ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಧನಗೆ ಹೊಸ ಬ್ಯಾಂಕ್‌ ಖಾತೆ ಬೇಡ

ಕೇಂದ್ರ ಹಣಕಾಸು ಸಚಿವಾಲಯದ ಸ್ಪಷ್ಟನೆ
Last Updated 18 ಡಿಸೆಂಬರ್ 2014, 18:12 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನ ಮಂತ್ರಿ ಜನಧನ ಯೋಜನೆಯ (ಪಿಎಂಜೆಡಿವೈ) ಲಾಭ ಪಡೆಯಲು ಈಗಾಗಲೇ ಬ್ಯಾಂಕ್‌ ಖಾತೆ ಹೊಂದಿರುವವರು ಹೊಸ­­ದಾಗಿ ಇನ್ನೊಂದು ಬ್ಯಾಂಕ್‌ ಖಾತೆ ತೆರೆಯುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧ­ವಾರ ಸ್ಪಷ್ಟಪಡಿಸಿದೆ.

‘ಯಾವುದೇ ಬ್ಯಾಂಕ್‌ನಲ್ಲಾದರೂ ಈಗಾ­ಗಲೇ ಖಾತೆ ಹೊಂದಿರುವವರು ಜನಧನ ಯೋಜ­ನೆಯಡಿ ಪ್ರತ್ಯೇಕವಾಗಿ ಮತ್ತೊಂದು ಬ್ಯಾಂಕ್‌ ಖಾತೆ ತೆರೆಯ­ಬೇಕಿಲ್ಲ. ಅಪಘಾತ ವಿಮೆಯ ಲಾಭ ಪಡೆ­­­ಯಲು ಈಗಿರುವ ಬ್ಯಾಂಕ್‌ ಖಾತೆ­ಯಲ್ಲೇ ‘ರೂಪೇ ಕಾರ್ಡ್‌’ ಹೊಂದ­ಬಹುದು’ ಎಂದು ಹಣಕಾಸು ಸಚಿವಾ­ಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಈಗಿರುವ ಬ್ಯಾಂಕ್‌ ಖಾತೆಯಲ್ಲೇ ಓವರ್‌ ಡ್ರಾಫ್ಟ್‌ ಸೌಲಭ್ಯವನ್ನು ವಿಸ್ತರಿ­ಸ­­ಬ­ಹುದು. 18ರಿಂದ 70 ವರ್ಷ­ದೊಳ­ಗಿನ ಎಲ್ಲ ರೂಪೇ ಕಾರ್ಡ್‌ದಾ­ರರಿಗೂ ₨1 ಲಕ್ಷ ಅಪಘಾತ ವಿಮೆ ಸಿಗು­ತ್ತದೆ. ಇದರ ಲಾಭ ಪಡೆಯಲು ಈ ಕಾರ್ಡ್‌ ಪಡೆದ 45 ದಿನಗಳಲ್ಲಿ ಅದನ್ನು ಬಳಸು­ವುದು ಅವಶ್ಯ’ ಎಂದು ಅದು ಹೇಳಿದೆ. 

ಅಪಘಾತ ಸಂಭವಿಸಿದ 30 ದಿನ­ಗಳ ಒಳಗಾಗಿ ­ಬ್ಯಾಂಕ್‌ಗೆ ವಿಮೆಗಾಗಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ನೀಡ­ಬೇಕು ಎಂದೂ ಸಚಿ­ವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕುಟುಂಬವೊಂದರಲ್ಲಿ ಹಲವು ಖಾತೆ­­ಗಳನ್ನು­/­ಕಾರ್ಡ್‌ಗಳನ್ನು ಹೊಂದಿದ್ದರೂ, ಒಂದು ಕಾರ್ಡ್‌ನ ಮೇಲೆ ಒಬ್ಬ ವ್ಯಕ್ತಿಗೆ ಮಾತ್ರ ₨30 ಸಾವಿರ ಜೀವ ವಿಮಾ ಸೌಲಭ್ಯ ಸಿಗ­ಲಿದೆ. ಈ ಮೊತ್ತ­ವನ್ನು ಪಡೆ­ಯಲು ಸಂಬಂಧಿಸಿದ ಬ್ಯಾಂಕ್‌ನ ನೋಡಲ್‌ ಶಾಖೆಗೆ ಖಾತೆದಾರರ ನಾಮ­­ನಿರ್ದೇಶಿತ ವ್ಯಕ್ತಿಯು ಎಲ್ಲ ಅಗತ್ಯ ದಾಖಲು­ಪತ್ರ­ಗಳನ್ನು ಸಲ್ಲಿಸುವುದು ಅವ­ಶ್ಯಕ ಎಂದು ಸಚಿವಾಲಯ
ಹೇಳಿದೆ.

ಸರ್ಕಾರಿ ನೌಕ­ರರು (ಸೇವೆಯಲ್ಲಿರು­ವ­­­ವರು ಅಥವಾ ನಿವೃ­ತ್ತರು) ಮತ್ತು ಅವರ ಕುಟುಂಬ­ಗಳು, ಆದಾಯ ತೆರಿಗೆ ಪಾವತಿದಾ­ರರು ಅಥವಾ ಟಿಡಿಎಸ್‌ ಕಡಿತ­ದಾರರು, ಆಮ್‌ ಆದಮಿ ಬಿಮಾ ಯೋಜನೆ ವ್ಯಾಪ್ತಿಗೆ ಒಳಪಡುವವರು ಜನ­ಧನ ಯೋಜನೆಯಡಿ ಜೀವವಿಮಾ ಸೌಲಭ್ಯ ಪಡೆಯಲು ಅನರ್ಹರಾಗಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈವರೆಗೂ ಬ್ಯಾಂಕ್‌ಗಳು ಜನಧನ ಯೋಜನೆಯಡಿ ₨8.76 ಕೋಟಿ ಖಾತೆ­ಗಳನ್ನು ತೆರೆದಿವೆ ಮತ್ತು 5.78 ಕೋಟಿ ರೂಪೇ ಡೆಬಿಟ್‌ ಕಾರ್ಡ್‌­ಗಳನ್ನು ವಿತರಿ­ಸಿವೆ ಎಂದು ಸಚಿ­ವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT