ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌, ಆಪ್ತರ ರೂ. 863 ಕೋಟಿ ಆಸ್ತಿ ಮುಟ್ಟುಗೋಲು

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೈಎಸ್‌ಆರ್‌ ಕಾಂಗ್ರೆಸ್ ಮುಖ್ಯಸ್ಥ ಜಗನ್‌ಮೋಹನ್‌ ರೆಡ್ಡಿ ಹಾಗೂ ಅವರ ಆಪ್ತರಿಗೆ ಸೇರಿದ 863 ಕೋಟಿ ರೂಪಾಯಿ ಮೌಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿ­ಕೊ­ಳ್ಳಲು ಇಲ್ಲಿನ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಆಂಧ್ರಪ್ರದೇಶದಲ್ಲಿ ಅಕ್ರಮ ಹಣ ಲೇವಾದೇವಿ ಹಾಗೂ ಮೂಲ­ಸೌಕರ್ಯ ಯೋಜನೆಗಳಲ್ಲಿ ಬೇನಾಮಿ­ಯಾಗಿ ಹಣ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾ­ಗಿದೆ. ಜಗನ್‌ ಮತ್ತು ಅವರ ವ್ಯಾಪಾರ  ಪಾಲದಾರ­ರಾದ ನಿಮ್ಮ­­­ಗಡ ಪ್ರಸಾದ್‌ ಅವರಿಗೆ ಆಸ್ತಿ ಮುಟ್ಟು­ಗೋಲು ಸಂಬಂಧ ಜಾರಿ ನಿರ್ದೇಶ­ನಾ­ಲಯ  ಮಾರ್ಚ್‌­ನಲ್ಲಿ ಪ್ರತ್ಯೇಕ ನೋಟಿಸ್‌ ಜಾರಿ ಮಾಡಿತ್ತು.

ಜಗನ್‌ ತಂದೆ ಹಾಗೂ ದಿವಂಗತ ವೈ.ಎಸ್‌.ರಾಜಶೇಖರ್‌ ರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ­ಯಾಗಿದ್ದಾಗ ಗುಂಟೂರು ಮತ್ತು ಪ್ರಕಾಶಂ ಜಿಲ್ಲೆ­ಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವದರೇವು ಮತ್ತು ನಿಜಾಮಪಟ್ಟಣಂ ಕೈಗಾರಿಕಾ ಕಾರಿ­ಡಾರ್‌ ಯೋಜನೆಯ ಅಡಿ ಪ್ರಸಾದ್‌ ಮತ್ತು ಜಗನ್‌ ಮೋಹನ್‌ ಅವರ ಕಂಪೆನಿಗಳಿಗೆ ಅನುಕೂಲ ಮಾಡಿದ್ದರು.   ನ್ಯಾಯಾಲ­ಯವು ಆಸ್ತಿ ಮುಟ್ಟು­ಗೋ­ಲಿಗೆ ಸಮ್ಮತಿ ನೀಡಿರುವುದರಿಂದ ಜಾರಿ ನಿರ್ದೇಶನಾಲಯವು ಶೀಘ್ರವೇ ಆಸ್ತಿ ಸ್ವಾಧೀನ ಪ್ರಕ್ರಿಯೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಗಳಿಗಾಗಿ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಿದ ಆರೋಪ ಸೇರಿದಂತೆ ಹಲವು ಆಪಾದನೆ­ಗಳನ್ನು ಹೊರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT