್‌ನಲ್ಲಿ ಈ ಕುರಿತು ವಿಜ್ಞಾನಿ­ಗಳು ಸಂಶೋಧನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT