ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ದಿನ ಪ್ರಣಾಳಿಕೆ ಬಿಡುಗಡೆ ಇಲ್ಲ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ, ಐಎಎನ್‌ಎಸ್‌): ಚುನಾವಣೆ ನಡೆಯುವ ದಿನದಂದು ರಾಜ­ಕೀಯ ಪಕ್ಷವೊಂದು ತನ್ನ ಪ್ರಣಾಳಿಕೆ ಬಿಡು­­ಗಡೆ ಮಾಡಲು ಯಾವುದೇ ನಿರ್ಬಂಧ­­ವಿಲ್ಲ. ಆದರೆ ಮತದಾನ ನಡೆಯುವ ಕಡೆ­ಗಳಲ್ಲಿ ಇದರ ಪ್ರಕಟಣೆ ಅಥವಾ ಪ್ರಸಾರಕ್ಕೆ ನಿಷೇಧವಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮೊದಲ ಹಂತದ ಮತದಾನ ನಡೆ­ಯುವ ಸೋಮವಾರದಂದು ಬಿಜೆಪಿ ತನ್ನ ಚುನಾ­ವಣಾ ಪ್ರಣಾಳಿಕೆ ಬಿಡುಗಡೆ ಮಾಡಲು ಹೊರಟಿರುವ ಬಗ್ಗೆ ಭಾನು­ವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯ ಚುನಾ­ವಣಾ ಆಯುಕ್ತ (ಸಿಇಸಿ) ವಿ.ಎಸ್‌. ಸಂಪತ್‌ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಅವರು ಪಶ್ಚಿಮಬಂಗಾಳದಲ್ಲಿ ಚುನಾ­­ವಣಾ ಸಿದ್ಧತೆ ಕುರಿತು ರಾಜ­ಕೀಯ ಪಕ್ಷ­ಗಳು ಮತ್ತು ವಿವಿಧ ಇಲಾ­ಖೆಗಳ ಅಧಿ­ಕಾರಿಗಳ ಜತೆ ಸರಣಿ ಸಭೆ­ಗಳನ್ನು ನಡೆ­ಸಿದ ನಂತರ ಸುದ್ದಿಗೋಷ್ಠಿ­ಯಲ್ಲಿ ಮಾತ­­ನಾಡಿ­ದರು. ಸಿಇಸಿಯವರು ಇತರ ಇಬ್ಬರು ಚುನಾವಣಾ ಆಯುಕ್ತರೊಡನೆ ಈ ಸಭೆ­ಗಳನ್ನು ನಡೆಸಿ, ಸಿದ್ಧತೆಯನ್ನು ಪರಿಶೀಲಿಸಿದರು.

ಕೋಮುಗಲಭೆಗೆ ತುತ್ತಾ­ಗಿ­ರುವ ಉತ್ತರ ಪ್ರದೇಶದ ಮುಜಫ್ಫರ್‌­ನಗರ­­ದಲ್ಲಿ ಬಿಜೆಪಿ ಪರ ಆರ್‌ಎಸ್‌ಎಸ್‌ ಧಾರ್ಮಿಕ ನೆಲೆಯಲ್ಲಿ ಪ್ರಚಾರ ಮಾಡು­­ತ್ತಿರುವ ಆರೋಪದ ಬಗ್ಗೆ ಉತ್ತ­ರಿಸಿ, ಇದು ನಿಜವಾದಲ್ಲಿ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಈ ಕುರಿತು ಆಯೋಗ ಗಮನ ಹರಿಸು­ವುದು ಎಂದು ಅವರು ತಿಳಿಸಿದರು.

ಪಕ್ಷಪಾತದ, ನಿಷ್ಕ್ರಿಯ ಅಧಿಕಾರಿಗಳಿಗೆ ಆಯೋಗ ಎಚ್ಚರಿಕೆ
ಚುನಾ­ವಣಾ ಕಾರ್ಯದಲ್ಲಿ ಪಕ್ಷಪಾ­ತದ ನಡ­ವಳಿಕೆ ತೋರುವ ಅಥವಾ ತಪ್ಪಿ­ತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊ­ಳ್ಳದೆ ನಿಷ್ಕ್ರಿಯ­ವಾಗಿರುವ ಅಧಿಕಾರಿ­ಗಳ ಮೇಲೆ ನಿಷ್ಠುರ ಕ್ರಮ ಜರುಗಿಸು­ವುದಾಗಿ   ಮುಖ್ಯ ಚುನಾ­ವಣಾ ಆಯುಕ್ತ ವಿ.­ಎಸ್‌. ಸಂಪತ್‌ ಎಚ್ಚರಿಸಿದರು.

ಅಧಿಕಾರಿಗಳು ಚುನಾವಣಾ ನೀತಿ­ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿರು­ವಂತೆ ನೋಡಿಕೊಳ್ಳಬೇಕಿದ್ದು, ಇವುಗಳ ಉಲ್ಲಂಘನೆಯಾಗದಂತೆ ಗಂಭೀರವಾಗಿ ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಆಡಳಿತಾರೂಢ ಪಕ್ಷದ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಾ, ವಿರೋಧಿಗಳ ಮೇಲೆ ಪಕ್ಷಪಾತದಿಂದ ವರ್ತಿಸುತ್ತಿರುವುದಾಗಿ ಪ್ರತಿಪಕ್ಷಗಳು ಆರೋಪಿಸಿದ ಹಿನ್ನೆಲೆ­ಯಲ್ಲಿ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ಚುನಾವಣಾ ನೀತಿಸಂಹಿತೆ ಉಲ್ಲಂ­ಘನೆ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿ­ಗಳು ಕೂಡಲೇ ಕ್ರಮಗಳನ್ನು ಕೈಗೊಂಡು ಸೂಕ್ತ ಫಲಿತಾಂಶ ತೋರಿಸ­ಬೇಕು ಎಂದು ಅವರು ಸೂಚಿಸಿದರು.

ಪಶ್ಚಿಮ ಬಂಗಾಳದಲ್ಲಿ ಅಧಿಕಾರಿ­ಗಳು ತೃಣ­ಮೂಲ ಕಾಂಗ್ರೆಸ್‌ ಪರವಾಗಿ­ರುವ ಮತ್ತು ವಿರೋಧಿ­ಗ­ಳನ್ನು ತಾರತಮ್ಯ­­ದಿಂದ ಕಾಣುತ್ತಿ­ರುವ ಹಾಗೂ  ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮತ್ತು ಅವರ ಇಲಾಖೆ ತಮ್ಮ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಹಿನ್ನೆಲೆ­ಯಲ್ಲಿ ಅವರು ಮೇಲಿನಂತೆ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT