ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ‘ಲಾಸ್ಟ್ ಬಸ್’ ತೆರೆಗೆ

ಪಂಚರಂಗಿ
Last Updated 29 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಗೋಲ್ಸ್ ಅಂಡ್ ಡ್ರೀಮ್ಸ್ ಲಾಂಛನದಲ್ಲಿ ಬಿ.ಕೃಷ್ಣಪ್ಪ, ಗುರುರಾಜ್ ಕುಲಕರ್ಣಿ, ಜಿ.ಎನ್.ಸಿ ರೆಡ್ಡಿ, ಪ್ರಶಾಂತ್ ಕಲ್ಲೂರ್ ಹಾಗೂ ಎಸ್.ಡಿ.ಅರವಿಂದ್ ನಿರ್ಮಿಸಿರುವ ‘ಲಾಸ್ಟ್ ಬಸ್' ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ.

ಎಸ್.ಡಿ.ಅರವಿಂದ್ ನಿರ್ದೇಶನದ ಈ ಚಿತ್ರಕ್ಕೆ ಅನಂತ್ ಅರಸ್ ಅವರ ಛಾಯಾಗ್ರಹಣವಿದೆ. ಕ್ರೇಜಿ ಮೈಂಡ್ಸ್ ಸಂಕಲನ, ಎಸ್.ಡಿ.ಅರವಿಂದ್ ಸಂಗೀತ ನಿರ್ದೇಶನ ಹಾಗೂ ಸ್ಟೀಫನ್‌ ಪ್ರಯೋಗ್ ಹಿನ್ನಲೆ ಸಂಗೀತವಿರುವ ಈ ಚಿತ್ರಕ್ಕೆ ರವಿಕುಮಾರ್, ಎಸ್.ಪಿ.ಮಹೇಶ್ ಹಾಗೂ ಎಸ್.ಡಿ.ಅರವಿಂದ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಅವಿನಾಶ್ ನರಸಿಂಹರಾಜು, ಮಾನಸ ಜೋಶಿ, ಮೇಘಶ್ರೀ ಭಾಗವತರ್, ಸಮರ್ಥ್ ನರಸಿಂಹರಾಜು, ಸುಧಾ ನರಸಿಂಹರಾಜು, ರಾಕ ಶಂಕರ್, ಲೋಕೇಶ್ ಆಚಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT