ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ರೆಡ್ಡಿಗೆ ಮತ್ತೆ ಜಾಮೀನು ನಿರಾಕರಣೆ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಗಣಿಗಾರಿಕೆ ಆರೋ­ಪದ ಮೇಲೆ ಬಂಧಿತರಾಗಿರುವ ರಾಜ್ಯದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ಪುನಃ  ನಿರಾಕರಿಸಿತು.     

 ಜನಾರ್ದನರೆಡ್ಡಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್‌.ಎಲ್‌. ದತ್ತು ನೇತೃತ್ವದ ತ್ರಿಸದಸ್ಯ  ಪೀಠವು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.

ಅಕ್ರಮ ಗಣಿಗಾರಿಕೆ ಆರೋಪ ಎದು­ರಿ­ಸುತ್ತಿರುವ ‘ಓಬಳಾಪುರಂ ಮೈನಿಂಗ್‌ ಕಂಪೆನಿ’(ಒಎಂಸಿ) ಪ್ರಕ­ರ­ಣದಲ್ಲಿ ಜಾಮೀನು ಕೊಡ­ಬೇ­ಕೆಂದು ಅರ್ಜಿದಾ­ರರ ಪರ ವಕೀಲ ಸುಶೀಲ್‌ ಕುಮಾರ್‌ ಮನವಿ ಮಾಡಿ­ದರು. ಈ ಪ್ರಕರಣದ ವಿಚಾ­ರಣೆ 6 ತಿಂಗ­ಳೊಳಗೆ ಮುಗಿ­ಯ­­ದಿ­ದ್ದರೆ ಅರ್ಜಿ­ದಾರರು ಜಾಮೀನು ಅರ್ಜಿ ಸಲ್ಲಿಸಬ­ಹುದು ಎಂದು ಪೀಠ ತಿಳಿಸಿತು.

ಜನಾರ್ದನರೆಡ್ಡಿ ಅವರ ಮೇಲಿರುವ ಇನ್ನೂ ಐದು ಪ್ರಕರಣಗಳಲ್ಲಿ ಮಾಡ­ಲಾಗಿರುವ ಆರೋಪಗಳು ಹೆಚ್ಚುಕಡಿಮೆ ಒಂದೇ ಸ್ವರೂಪದ್ದಾಗಿವೆ. ಎಲ್ಲ ಪ್ರಕರಣ­ಗಳ ನಡುವೆ ಸಂಬಂಧ­ವಿರುವುದರಿಂದ ಜಾಮೀನು ಕೊಡಬೇಕೆಂದು ಸುಶೀಲ್‌ ಕುಮಾರ್‌ ವಾದಿಸಿದರು.
ಈ ವಾದ ಆಲಿ­ಸಿದ ನ್ಯಾಯಪೀಠ ಆರೋ­ಪಿಗೆ ಜಾಮೀನು ಕೊಡಲು ಸಾಧ್ಯವಿಲ್ಲ ಎಂದು ಖಚಿತವಾಗಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT