ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮತ ಕರೆಗೆ ಭಾರತ ತಿರಸ್ಕಾರ

ಜಮ್ಮು–ಕಾಶ್ಮೀರ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಹೇಳಿಕೆಗೆ ತಿರುಗೇಟು
Last Updated 3 ಸೆಪ್ಟೆಂಬರ್ 2015, 19:50 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತ ಗಣನೆ ನಡೆ ಸಬೇಕೆಂಬ ಪಾಕಿಸ್ತಾನದ ಕರೆಯನ್ನು ಭಾರತ ತಿರಸ್ಕರಿಸಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅಲ್ಲಿನ ಜನರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಭಾರತ ಹೇಳಿದೆ.

‘ಇದೊಂದು ಅಂತರರಾಷ್ಟ್ರೀಯ ಸಂಸದರ ಸಂಘಟನೆಯ ವೇದಿಕೆ. ಜಾಗತಿಕ ಅಭಿವೃದ್ಧಿಯ ‘2030 ಅಭಿವೃದ್ಧಿ ಕಾರ್ಯಸೂಚಿ’ ಬಗ್ಗೆ ಚರ್ಚಿಸುವುದಕ್ಕಾಗಿ ಈ ಸಭೆ ಕರೆಯಲಾಗಿದೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು’ ಎಂದ ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಬುಧವಾರ ಸಭೆಯಲ್ಲಿ ಮಾತ ನಾಡಿದ್ದ ಪಾಕಿಸ್ತಾನ ನ್ಯಾಷನಲ್‌ ಅಸೆಂ ಬ್ಲಿಯ ಹಂಗಾಮಿ ಸ್ಪೀಕರ್‌ ಮುರ್ತಜಾ ಜಾವೇದ್‌ ಅಬ್ಬಾಸಿ ಅವರು, ಜಮ್ಮು ಕಾಶ್ಮೀರದಲ್ಲಿ ಜನಮತಗಣನೆಗೆ ಇದು ಸಕಾಲ ಎಂದು ಹೇಳಿದ್ದರು.  ಜಾಗತಿಕ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸೇರಿರುವ ಸಭೆಯಲ್ಲಿ ಕಾಶ್ಮೀರ ವಿಷಯ ಎತ್ತಿದ ಪಾಕಿ ಸ್ತಾನದ ಕ್ರಮಕ್ಕೆ ಮಹಾಜನ್‌ ಅವರು ಬಲವಾದ ಆಕ್ಷೇಪ ವ್ಯಕ್ತ ಪಡಿಸಿದರು.

ಸ್ವಾತಂತ್ರ್ಯ ಪಡೆದಾಗಿನಿಂದಲೇ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಅಲ್ಲಿದೆ. ಜನರೇ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿ ಕೊಂಡಿದ್ದಾರೆ ಎಂಬುದನ್ನು ಪಾಕಿಸ್ತಾನ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಮಹಾಜನ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರತಿ ವೇದಿಕೆ ಯಲ್ಲಿಯೂ ಕಾಶ್ಮೀರ ವಿಷಯವನ್ನು ಪ್ರಸ್ತಾ ಪಿಸುವ ಮೂಲಕ ಇಲ್ಲದ ವಿವಾದವನ್ನು ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
*
ಹೇಗೆ ಅಭಿವೃದ್ಧಿಯಾಗಬೇಕು ಎಂಬ ಬಗ್ಗೆಯಾಗಲಿ, ಅಲ್ಲಿನ ಜನರ ಬಗ್ಗೆ ಯಾಗಲಿ ಪಾಕಿಸ್ತಾನ ಯೋಚಿಸುತ್ತಿಲ್ಲ. ಬದಲಿಗೆ ಪ್ರತಿ ಸಂದರ್ಭದಲ್ಲಿಯೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತದೆ.
– ಸುಮಿತ್ರಾ ಮಹಾಜನ್‌
ಲೋಕಸಭಾ ಸ್ಪೀಕರ್‌
*
‘ಯುದ್ಧಕ್ಕೆ ಪಾಕಿಸ್ತಾನ ಸಿದ್ಧ’
ಇಸ್ಲಾಮಾಬಾದ್‌ (ಪಿಟಿಐ):
  ಕ್ಷಿಪ್ರ ಅಥವಾ ದೀರ್ಘ ಸಂಘರ್ಷಕ್ಕೆ ಸಿದ್ಧ. ಭಾರತದ ನಾಯಕರು ಯುದ್ಧೋ ನ್ಮಾದವನ್ನು ಅಪ್ಪಿಕೊಂಡರೆ ಆ ದೇಶ ಭಾರಿ ನಷ್ಟ ಅನುಭವಿಸುವಂತೆ ಮಾಡಲಾಗುವುದು ಎಂದು ಪಾಕಿ ಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ನಡೆಯ ಬಹುದಾದ ಕ್ಷಿಪ್ರ ಮತ್ತು ಕಿರು ಯುದ್ಧಕ್ಕೆ ಭಾರತ ಸನ್ನದ್ಧವಾಗಿದೆ ಎಂದು ಇತ್ತೀ ಚೆಗೆ ಸೇನಾ ಮುಖ್ಯಸ್ಥ ಜ. ದಲ್ಬೀರ್‌ ಸಿಂಗ್‌ ಅವರು ಹೇಳಿದ್ದರು. ಪಾಕಿಸ್ತಾನ ಶಾಂತಿಯಲ್ಲಿ ನಂಬಿಕೆ ಇರಿಸಿದೆ. ಆದರೆ ಯಾವುದೇ ಆಕ್ರಮಣಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ತಿಳಿದಿದೆ ಎಂದು ಆಸಿಫ್‌ ಹೇಳಿದ್ದಾರೆ.

ಭಾರತವು ಕಿರು ಯುದ್ಧಕ್ಕೆ ಮುಂದಾದರೆ ಅದಕ್ಕೆ ತಕ್ಕ ಉತ್ತರ ನೀಡಲು ಪಾಕಿಸ್ತಾನ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಹಿಂದಿನ ಯುದ್ಧ ಗಳ ಬಗ್ಗೆ ಮಾತನಾಡಿದ ಅವರು, 1965ರಲ್ಲಿ ಭಾರತದ ಯೋಜನೆ ಗಳನ್ನು ಪಾಕಿಸ್ತಾನದ ಸೇನಾಪಡೆ ಬುಡ ಮೇಲು ಮಾಡಿದೆ ಎಂದು ಹೇಳಿದರು.

1965ರಲ್ಲಿ ಲಾಹೋರ್‌ ನಗರವನ್ನು ವಶಪಡಿಸಿಕೊಳ್ಳಲು ಭಾರತ ಬಯಸಿತ್ತು. ಆದರೆ ಆಗ ಅದಕ್ಕೆ ಪಾಕಿಸ್ತಾನದ ಸೇನೆ ಅವಕಾಶ ನೀಡಲಿಲ್ಲ. 50 ವರ್ಷಗಳ ನಂತರ ಈಗ ಪಾಕಿಸ್ತಾನ ಸೇನೆ ಹೆಚ್ಚು ವೃತ್ತಿಪರ ಮತ್ತು ಅನುಭವಿಯಾಗಿದೆ ಎಂದು ಆಸಿಫ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT