ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಮೋದಿ

Last Updated 3 ಸೆಪ್ಟೆಂಬರ್ 2014, 11:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ಜಪಾನ್‌ ಪ್ರವಾಸ ಮುಗಿಸಿ ಬುಧವಾರ ಮಧ್ಯಾಹ್ನ ನವದೆಹಲಿಗೆ ಬಂದಿಳಿದಿದ್ದಾರೆ.

  ಸ್ಮಾರ್ಟ್‌ ಸಿಟಿ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಬುಲೆಟ್‌ ರೈಲು ಸೇರಿದಂತೆ ವಿವಿಧ ಯೋಜನೆ­ಗಳಲ್ಲಿ  ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 35 ಶತಕೋಟಿ ಡಾಲರ್‌­ಗಳಷ್ಟು (ರೂ 2.05 ಲಕ್ಷ ಕೋಟಿ)  ಹೂಡಿಕೆ ಮಾಡಲು ಜಪಾನ್‌ ಸಹಮತ ವ್ಯಕ್ತಪಡಿಸಿದೆ.

ತಮ್ಮ ಐದು ದಿನಗಳ ಜಪಾನ್‌ ಭೇಟಿಯನ್ನು ಅತ್ಯಂತ ಯಶಸ್ವಿ ಎಂದು ಮೋದಿ ಬಣ್ಣಿಸಿದ್ದಾರೆ. ವಾರಾಣ­ಸಿಯನ್ನು ಜಪಾನಿನ ಸಾಂಸ್ಕೃತಿಕ ನಗರಿ ಕ್ಯೋಟೊ­ದಂತೆಯೇ ಅಭಿವೃದ್ಧಿಪಡಿಸಲಾ­ಗುವುದು ಎಂದು ಅವರು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 
  
ರಕ್ಷಣಾ ತಂತ್ರಜ್ಞಾನ ವಿನಿಮಯ, ಶುದ್ಧ ಇಂಧನ ಅಭಿವೃದ್ಧಿ, ಹೆದ್ದಾರಿ ನವೀಕರಣ, ಆರೋಗ್ಯ ಸೇವೆ, ಮತ್ತು ಮಹಿಳಾ ಸಬಲೀಕರಣ ರಂಗಗಳಲ್ಲಿ ಪರಸ್ಪರ ಸಹಕಾರ ನೀಡಲು ಉಭಯ ದೇಶಗಳು ಐದು ಅಂಶಗಳ ಒಪ್ಪಂದ ಮಾಡಿಕೊಂಡಿವೆ.

1998ರ ಅಣ್ವಸ್ತ್ರ ಪರೀಕ್ಷೆಯ ನಂತರ ಎಚ್‌ಎಎಲ್‌ ಸೇರಿದಂತೆ ಭಾರತದ ಐದು ಪ್ರಮುಖ ಕಂಪೆನಿಗಳ ಮೇಲೆ  ಹೇರಿದ್ದ ನಿರ್ಬಂಧ­ವನ್ನು ಜಪಾನ್‌ ತೆರವುಗೊಳಿಸಿದೆ.

ಜಪಾನಿನ ಹೂಡಿಕೆದಾರರಿಗೆ ರತ್ನಗಂಬಳಿ ಸ್ವಾಗತ ನೀಡಿರುವ ಮೋದಿ ಅವರು, ಭಾರತದಲ್ಲಿ ಈಗ ವಿಳಂಬ ಗತಿಯ (ರೆಡ್‌ ಟೇಪ್‌) ಅಧ್ಯಾಯ ಮುಕ್ತಾಯಗೊಂಡಿದ್ದು, ಉದ್ಯಮಕ್ಕೆ ಪೂರಕವಾದ ಮುಕ್ತ ಯುಗ (ರೆಡ್‌ ಕಾರ್ಪೆಟ್‌) ಆರಂಭವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT